ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಗೆಲುವು ಸಮ್ಮಿಶ್ರ ಸರ್ಕಾರದ ಸುಭದ್ರತೆಗೆ ಸಾಕ್ಷಿ: ಪರಮೇಶ್ವರ

|
Google Oneindia Kannada News

ಬೆಂಗಳೂರು, ಸೆ.28: ಬಿಬಿಎಂಪಿಯ ಮೇಯರ್ ಆಗಿ ಕಾಂಗ್ರೆಸ್ ಹಾಗೂ ಉಪಮೇಯರ್ ಆಗಿ ಜೆಡಿಎಸ್ ಅಭ್ಯರ್ಥಿಯ ಗೆಲುವು ರಾಜ್ಯ ಸಮ್ಮಿಶ್ರ ಸರಕಾರ ಸದೃಢವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.‌

ಬಿಬಿಎಂಪಿ ಚುನಾವಣೆ LIVE: ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ ಬಿಬಿಎಂಪಿ ಚುನಾವಣೆ LIVE: ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ

ಮೇಯರ್ ಆಗಿ ಆಯ್ಕೆಯಾದ ಗಂಗಾಂಬಿಕ ಮಲ್ಲಿಕಾರ್ಜುನ್ ಹಾಗೂ ಉಪಮೇಯರ್ ರಮೀಳಾ ಉಮಾಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಬಿಬಿಎಂಪಿ ಚುನಾವಣೆಯಲ್ಲಿ ಮೇಯರ್ ಗೆ 130 ಹಾಗೂ ಉಪಮೇಯರ್ ಗೆ 129 ಮತಗಳು ಪಡೆದು ಗದ್ದುಗೆ ಹಿಡಿದಿದ್ದೇವೆ. ಈ ಮೂಲಕ ಬಿಜೆಪಿಗೆ ಮುಖಭಂಗವಾಗಿದೆ ಎಂದರು.

ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ

DCM defines BBMP result witnesses collation govt has is stable

ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು! ನೂತನ ಮೇಯರ್ ಗಂಗಾಂಬಿಕೆ ಎದುರಿಸಬೇಕಾದ ಸವಾಲುಗಳಿವು!

ಪಕ್ಷೇತರ ಅಭ್ಯರ್ಥಿಗಳನ್ನು ಹೈಜಾಕ್ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡಿದರೂ ಕಾಂಗ್ರೆಸ್‌ ಜೆಡಿಎಸ್ ಗೆ ಗೆಲುವು ಸಿಕ್ಕಿದೆ. ಬಿಜೆಪಿ ಬಿಬಿಎಂಪಿಯಲ್ಲೂ ಆಪರೇಷನ್ ಕಮಲ ಮಾಡಲು ಹೋಗಿ ಮಣ್ಣುಮುಕ್ಕಿದೆ ಇದರಲ್ಲಿ ಕಾಂಗ್ರೆಸ್, ಜೆಡಿಎಸ್ ಬಲ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಂತಾಯಿತು. ಇದಕ್ಕೆ ಯಾವುದೇ ಪೊಲೀಸ್ ಫೋರ್ಸ್‌ನನ್ನೂ ಬಳಸಿಲ್ಲ. ಬಿಜೆಪಿಯ ಆರೋಪದಲ್ಲಿ ಹುರುಳಿಲ್ಲ ಎಂದರು.

English summary
Deputy chief minister Dr.G.Parameshwara has defined as the BBMP mayor post won by the Congress and JDS alliance was the witness for the collation governments' stability.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X