• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ಐಕಿಯಾ ಕೇಂದ್ರ ಸ್ಥಾಪನೆಗೆ ಸಹಕಾರ: ಡಿಸಿಎಂ ಭರವಸೆ

|

ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಪ್ರತಿಷ್ಠಿತ ಪೀಠೋಪಕರಣ ಸಂಸ್ಥೆ ಐಕಿಯಾ ನಿರ್ಮಿಸಲಾಗುತ್ತಿರುವ ಕೇಂದ್ರಕ್ಕೆ ಬಿಬಿಎಂಪಿಯಿಂದ ಶೀಘ್ರ ಅನುಮತಿ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಭರವಸೆ ನೀಡಿದ್ದಾರೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ: ಜಿ ಪರಮೇಶ್ವರ

ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ 'ಐಕ್ಯಾ ಶಾಪ್' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತ್ಯಂತ ಪ್ರತಿಷ್ಠಿತ ಕಂಪನಿಯಾದ ಐಕಿಯಾ ಬೆಂಗಳೂರಿನಲ್ಲಿ ಕೇಂದ್ರ ತೆರೆಯುತ್ತಿರುವುದು ಶ್ಲಾಘನೀಯವಾದದ್ದು, ಕೇಂದ್ರ ನಿರ್ಮಾಣಕ್ಕೆ ಬಿಬಿಎಂಪಿ ವತಿಯಿಂದ ಶೀಘ್ರವೇ ಅನುಮತಿ ಕೊಡಿಸಲಾಗುವುದು ಎಂದರು.

ಪರಮೇಶ್ವರ್ ಖಾತೆ ಮೇಲೆ ರಾಮಲಿಂಗಾ ರೆಡ್ಡಿ ಕಣ್ಣು, ಯಾರಿಗೆ ಒಲಿಯಲಿದೆ ಜಯ?

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ.‌ ಈ ಹಿಂದೆ ಮೆಟ್ರೋ ಶಾಪ್ ತೆರೆಯುವ ಸಂದರ್ಭದಲ್ಲೂ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಇಂದು ಬಹುತೇಕರು ಏನೇ ಖರೀದಿಗೂ ಅಲ್ಲಿಗೇ ತೆರಳುತ್ತಾರೆ. ಐಕಿಯಾ ಕೂಡ ಹೊಸದಾಗಿ ಬೆಂಗಳೂರಿನಲ್ಲಿ ಶಾಪ್ ತೆರೆಯುತ್ತಿದ್ದು, 7 ಸಾವಿರ ಬಗೆಯ ವಸ್ತುಗಳು ಇಲ್ಲಿ ಲಭ್ಯವಿರಲಿದೆ ಎಂದು ಹೇಳಿದರು.

ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿಯೇ 5 ಲಕ್ಷ ಚದರ ಕಿ.ಮೀ. ನಲ್ಲಿ ಶಾಪ್ ನಿರ್ಮಿಸಲಾಗುತ್ತಿದ್ದು, 2020ಕ್ಕೆ ಕಾಮಗಾರಿ ಪೂರ್ಣಗೊಂಡು ಖರೀದಿಗೆ ಮುಕ್ತವಾಗಲಿದೆ.‌ಈ ಶಾಪ್‌ಗೆ ಬಿಬಿಎಂಪಿಯಿಂದ ಅನುಮತಿ ಸಿಗಬೇಕಿದ್ದು, ಶೀಘ್ರವೇ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ‌ ಸಚಿವ ಕೆ.ಜೆ.‌ಜಾರ್ಜ್, ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.

English summary
Deputy chief minister Dr.G. Parameshwar has assured that the BBMP will ensure building permission to construct building for IKEA center in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X