ಡಿಸಿಗಳಿಗೂ ಗ್ರಾಮ ವಾಸ್ತವ್ಯ ಕಡ್ಡಾಯ: ಡಿಸಿಎಂ ಪರಮೇಶ್ವರ

Recommended Video

      ಡಿಸಿಗಳಿಗೂ ಗ್ರಾಮ ವಾಸ್ತವ್ಯ ಕಡ್ಡಾಯ: ಡಿಸಿಎಂ ಪರಮೇಶ್ವರ | Oneindia Kannada

      ಬೆಂಗಳೂರು, ನವೆಂಬರ್ 27: ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯವನ್ನು ಕಡ್ಡಾಯವಾಗಿ ಮಾಡಲೇ ಬೇಕು ಎಂದು ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ತಾಕೀತು ಮಾಡಿದ್ದಾರೆ.

      ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿರುವ ಕಾರಣ ಅಲ್ಲಿನ ಮೂಲಸೌಕರ್ಯ, ಬೆಳೆಗಳಿಗೆ ಧಕ್ಕೆ ಉಂಟಾಗಿದೆ. ಅವರ ಸಮಸ್ಯೆಗಳ ಕುರಿತು ಆಲಿಸಲು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸಲೇಬೇಕು ಎಂದು ಹೇಳಿದರು.

      ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು, ಸಚಿವರ ನಡುವೆ ನಡೆದ ಬರ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

      DCM asks DCs to stay at villages often

      ಕೊಡಗು‌ನೆರೆ ಸ್ಥಿತಿಯಿಂದ ಒಟ್ಟು 4 ಸಾವಿರ ಕೋಟಿ‌ ನಷ್ಟ ಉಂಟಾಗಿದೆ. ಇದರಲ್ಲಿ 546 ಕೋಟಿ ರು. ಮಾತ್ರ ಕೇಂದ್ರ ನೀಡಿದೆ. ಪ್ರಸ್ತುತ ರಾಜ್ಯದಲ್ಲಿ 100 ತಾಲೂಕು ಬರಗಾಲ ಎಂದು ಘೋಷಿಸಲಾಗಿದೆ. ಇನ್ನು ಕೆಲ ತಾಲೂಕು ಬರಗಾಲಕ್ಕೆ ಸೇರಲಿದೆ. ಹೀಗಾಗಿ ಡಿಸಿಗಳು ಸಮರ್ಪಕವಾಗಿ ನಿಭಾಯಿಸಿ ಎಂದು ಸಲಹೆ ನೀಡಿದರು.

      ಜನಸಾಮಾನ್ಯರು ವಿಧಾನಸೌಧಕ್ಕೇ ಬರುವುದನ್ನು ತಪ್ಪಿಸಿ ಡಿಸಿಗಳೇ ಅವರ ಸಮಸ್ಯೆ ಆಲಿಸುವಂತೆ ಸೂಚಿಸಿದ್ದೆವು. ಜೊತೆಗೆ ಪ್ರತಿ ತಿಂಗಳು ಗ್ರಾಮ ವಾಸ್ತವ್ಯ ಹೂಡುವಂತೆಯೂ ಹೇಳಲಾಗಿತ್ತು.‌ಈ ಎಲ್ಲವೂ ಸಭೆಯಲ್ಲಿ ಮಾಹಿತಿ ಪಡೆಯಲಾಗುವುದು ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+