ದಸರಾ ಹಬ್ಬ: ಬೆಂಗಳೂರು-ಮೈಸೂರು ರೈಲು ಮಾರ್ಗದ ಪ್ರಯಾಣಿಕರಿಗೆ SWR ಗುಡ್‌ನ್ಯೂಸ್
ಬೆಂಗಳೂರು, ಸೆಪ್ಟಂಬರ್ 30: ರಾಜ್ಯಾದ್ಯಂತ ದಸರಾ ಹಬ್ಬದ ಪ್ರಯುಕ್ತ ಜನ ಸಂಚಾರ ಓಡಾಟ, ದಟ್ಟಣೆ ಹೆಚ್ಚಿರುತ್ತದೆ. ಈ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚಿನ ಬೇಡಿಕೆಯನ್ನು ಮನಗಂಡು ನೈಋತ್ಯ ರೈಲ್ವೆ (SWR) ಬೆಂಗಳೂರು ವಿಭಾಗವು ವಿಶೇಷ ರೈಲುಗಳನ್ನು ಸಂಚಾರಕ್ಕೆ ಬಿಡಲು ನಿರ್ಧರಿಸಿದೆ. ಬೆಂಗಳೂರು-ಮೈಸೂರು-ಬೆಂಗಳೂರು ಮಾರ್ಗದಲ್ಲಿ MEMU ಸ್ಪೆಷಲ್ ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತದೆ. ಅಕ್ಟೋಬರ್ 2ರವರೆಗೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಬೆಂಗಳೂರು-ಮೈಸೂರು ಸ್ಪೆಷಲ್ ರೈಲು (06287) ಸೆಪ್ಟೆಂಬರ್ 27ರಿಂದ ಕಾರ್ಯಾಚರಣೆ ಆರಂಭಿಸಿದ್ದು, ಅಕ್ಟೋಬರ್ 2ರ ವರೆಗೆ ಪ್ರತಿದಿನ ಸಂಜೆ 7.45ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣದಿಂದ ಹೊರಡಲಿದೆ. ಅದೇ ದಿನ ರಾತ್ರಿ 10.40ಕ್ಕೆ ಮೈಸೂರು ತಲುಪಲಿದೆ. ಈ ರೈಲು ಮಧ್ಯದಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಬೈಯದ್ರಹಳ್ಳಿ, ಚಂದ್ರಗಿರಿ ಕಪ್ಪಲ್ ಹಾಲ್ಟ್, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ಮೈಸೂರು-ಬೆಂಗಳೂರು ಸ್ಪೆಷಲ್ ರೈಲು
ಈ 06288 ಸಂಖ್ಯೆಯ ಮೈಸೂರು-ಬೆಂಗಳೂರು ವಿಶೇಷ ರೈಲು ಅಕ್ಟೋಬರ್ 2ರವರೆಗೆ ಪ್ರತಿದಿನ ರಾತ್ರಿ 10.55ಕ್ಕೆ ಮೈಸೂರು ನಿಲ್ದಾಣದಿಂದ ಹೊರಡಲಿದೆ. ಮುಂದಿನ ದಿನ ಬೆಳಗ್ಗೆ 3.30ಕ್ಕೆ ಯಶವಂತಪುರ ಸಮೀಪದ ಸ್ಮಿಟ್ ಬೆಂಗಳೂರು ನಿಲ್ದಾಣ ತಲುಪಲಿದೆ. ಮಧ್ಯದಲ್ಲಿ ನಾಗನಹಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಚಂದ್ರಗಿರಿ ಕಪ್ಪಲ್ ಹಾಲ್ಟ್, ಬೈಯದ್ರಹಳ್ಳಿ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಪ್ರಯಾಣಿಕರಿಗೆ ಅನುಕೂಲವಾಗಲೆಂದು ದಸರಾ ಹಬ್ಬದ ದಿನಗಳಲ್ಲಿ ಪ್ರಯಾಣಿಕರ ಭಾರೀ ಓಡಾಟವನ್ನು ನಿಭಾಯಿಸಲು ಈ ವಿಶೇಷ ರೈಲು ಸೇವೆಗಳನ್ನು ಸಂಚಾರಕ್ಕೆ ತರಲಾಗಿದೆ ಎಂದು ಬೆಂಗಳೂರು ವಿಭಾಗ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ದಸರಾ ಪ್ರಯುಕ್ತ ಯಾರೆಲ್ಲ ರಾಜಧಾನಿಯಿಂದ ಸಾಂಸ್ಕೃತಿಕ ರಾಜಧಾನಿವರೆಗೆ ಪ್ರಯಾಣಿಸುವವರು ಮುಂಗಾಡ ಬುಕ್ ಮಾಡಿಕೊಂಡು ಸಂಚಾರ ಮಾಡಬಹುದು.
ಕೇವಲ ಬೆಂಗಳೂರು-ಮೈಸೂರು ಮಾತ್ರವಲ್ಲದೇ ಬೆಂಗಳೂರು, ಬೀದರ್, ಬೆಂಗಳೂರು ಬೆಳಗಾವಿ, ಮೈಸೂರು ಬೆಳಗಾವಿ ಹೀಗೆ ಅನೇಕ ಮಾರ್ಗಗಳಲ್ಲಿ ರೈಲು ಬಿಡಲಾಗಿದೆ. ಕೆಲವು ಮಾರ್ಗಗಳಲ್ಲಿ ದಸರಾ ಹಾಗೂ ದೀಪಾವಳಿ ಪ್ರಯುಕ್ತ ಡಿಸೆಂಬರ್‌ವರೆಗೂ ವಿಶೇಷ ರೈಲುಗಳು ಸಂಚಾರ ಮಾಡಲಿವೆ.












Click it and Unblock the Notifications