ಪೊಲೀಸರ ಮುಂದೆ ದರ್ಶನ್ ಹೇಳುತ್ತಿರುವುದು ಏನು? ಕಾಡುತ್ತಿದೆಯಾ ಪಶ್ಚಾತ್ತಾಪ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಈಡಾಗಿರುವ ನಟ ದರ್ಶನ್ ಮನಸ್ಥಿತಿ ಬದಲಾಂತೆ ಕಂಡು ಬರುತ್ತಿದೆ. ಬಂಧನವಾದಗ ಹಾಗೂ ಈಗ ಅವರ ಮನಸ್ಥಿತಿ ತುಂಬ ಬದಲಾವಣೆ ಆಗಿದ್ದು, ಪಶ್ಚಾತಾಪದ ಮಾತುಗಳನ್ನು ಆಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಪೊಲೀಸರು, ಬಂಧಿತರನ್ನು ಕರೆದುಕೊಂಡು ಹೋಗಿದ್ದರು. ದರ್ಶನ್‌ರನ್ನು ಕರೆದುಕೊಂಡು ಹೋಗಲಾಗಿತ್ತು. ಅಲಿಂದ ಬಂದ ಮೇಲೆ ಅವರ ಮನಸ್ಥಿತಿ ಬದಲಾಗಿದ್ದು, ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾಡುತ್ತಿದೆಯಾ ಪಶ್ಚಾತ್ತಾಪ
ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ಪಶ್ಚಾತ್ತಾಪವನ್ನು ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ತನ್ನೊಂದಿಗೆ ಬೇರೆಯವರ ಜೀವನವನ್ನೂ ಹಾಳು ಮಾಡಿದೆ ಎಂದು ಹೇಳುತ್ತಿದ್ದಾರಂತೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ದರ್ಶನ್, ನಾನು ಶೆಡ್ ನಿಂದ ಹೊರ ಬಂದ ಮೇಲೆ ಹೀಗೆಲ್ಲಾ ಆಗಿದೆ. ಇದಕ್ಕೂ ನನಗೂ ಏನು ಸಂಬಂಧನೇ ಇಲ್ಲ ಎಂಬುದನ್ನು ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದರ್ಶನ್ ನೀಡಿರುವ ಹೇಳಿಕೆಯಲ್ಲಿ ನಾನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಮಧ್ಯ ಸೇವಿಸ್ತಾ ಇದ್ದೆ. ಅಲ್ಲಿಗೆ ಪವನ್ ಬಂದು ರೇಣುಕಾಸ್ವಾಮಿನ್ನು ಕರೆದುಕೊಂಡು ಬಂದಿರುವುದಾಗಿ ತಿಳಿಸಿದ.
ದರ್ಶನ್ ಹೇಳ್ತಾ ಇರುವುದು ಏನು?
ನಾನು ಮನೆಗೆ ಹೋಗಿ ಪವಿತ್ರಾಳನ್ನು ಕರೆದುಕೊಂಡು ಶೆಡ್ಡಗೆ ಹೋದೆ. ಕೊಲೆ ಮಾಡುವ ಉದ್ದೇಶ ನನ್ನದಿರಲಿಲ್ಲ. ಅವನಿಂದ ಕ್ಷಮೆ ಕೇಳಿಸಿ ಕಳಿಸಿದರೆ ಸಾಕು ಎಂದು ಅಂದುಕೊಂಡಿದ್ವಿ. ಶೆಡ್‌ನಲ್ಲಿ ನಮ್ಮನ್ನು ನೋಡ್ತಾ ಇದ್ದಂತೆ ರೇಣುಕಾಸ್ವಾಮಿ ತಪ್ಪಾಯಿತು ಕ್ಷಮಿಸಿ ಎಂದು ಕೇಳಿಕೊಂಡ. ಅವನಿಗೆ ಬುದ್ಧಿ ಹೇಳಿ ದುಡ್ಡು ಕೊಟ್ಟು ಊರಿಗೆ ಹೋಗು ಎಂದು ಹೇಳಿದೆ. ನಾನು ಶೆಡ್ಡನಿಂದ ಹೊರ ಬಂದ ಮೇಲೆ ಇವ್ರೆಲ್ಲಾ ಸೇರಿ ಹೀಗೆ ಮಾಡಿ ತಲೆಗೆ ತಂದಿದ್ದಾರೆ ಎಂದು ದರ್ಶನ್ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಅಧಿಕಾರಿಗಳು ಪ್ರಕರಣವನ್ನು ತನಿಖೆ ಮಾಡುತ್ತಿರುವುದ ರೀತಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ.












Click it and Unblock the Notifications