ಜೈಲಲ್ಲಿರುವ ದರ್ಶನ್‌ಗೆ ಟಿವಿ ಭಾಗ್ಯ: ರೇಣುಕಾಸ್ವಾಮಿ ಪೋಷಕರಿಗೆ ಕೋರ್ಟ್ ಸಮನ್ಸ್: ಆರೋಪಿಗೆ ಜಾಮೀನು

ಬೆಂಗಳೂರು, ಡಿಸೆಂಬರ್ 04: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಪ್ರಕರಣದ ವಿಚಾರಣೆಯಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿವೆ. ಇಂದಿನ ಕೋರ್ಟ್ ವಿಚಾರಣೆ ವೇಳೆ ದರ್ಶನ್ ಗೆ ಟಿವಿ ನೋಡುವ ಅವಕಾಶ ಮಾಡಿಕೊಡಲಾಗಿದೆ. ರೇಣುಕಾಸ್ವಾಮಿ ತಂದೆ, ತಾಯಿಗೆ ಸಮನ್ಸ್ ನೋಡಿರುವ ಕೋರ್ಟ್, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಪ್ರಮುಖ ಆರೋಪಿಗೆ ಮಧ್ಯಂತರ ಜಾಮೀನು ಸಹ ನೀಡಲಾಗಿದೆ.

ಹೌದು, ನಟ ದರ್ಶನ್ ತೂಗುದೀಪ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅವರಿಗೆ ಟಿವಿ ನೋಡಲು ಅವಕಾಶ ಮಾಡಿಕೊಟ್ಟಿದೆ. ಅವರ ಬ್ಯಾರಕ್‌ನಲ್ಲಿ ಟಿವಿ ಅಳವಡಿಕೆ ಆಗಲಿದೆ. ಪ್ರಕರಣ ವಿಚಾರಣೆಯು ಮುಂದುವರಿಯಲಿದ್ದು, ರೇಣುಕಾಸ್ವಾಮಿ ತಂದೆ-ತಾಯಿಗೆ ನೋಟಿಸ್ ಜಾರಿ ಮಾಡಿರುವ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.

Darshan allowed TV access in Jail Court Issued summons to Renuka Swamy Parents for this reason

ಬೆಡ್, ಬೆಡ್ ಶೀಟ್, ದಿಂಬು ಕೇಳಿದ್ದ ದರ್ಶನ್‌ಗೆ ಜೈಲಿನಲ್ಲಿ ಓಡಾಡುವುದು, ಷರತ್ತು ಅನ್ವಯ ಒಂದಷ್ಟು ಸೌಲಭ್ಯಗಳನ್ನು ಕೋರ್ಟ್ ಒದಗಿಸಿತ್ತು. ಇದೀಗ ಟಿವಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ. ಮುಖ್ಯವಾಗಿ ರೇಣುಕಾಸ್ವಾಮಿ ತಂದೆ, ತಾಯಿ ಅವರನ್ನು ಪ್ರಕರಣ ಪರೋಕ್ಷ ಸಾಕ್ಷಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ಡಿಸೆಂಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಆರೋಪಿಗೆ ಜಾಮೀನು ಜಾರಿ

ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಏಳನೇ ಆರೋಪಿ ಪ್ರದೂಷ್‌ಗೆ ಕೋರ್ಟ್ ಇಂದು ಮತ್ತೊಮ್ಮೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ. ಈ ಹಿಂದೆ ಆರೋಪಿ ಪ್ರದೂಷ್ ತಂದೆ ನಿಧನವಾದ ಸಂದರ್ಭದಲ್ಲಿ ಮಧ್ಯಂತರ ಜಾಮೀನು ನೀಡಲಾಗಿತ್ತು. ಇದೀಗ ಅವರ ತಂದೆ ಕಾರ್ಯ ನೆರವೇರಿಸಲು ಅನುಕೂಲವಾಗುವಂತೆ ನಾಲ್ಕು ದಿನಗಳ ವರೆಗೆ ಅಂದರೆ ಡಿಸೆಂಬರ್ 07ರವರೆಗೆ ಮತ್ತೆ ಮಧ್ಯಂತರ ಜಾಮೀನು ನೀಡಿದೆ.

ಡಿ. 17ರಿಂದ ದರ್ಶನ್ ಕೇಸ್ ಕೋರ್ಟ್ ವಿಚಾರಣೆ

ಬೆಂಗಳೂರಿನ 57ನೇ ಸಿಎಚ್ ಕೋರ್ಟ್‌ನಲ್ಲಿ ಇದೇ ಡಿಸೆಂಬರ್ 17ರಿಂದ ದರ್ಶನ್ ಪ್ರಕರಣದ ವಿಚಾರಣೆ ಹಂತ ಹಂತವಾಗಿ ನಡೆಯಲಿದೆ. ಎಲ್ಲ ಪ್ರಮುಖ ಸಾಕ್ಷ್ಯಗಳನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ಈ ವೇಳೆ ಮೃತ ರೇಣುಕಾಸ್ವಾಮಿ ತಂದೆ ತಾಯಿಗಳು ಸಾಕ್ಷಿ ಹೇಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+