ಸತ್ಯಂ, ಶಿವಂ & ಸುಂದರಂ ‘ಐಕ್ಯಂ’ ಪ್ರದರ್ಶನ!
ಬೆಂಗಳೂರು: ಒಡಿಸ್ಸಿ ನೃತ್ಯ ಪ್ರಕಾರದ ದಂತಕತೆ ಗುರು ಕೇಲುಚರಣ್ ಮೊಹಪಾತ್ರ ಅವರ ಪರಂಪರೆ ಸ್ಮರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮಹತ್ವದ ಕಾರ್ಯಕ್ರಮವನ್ನ ಈಗ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್ ವತಿಯಿಂದ ಏಪ್ರಿಲ್ 7ರ ಸಂಜೆ 6 ಗಂಟೆಗೆ ಮಲ್ಲೇಶ್ವರಂನ ಸೇವಾ ಸದನದಲ್ಲಿ 'ಪ್ರವಾಹ್ ನೃತ್ಯ ಉತ್ಸವ' ಅಥವಾ ಪ್ರವಾಹ್ ಡಾನ್ಸ್ ಫೆಸ್ಟಿವಲ್ ಆಯೋಜನೆ ಮಾಡಲಾಗಿದೆ.
ಸಂಜಲಿ ಸೆಂಟರ್ ಫಾರ್ ಒಡಿಸ್ಸಿ ಡ್ಯಾನ್ಸ್ ಆಯೋಜಿಸಿರುವ ಈ 'ಪ್ರವಾಹ್ ನೃತ್ಯ ಉತ್ಸವ' ಗುರು ಕೇಲುಚರಣ್ ಮೊಹಪಾತ್ರ ಅವರ ದೃಷ್ಟಿಕೋನ, ಸೃಜನಶೀಲತೆ ಹಾಗೂ ಕಲಾತ್ಮಕ ಪ್ರದರ್ಶನಗಳ ಆಚರಣೆ ಆಗಿದೆ. ಐದು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ, ಗುರು ಕೇಲುಚರಣ್ ತಮ್ಮ ಹೊಸ ಸಂಯೋಜನೆ ಮೂಲಕ ಒಡಿಸ್ಸಿ ನೃತ್ಯ ಪ್ರಕಾರವನ್ನ ಶ್ರೀಮಂತ ಹಂತಕ್ಕೆ ಕೊಂಡೊಯ್ದಿದ್ದರು. ಅವರ ವಿಶಾಲ ದೃಷ್ಟಿಕೋನ & ಕಲೆ ಮೇಲಿನ ಪ್ರೀತಿ ಅವರ ಶಿಷ್ಯ ವರ್ಗದ ಮೇಲೆ ಪ್ರಭಾವ ಬೀರಿತ್ತು.

ಒಡಿಸ್ಸಿ ನೃತ್ಯದ ಪ್ರಸ್ತುತತೆ!
ಇದೀಗ ಅವರ ಶಿಷ್ಯ ವರ್ಗ ಅನ್ವೇಷಿಸಿದ ಅಸಾಂಪ್ರದಾಯಿಕ ನೃತ್ಯ ವಿಷಯಗಳು ಆಧುನಿಕ ಯುಗದಲ್ಲಿಯೂ ಒಡಿಸ್ಸಿ ನೃತ್ಯವು ಪ್ರಸ್ತುತತೆ ಪಡೆಯುಂತೆ ಮಾಡಿದೆ. ಅದರಂತೆ ಈಗ ಗುರು ಕೇಲುಚರಣ್ ಅವ್ರು ಪ್ರಪಂಚದಾದ್ಯಂತ ತಮ್ಮ ಶಿಷ್ಯರ ಮೂಲಕವಾಗಿ ನೃತ್ಯ ಲೋಕದಲ್ಲಿ, ಇಂದಿಗು ಜೀವಂತವಾಗಿದ್ದಾರೆ. ಅವರ ಶಿಷ್ಯೆ ಆಗಿರುವ ಶರ್ಮಿಳಾ ಮುಖರ್ಜಿ ಅವರು ಕಳೆದ ಹಲವಾರು ವರ್ಷಗಳಿಂದ 'ಪ್ರವಾಹ್' ರೀತಿಯ ವಿವಿಧ ಪ್ರದರ್ಶನ ಸೇರಿ ನೃತ್ಯ ಉತ್ಸವಗಳ ಮೂಲಕ ಬೆಂಗಳೂರಲ್ಲಿ ಒಡಿಸ್ಸಿ ಪ್ರಕಾರವನ್ನು ಮುಂಚೂಣಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶರ್ಮಿಳಾ ಮುಖರ್ಜಿ ಅವರ 'ಸೀತಾಹರಣ್'
ಪ್ರಖ್ಯಾತ ಒಡಿಸ್ಸಿ ಗಾಯಕಿ ಶರ್ಮಿಳಾ ಮುಖರ್ಜಿ ಅವರು ಗುರು ಕೇಲುಚರಣ್ ಮೊಹಪಾತ್ರ ನೃತ್ಯ ಸಂಯೋಜನೆ ಮಾಡಿದ ಅಪರೂಪದ ಏಕ ವ್ಯಕ್ತಿ ತುಣುಕಾಗಿ ಇರುವ 'ಸೀತಾಹರಣ್' ಪ್ರಕಾರ ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ. ಪಂಚವಟಿಯಲ್ಲಿ ರಾಮ & ಸೀತೆ ವಾಸ್ತವ್ಯದ ಜೊತೆಗೆ ಪ್ರದರ್ಶನ ಪ್ರಾರಂಭ ಆಗುತ್ತದೆ. ಚಿನ್ನದ ಜಿಂಕೆ ವೇಷ ಧರಿಸಿರುವ ಮಾರೀಚ ಎಂಬ ರಾಕ್ಷಸನು ರಾಮನನ್ನು ಆಕರ್ಷಿಸುವಂತೆ ಮಾಡುತ್ತಾನೆ. ರಾಮನು ಆ ಚಿನ್ನದ ಜಿಂಕೆಯನ್ನ ಹಿಡಿಯಲು ಹೊರಡುತ್ತಾನೆ ಹಾಗೂ ಇದರಲ್ಲೊಂದು ಸಂಚು ಇರುವುದನ್ನು ಭಾವಿಸಿ, ಪತ್ನಿ ಸೀತೆಯನ್ನು ಕಾಯುವಂತೆ ತಮ್ಮ ಲಕ್ಷ್ಮಣನಿಗೆ ಹೇಳುತ್ತಾನೆ.

ಮಾರೀಚ ಸಾಯುವ ಸಮಯದಲ್ಲಿ...
ರಾಮನ ಬಾಣದೆಟು ತಿಂದ ಮಾರೀಚ ಸಾಯುವಾಗ ರಾಮ ನರಳಿದಂತೆ ಸ್ವರ ಎಬ್ಬಿಸುತ್ತಾನೆ ಭಯದಲ್ಲಿ ಸೀತೆ ಪತಿಯ ರಕ್ಷಿಸುವಂತೆ ತನ್ನ ಕಾಯುತ್ತಿದ್ದ, ಲಕ್ಷ್ಮಣನನ್ನು ಕೋರುವಾಗಲೆ. ಅಣ್ಣನ ಆದೇಶ ಮುರಿಯಲು ಲಕ್ಷ್ಮಣ ಮುಂದಾಗಲ್ಲ. ಆದ್ರೂ ಅಣ್ಣನ ರಕ್ಷಣೆ ಅನಿವಾರ್ಯ ಎಂದು ತೋಚಿ, ಮೂರು ರೇಖೆ ಎಳೆದು ಅದನ್ನ ದಾಟದಂತೆ ಸೀತೆಗೆ ಹೇಳಿ ಹೋಗುತ್ತಾನೆ.
ಆದರೆ, ಕಪಟಿ ರಾವಣ ಭಿಕ್ಷುಕನ ವೇಷದಲ್ಲಿ ಸೀತೆ ಬಳಿಗೆ ಬರುತ್ತಾರೆ. ವಂಚನೆ ಅರಿಯದ ಸೀತೆ ಲಕ್ಷ್ಮಣ ರೇಖೆಯ ದಾಟಿ ಹೊರಬರುತ್ತಾಳೆ. ರಾವಣ ಆಕೆಯನ್ನು ಅಪಹರಿಸಿ ರಥದಲ್ಲಿ ಕೂರಿಸುತ್ತಾನೆ. ಇದಿಷ್ಟೂ ವಿವರಣೆ ಇಲ್ಲಿ ಸಿಗಲಿದ್ದು. ಇದರ ಜೊತೆ ಪದ್ಮಶ್ರೀ ಅರುಣಾ ಮೊಹಾಂತಿ ಅವರಿಂದ 'ಸಂಸಾರ' ಪ್ರದರ್ಶನ ಜನನ ಹಾಗೂ ಮರಣದ ಚಕ್ರದ ಮೂಲಕ ಆತ್ಮದ ಪ್ರಯಾಣ ಆಗಿರಲಿದೆ.












Click it and Unblock the Notifications