ದಕ್ಷಿಣ ಬೆಂಗಳೂರಿನ ಉತ್ತಮ ವಸತಿ ಯೋಜನೆ ಪ್ರಶಸ್ತಿ ಗೆದ್ದ ಡ್ಯಾಮ್ಡೆನ್

ಬೆಂಗಳೂರು, ಸೆ.04: ಡ್ಯಾಮ್ಡೆನ್ ಪ್ರಾಪರ್ಟೀಸ್ ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಡೆವಲಪರ್‌ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಇದು 2019 ರಲ್ಲಿ "ದಕ್ಷಿಣ ಬೆಂಗಳೂರಿನಲ್ಲಿ ಅತ್ಯುತ್ತಮ ವಸತಿ ಯೋಜನೆ (ರೆಸಿಡೆನ್ಸಿಯಲ್ ಪ್ರಾಜೆಕ್ಟ್)" ಪ್ರಶಸ್ತಿಗೆ ಭಾಜನವಾಗಿದೆ.

ಈ ಸ್ಪರ್ದೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಮಿನಿಗಳನ್ನು ಸೂಚಿಸಲಾಗಿತ್ತು ಮತ್ತು ಸ್ಪರ್ಧೆಯು ಹೆಚ್ಚು ಸ್ಪರ್ಧಾತ್ಮಕವಾಗಿದ್ದರೂ ಅದರಲ್ಲಿ ಡ್ಯಾಮ್ಡೆನ್ ಪ್ರಾಪರ್ಟಿಸ್ ಆಯ್ಕೆಯಾಗಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಿರ್ಮಾಣವಾಗಿರುವ "ಡ್ಯಾಮ್ಡೆನ್ ವಿವೊ", ಸುಮಾರು 90 ಘಟಕಗಳನ್ನು ಹೊಂದಿದ್ದು, ಅತೀ ಎತ್ತರದ ಕಟ್ಟಡವನ್ನು ಉತ್ಕೃಷ್ಟತೆಯಿಂದ ನಿರ್ಮಿಸಲಾಗಿರುವುದರಿಂದ ಅದನ್ನು ಈ ಸ್ಪರ್ಧೆಗೆ ಪರಿಗಣಿಸಲಾಗಿದೆ.

"ಯುನಿಕ್ ಸ್ಮಾರ್ಟ್ ಎಂಜಿನಿಯರಿಂಗ್" ಅನ್ನು ಡ್ಯಾಮ್ಡೆನ್ ಎಂಜಿನಿಯರಿಂಗ್ ತಂಡವು ಕಂಡುಹಿಡಿದಿದ್ದು, ಇದು ಬಳಕೆದಾರರ ಅನುಭವವನ್ನು ತೃಪ್ತಿಕರವಾಗುವಂತೆ ಮಾಡುವುದಲ್ಲದೇ, ವಿನ್ಯಾಸದಲ್ಲಿನ ಹೊಸ ನಾವೀನ್ಯತೆಗಳ ಲಾಭವನ್ನು ಪಡೆಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಬೆಂಗಳೂರು ನಾಗಾಲೋಟದಲ್ಲಿ ಮುಂದುವರೆಯುತ್ತಿದೆ ಎನ್ನುವುದಕ್ಕೆ ಇಲ್ಲಿನ ಸರ್ಜಾಪುರ ರಸ್ತೆಯೇ ಸಾಕ್ಷಿ, ಇಲ್ಲಿ ಸುಮಾರು 80% ಶಾಲೆಗಳಿದ್ದು, ಕೆಲವು ಅತ್ಯುತ್ತಮ ಆಸ್ಪತ್ರೆಗಳು, ಸುರಂಗಮಾರ್ಗ, ರಿಂಗ್ ರಸ್ತೆ ಮತ್ತು ಐಟಿ ಕಂಪನಿಗಳು ಹೀಗೆ ಎಲ್ಲವೂ ಹತ್ತಿರದಲ್ಲಿವೆ.

Damden Properties win South Indias best residential project

ಭಾರತದಾದ್ಯಂತ ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ವೃತ್ತಿಪರರ ಸಾಧನೆಗಳನ್ನು ಗುರುತಿಸಲು ಭಾರತೀಯ ರಿಯಲ್ ಎಸ್ಟೇಟ್ ಪ್ರಶಸ್ತಿಗಳನ್ನು IBE (ಇಂಟರ್ನ್ಯಾಷನಲ್ ಬ್ರಾಂಡ್ ಇಕ್ವಿಟಿ) ಸ್ಥಾಪಿಸಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ರಿಯಲ್ ಎಸ್ಟೇಟ್ ಉದ್ಯಮವು ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೊಡುಗೆ ಸಲ್ಲಿಸುತ್ತಿರುವ ಕಾರಣದಿಂದಾಗಿ, ಈ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿದವರನ್ನು ಗುರುತಿಸುವುದು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸುವುದು, ಹೊಸ ಹೊಸ ಪ್ರಯತ್ನಗಳನ್ನು ಪ್ರಶಂಸಿಸುವುದು IPA 2019 ರ ಪ್ರಮುಖ ಗುರಿ ಇದರ ಪ್ರಮುಖ ಗುರಿಯಾಗಿದೆ .

ದೇಶದ ರಿಯಲ್ ಎಸ್ಟೇಟ್ ಉದ್ಯಮದ ಸ್ವರೂಪವನ್ನು ಬದಲಾಯಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಡ್ಯಾಮ್ಡೆನ್ ಅನ್ನು 1996 ರಲ್ಲಿ ಸ್ಥಾಪಿಸಲಾಯಿತು. ಕಂಪನಿಯು ವಸತಿ ಮತ್ತು ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್, ಹೋಟೆಲ್‌ಗಳು ಮತ್ತು ಪ್ಲ್ಯಾಂಟೇಶನ್ (ತೋಟ) ಗಳ ನಿರ್ಮಾಣದಂತಹ ವಿಭಿನ್ನ ರೀತಿಯ ಆಸಕ್ತಿಗಳನ್ನು ಹೊಂದಿದೆ. ಇಂದು, ಡ್ಯಾಮ್ಡೆನ್ 2.5 ಮಿಲಿಯನ್ ಚದರ ಅಡಿಗಿಂತ ಹೆಚ್ಚಿನ ಭೂಮಿಯ ಅಭಿವೃದ್ಧಿಯನ್ನು ಪೂರ್ಣಗೊಳಿಸಿದೆ, ಇದರ ಉತ್ಕೃಷ್ಟ ಸೇವೆಯಿಂದಾಗಿ 2,000 ಕ್ಕೂ ಹೆಚ್ಚು ತೃಪ್ತಿಕರ ಗ್ರಾಹಕರು ನಮ್ಮೊಂದಿಗಿದ್ದಾರೆ ಮತ್ತು ಬೆಂಗಳೂರು, ಮೈಸೂರು, ಕೊಯಮತ್ತೂರು, ಮಂಗಳೂರು ಮತ್ತು ಕೇರಳದಲ್ಲಿ ಒಟ್ಟು 790 ಕೋಟಿ ರೂಪಾಯಿಗಳ ಪ್ರಾಜೆಕ್ಟ್‌ಗಳನ್ನು ಕಂಪನಿಯು ಕೈಗೆತ್ತಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+