ಜಯನಗರದಲ್ಲಿ ಡಿ.29ರಂದು ಸೈಕಲ್ ದಿನಾಚರಣೆ

ಬೆಂಗಳೂರು, ಡಿ. 28 : ಪ್ರತಿ ತಿಂಗಳ ಕೊನೆ ಭಾನುವಾರದಂದು 'ಸೈಕಲ್ ದಿನ' ಎಂದು ಬೆಂಗಳೂರಿನಲ್ಲಿ ಆಚರಿಸಲು ಪ್ರಾರಂಭ ಮಾಡಿ ಎರಡು ತಿಂಗಳು ಕಳೆದಿದೆ. ಅ.27ರಂದು ಕಬ್ಬನ್ ಪಾರ್ಕಿನಲ್ಲಿ ಆರಂಭವಾದ ಆಚರಣೆ ಪ್ರತಿ ತಿಂಗಳು ಜನಪ್ರಿಯತೆಯನ್ನು ಗಳಿಸುತ್ತಿದೆ. ಈ ತಿಂಗಳು ಡಿ.29ರಂದು ಭಾನುವಾರ ಉತ್ತಮ ಆರೋಗ್ಯಕ್ಕಾಗಿ ಹಂಬಲಿಸುವ ಪ್ರಕೃತಿ ಪ್ರೇಮಿಗಳು ಸೈಕಲ್ ಹಿಡಿದು ಬೀದಿಗಿಳಿಯಲಿದ್ದಾರೆ.

ಈ ಬಾರಿ, ಸೈಕಲ್ ಟ್ರಾಕ್ ಹೆಚ್ಚಾಗಿ ನಿರ್ಮಿಸಲಾಗಿರುವ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಜಯನಗರದಲ್ಲಿ ಆಯೋಜಿಸಲಾಗಿದೆ. ಜಯನಗರದ 5ನೇ ಬ್ಲಾಕ್ ನಲ್ಲಿರುವ ಬಿಬಿಎಂಪಿಗೆ ಸೇರಿರುವ 'ಶಾಲಿನಿ ಗ್ರೌಂಡ್' ಎಂದು ಹೆಸರಾಗಿರುವ 'ಚಂದ್ರಗುಪ್ತ ಮೌರ್ಯ ಮೈದಾನ'ದಲ್ಲಿ ಸೈಕಲ್ ಚಕ್ರಗಳು ಉರುಳಲಿವೆ.

ಕಬ್ಬನ್ ಪಾರ್ಕಿನಲ್ಲಿ ಆಯೋಜಿಸಲಾಗುತ್ತಿದ್ದ ಸೈಕಲ್ ಡೇ ಕಾರ್ಯಕ್ರಮ ಈ ಬಾರಿ ಜನರ ಬಳಿಗೆಯೇ ಬಂದಿದೆ. ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕಾಗಿ ಆಯೋಜಕರು ಕೋರಿದ್ದಾರೆ. ಈ ಮೂರು ಗಂಟೆಯ ಸಮಯದಲ್ಲಿ ಸೈಕಲ್ ಸಾಗುವ ರಸ್ತೆಗಳಲ್ಲಿ ಮೂರು ಮತ್ತು ನಾಲ್ಕು ಚಕ್ರದ ವಾಹನಗಳನ್ನು ನಿಷೇಧಿಸಲು ಆಯೋಜಕರು ನಿರ್ಧರಿಸಿದ್ದಾರೆ. [ಬೆಂಗಳೂರು ಸೈಕಲ್ ರಾಜಧಾನಿಯಾಗಲಿ]

Cycle day in Jayanagar on 29th December Sunday

ಸೈಕಲ್ ಇಲ್ಲದಿದ್ದರೆ ಬಾಡಿಗೆ ತೆಗೆದುಕೊಂಡು ಬನ್ನಿ, ಉಚಿತವಾಗಿಯೂ ಸೈಕಲ್ ಗಳು ಸಿಗಲಿವೆ. ಸಾರ್ವಜನಿಕರು ಸೈಕಲ್ ಜೊತೆಗೆ ಫುಟ್ ಬಾಲ್, ಕ್ರಿಕೆಟ್ ಕಿಟ್, ಫ್ರಿಸ್ಬಿ ಮುಂತಾದ ಆಟಿಕೆಗಳನ್ನು ಕೂಡ ತಂದು ಇಲ್ಲಿ ಆಡಬಹುದು. ಜಾಗ್ ಮಾಡಿ, ವಾಕ್ ಮಾಡಿ, ಡಾನ್ಸ್ ಮಾಡಿ ಎಲ್ಲರ ಜೊತೆ ಬೆರೆತು ಆಡವಾಡಿ. ಬೆಂಗಳೂರನ್ನು ಭಾರತದ ಸೈಕಲ್ ರಾಜಧಾನಿ ಆಗುವಂತೆ ಮಾಡಿ ಎಂದು ಕರೆ ನೀಡಿದ್ದಾರೆ. [ಮೊದಲ ಸೈಕಲ್ ಡೇ ಯಶಸ್ವಿ]

ಜಯನಗರದಲ್ಲಿ ಸೈಕಲ್ ಟ್ರಾಕ್ ಹಾಕಿ ಎಷ್ಟೋ ತಿಂಗಳುಗಳು ಕಳೆದಿವೆ. ಇಲ್ಲಿಯವರೆಗೂ ಅವು ಸೈಕಲ್ ಬಳಸುವವರಿಗೆ ಲಭ್ಯವಾಗಿಲ್ಲ. ಸೈಕಲ್ ಬಳಕೆಯೂ ಕಡಿಮೆಯಾಗಿದ್ದರಿಂದ ಸೈಕಲ್ ಟ್ರಾಕ್ ಗಳೆಲ್ಲ ಕಾರು ಮತ್ತಿತರ ವಾಹನಗಳ ಪಾರ್ಕಿಂಗ್ ಜಾಗವಾಗಿ ಪರಿವರ್ತಿತವಾಗಿದೆ. ಅಲ್ಲಿ ವಾಹನ ಪಾರ್ಕ್ ಮಾಡುವುದು ಅಪರಾಧ ಎಂದು ತಿಳಿದಿದ್ದರೂ ನಿಲ್ಲುಸುವುದು ನಿಂತಿಲ್ಲ ಮತ್ತು ಪೊಲೀಸರು ಯಾವುದೇ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ.

ಸೈಕಲ್ ದಿನಾಚರಣೆಯ ಕಾರಣದಿಂದಲಾದರೂ ಸೈಕಲ್ ಬಳಕೆ ಬೆಂಗಳೂರಿನಲ್ಲಿ ಹೆಚ್ಚಾಗಬೇಕಿದೆ. ಸೈಕಲ್ ಪಥದಲ್ಲಿ ವಾಹನ ನಿಲ್ಲಿಸಿದ್ದರೆ ತೆರವುಗೊಳಿಸುವಂತೆ ಪೊಲೀಸರಿಗೆ ಮನವಿ ಮಾಡಬೇಕಿದೆ. ಪೊಲೀಸರು ಕೂಡ ಜನರ ಮನವಿಗೆ ಸ್ಪಂದಿಸಿ ಸೈಕಲ್ ಪಥಗಳು ಸೈಕಲ್ ಬಳಸುವವರಿಗೆ ಮುಕ್ತವಾಗಿರುವಂತೆ ಮಾಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೈಕಲ್ ಪಥದಲ್ಲಿ ವಾಹನ ನಿಲ್ಲಿಸಬಾರದು ಎಂಬ ಪ್ರಜ್ಞೆಯೂ ಚಾಲಕರಲ್ಲಿ ಮೂಡಬೇಕಿದೆ.

ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ವಾಹನಗಳ ಸಂಖ್ಯೆ ವಿಪರೀತ ಅನ್ನುವಷ್ಟು ಹೆಚ್ಚಾಗುತ್ತಿದೆ, ಮರಗಳು ರಸ್ತೆ ಅಗಲೀಕರಣ, ಮೇಲ್ಸೇತುವೆಗಾಗಿ ಬಲಿಯಾಗುತ್ತಿವೆ, ವಾಯುಮಾಲಿನ್ಯ ಮಿತಿಮೀರಿ ರೋಗರುಜಿನ ಉಲ್ಬಣವಾಗುವಂತೆ ಮಾಡುತ್ತಿವೆ. ಈ ನಿಟ್ಟಿನಲ್ಲಿ ಜನರು ಸೈಕಲ್ ಬಳಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಮಾತ್ರವಲ್ಲ, ಬೆಂಗಳೂರಿನ ನೈರ್ಮಲ್ಯಕ್ಕಾಗಿ ಪಣತೊಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+