• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಸ್ಟಮ್ಸ್ ಆಫೀಸರ್ಸ್ ಹೆಸರಿನಲ್ಲಿ ವೃದ್ಧ ಅಜ್ಜನಿಗೆ 39 ಲಕ್ಷ ರೂ. ವಂಚನೆ

|

ಬೆಂಗಳೂರು, ಫೆಬ್ರವರಿ 22: ಅಮೆರಿಕಾದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆ ಬಂದಿದೆ. ಕಸ್ಟಮ್ಸ್ ಕ್ಲಿಯರ್ ಮಾಡೋಕೆ ಹತ್ತು ಸಾವಿರ ಕಟ್ಟಿ ಎಂದು ಯಾರಾದ್ರೂ ಕರೆ ಮಾಡಿದ್ರೆ, ಅಂತಹ ಕರೆಗಳನ್ನು ತಿರಸ್ಕರಿಸಿ. ಸ್ವಲ್ಪ ಯಾಮಾರಿದ್ರೆ ಬ್ಯಾಂಕ್ ಖಾತೆಯಲ್ಲಿರುವ ಹಣ ಮಾಯ ಮಾಡಿ ಬೀದಿಗೆ ತಂದು ನಿಲ್ಲಿಸುತ್ತಾರೆ. ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಸೈಬರ್ ಕಳ್ಳರು ವೃದ್ಧ ಅಜ್ಜನಿಗೆ ಹೆದರಿಸಿ 39 ಲಕ್ಷ ರೂಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡು ಮೋಸ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಫೇಸ್ ಬುಕ್ ನಲ್ಲಿ ವೃದ್ಧ ಅಜ್ಜನಿಗೆ ರೇವ್ ಸಿಸ್ಟರ್ ಜಿನಾ ಮ್ಯಾಥ್ಯೂ ಎಂಬುವರು ಪರಿಚಯವಾಗಿದ್ದರು. ಇಬ್ಬರು ಪರಿಚಯವಾದ ಬಳಿಕ ಮೆಸೇಂಜರ್ ನಲ್ಲಿ ಚಾಟ್ ಮಾಡುತ್ತಿದ್ದರು. ಬಳಿಕ ವಾಟ್ಸಪ್ ನಂಬರ್ ಪಡೆದು ಇಬ್ಬರೂ ತಿಂಗಳಾನುಗಟ್ಟಲೇ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಹೀಗೆ ಚಾಟಿಂಗ್ ಮಾಡುತ್ತಿರುವಾಗಲೇ ಅಮೆರಿಕಾ ಕ್ಯಾಲಿಪೋರ್ನಿಯಾದಿಂದ ಉಡುಗೊರೆ ಕಳಿಸಿ ಕೊಡುತ್ತಿರುವುದಾಗಿ ಕರೆ ಮಾಡಿದ್ದ ಜಿನಾ. ಆಕೆಯ ಮಾತು ಕೇಳಿ ಖುಷಿಯಲ್ಲಿ ತೇಲಾಡಿದ್ದ ವೃದ್ಧ ಅಜ್ಜ ಉಡುಗರೆ ಸ್ವೀಕರಿಸುವ ತವಕದಲ್ಲಿದ್ದರು.

ಬಿಟ್ ಕಾಯಿನ್ ಬ್ಯಾನ್ ಬಯಿಸಿ ಪ್ರಧಾನಿಗೆ ಪತ್ರ ಬರೆದ ಬೆಂಗಳೂರು ಸೈಬರ್ ತಜ್ಞ

ಇದೇ ವೇಳೆ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಬಂದಿದ್ದು, ನಿಮಗೆ ಅಮೆರಿಕಾದಿಂದ ಗಿಫ್ಟ್ ಬಂದಿದೆ. ಅದನ್ನು ನೀವು ಸ್ವೀಕರಿಸಬೇಕಾದರೆ 30 ಸಾವಿರ ರೂ. ಕಸ್ಟಮ್ಸ್ ಶುಲ್ಕ ಪಾವತಿಸಬೇಕು. ಹಣ ಪಾವತಿ ಮಾಡದಿದ್ದರೆ ಮನಿ ಲ್ಯಾಂಡ್ರಿಗ್ ಪ್ರಕರಣದಲ್ಲಿ ಬಂಧಿಸುವುದಾಗಿ ಹೆದರಿಸಿದ್ದರು. ಇದಕ್ಕೆ ಹೆದರಿದ ವೃದ್ಧ ಅಜ್ಜ, ತನ್ನ ಬ್ಯಾಂಕ್ ಖಾತೆಯಲ್ಲಿದ್ದ 30 ಸಾವಿರ ಹಣವನ್ನು ಪಾವತಿ ಮಾಡಿದ್ದರು. ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ಪದೇ ಪದೇ ಕರೆ ಮಾಡುತ್ತಿದ್ದ ಸೈಬರ್ ವಂಚಕರು, ಲಕ್ಷ ಲಕ್ಷ ಹಣ ಪೀಕಿದ್ದಾರೆ.

   ಒಂದು ವಾರಗಳ ಕಾಲ ಮಹಾರಾಷ್ಟ್ರದ ಅಮರಾವತಿ ಲಾಕ್‌ಡೌನ್‌! | Oneindia Kannada

   ಹೀಗೆ ಹಂತ ಹಂತವಾಗಿ 39.73 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ. ಜೀವನಾಧಾಕ್ಕೆಂದು ಇಟ್ಟುಕೊಂಡಿದ್ದ ಎಲ್ಲಾ ಹಣ ಕಳೆದುಕೊಂಡಿದ್ದಾರೆ. ಆನಂತರ ತಾನು ಹಣ ಹಾಕಿದ್ದು ಕಸ್ಟಮ್ಸ್ ಅಧಿಕಾರಿಗಳ ಅಲ್ಲ, ಬದಲಿಗೆ ಕೊಟ್ಟಿದ್ದು ಸೈಬರ್ ವಂಚಕರಿಗೆ ಎಂದು ಅರಿವಾಗಿದೆ. ಜಿನಾಗೆ ಮತ್ತೆ ಕರೆ ಮಾಡಿದರೆ ನಂಬರ್ ಸ್ವಿಚ್ ಆಫ್ ಆಗಿದೆ. ಸೈಬರ್ ವಂಚಕರು ಜಿನಾ ಹೆಸರಿನಲ್ಲಿ ವೃದ್ಧ ಅಜ್ಜನ ಜತೆ ನಿರಂತರ ಚಾಟ್ ಮಾಡಿ ನಲವತ್ತು ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾರೆ. ಹಣ ಕಳೆದುಕೊಂಡ ಬಳಿಕ ಅರಿವಿಗೆ ಬಂದ ಬಳಿಕ ಬ್ಯಾಂಕ್ ನಲ್ಲಿ ಪರಿಶೀಲನೆ ನಡೆಸಿದಾಗ, ಉತ್ತರ ಭಾರತದ ರಾಜ್ಯಗಳಿಗೆ ಹಣ ವರ್ಗಾವವಣೆ ಮಾಡಿರುವುದು ಗೊತ್ತಾಗಿದೆ. ಈ ಕುರಿತು ಅಜ್ಜ ವೈಟ್‌ ಫೀಲ್ಡ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

   English summary
   Bengaluru: Cyber thief Robs Rs 39 Lakh to Old age man in the name of costly gifts and custom.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X