ಎಟಿಎಂಗಳಲ್ಲಿ ಹಣವಿಲ್ಲ, ಮಷೀನ್ ಗೆ ಒದ್ದು ಸಿಟ್ಟು ತೀರಿಸುವ ಗ್ರಾಹಕರು
ಬೆಂಗಳೂರು, ಮಾರ್ಚ್ 25: ನಗರದ ಬಹುತೇಕ ಎಟಿಎಂಗಳು 'ನಗದು ಇಲ್ಲ' ಎಂಬ ಬೋರ್ಡ್ ಗಳನ್ನು ತಗುಲಿಸಿಕೊಂಡಿವೆ. ಹಣ ತೆಗೆದುಕೊಳ್ಳಲು ಬರುವ ಗ್ರಾಹಕರು ಸಿಟ್ಟಿನಿಂದ ಬೈದುಕೊಳ್ಳುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಇನ್ನೂ ಕೆಲವು ಕಡೆ ಗ್ರಾಹಕರು ತಮ್ಮ ಸಿಟ್ಟನ್ನು ಮಷೀನ್ ಮೇಲೆ ತೀರಿಸಿಕೊಂಡು, ಒದ್ದು- ಹೊಡೆದು ಮಾಡಿದ್ದಾರೆ.
ಇದರಿಂದ ಆದ ಸಮಸ್ಯೆಗಳನ್ನು ಕೆಲವು ಕಡೆ ಮೆಕ್ಯಾನಿಕ್ ಗಳು ಬಂದು ಸರಿಪಡಿಸಿದ್ದಿದೆ. ಇನ್ನೂ ಕೆಲವು ಕಡೆ ಡಿಸ್ ಪ್ಲೇ ಸ್ಕ್ರೀನ್ ಗೆ ಹಾನಿಯಾಗಿದೆ. "ಎಟಿಎಂ ಮೇಲೆ ಸಿಟ್ಟಿನಲ್ಲಿ ಮಾಡಿದ ದಾಳಿ ಕಾರಣಕ್ಕೆ ಮಷೀನ್ ನ ಮುಖ್ಯ ಹಾಗೂ ಸೂಕ್ಷ್ಮ ಭಾಗಗಳಿಗೆ ಹಾನಿಯಾಗಿವೆ. ಕಾರ್ಡ್ ರೀಡರ್, ಡಿಸ್ ಪ್ಲೇ ಸ್ಕೀನ್ ಮತ್ತು ಹಣ ಬರುವ ಡಿಸ್ಪೆನ್ಸರ್ ಗೆ ಹಾನಿಯಾಗಿದೆ" ಎಂದು ಸಿಬ್ಬಂದಿ ಹೇಳುತ್ತಾರೆ.

ಒಂದು ವೈರ್ ಹೆಚ್ಚು ಕಡಿಮೆ ಆದರೂ ಎಟಿಎಂ ಕೆಲಸ ಮಾಡುವುದಿಲ್ಲ. ಇದೀಗ ಹಣ ತುಂಬಲು ಎಟಿಎಂ ಕೇಂದ್ರಗಳಿಗೆ ತೆರಳುವ ಸಿಬ್ಬಂದಿ ತಮ್ಮ ಜತೆಗೆ ಮೆಕ್ಯಾನಿಕ್ ನ ಕೂಡ ಕರೆದುಕೊಂಡು ಹೋಗುತ್ತಿದ್ದಾರೆ. ಎಲ್ಲೆಲ್ಲ ಸಮಸ್ಯೆಗಳು ಕಂಡುಬರುತ್ತದೋ ಅಲ್ಲಿ ಮೆಕ್ಯಾನಿಕ್ ರಿಂದ ಮಷೀನ್ ದುರಸ್ತಿ ಪಡಿಸುತ್ತಿದ್ದಾರೆ.












Click it and Unblock the Notifications