ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಪ್‌ಟೌನ್‌ ರೀತಿಯ ನೀರಿನ ಕೊರತೆ ಬೆಂಗಳೂರು ಎದುರಿಸಲಿದೆಯೇ?ವರದಿ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಇದೆ. ಕರ್ನಾಟಕವು ಕಾವೇರಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿ ಸಮಾಧಾನಕರ ತೀರ್ಪನ್ನು ಪಡೆದುಕೊಂಡಿದೆ.

ಆದರೆ, ಈಗ ದೊರಕಿರುವ ವರದಿಯೊಂದು ಬೆಂಗಳೂರನ್ನು ಬೆಚ್ಚಿಬೀಳಿಸುವಂತದ್ದಾಗಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಉಂಟಾಗಿರುವ ತೀವ್ರ ಬರಗಾಲದ ಸ್ಥಿತಿ ಎದುರಿಸಬಹುದಾದ ಜಗತ್ತಿನ 10ನಗರಗಳಲ್ಲಿ ಬೆಂಗಳೂರು ಕೂಡ ಇರುವ ಅತಂಕಕಾರಿ ವರದಿಯೊಂದು ಸಿಎಸ್ಇ ಬೆಂಬಲಿತ ಪರಿಸತ ಮ್ಯಾಗಜಿನ್ ನಲ್ಲಿ ಪ್ರಕಟವಾಗಿದೆ.

ವಿಶ್ವ ಜಲದಿನ: ದಾಹವನ್ನು ನೀಗಿಸುವ ಆ ಲೋಟವನ್ನು ತುಂಬಿಸೋಣವಿಶ್ವ ಜಲದಿನ: ದಾಹವನ್ನು ನೀಗಿಸುವ ಆ ಲೋಟವನ್ನು ತುಂಬಿಸೋಣ

ಯೋಜಿತವಲ್ಲದ ನಗರೀಕರಣ ಮತ್ತು ಒತ್ತುವರಿಯಿಂದಾಗಿ ಬೆಂಗಳೂರಿನ ಜಲಾಶಯಗಳ ಸಂಖ್ಯೆ ಶೇ.79ರಷ್ಟು ಕಡಿಮೆಯಾಗಿದೆ. ನಾಗರೀಕರಣದ ವ್ಯಾಪ್ತಿ1973ರಲ್ಲಿ ಶೇ.8ರಷ್ಟಿದ್ದುದು ಈಗ ಶೇ.77ರಷ್ಟು ಏರಿಕೆ ಕಂಡಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ ಸಹಕಾರದಿಂದ ಪ್ರಕಟಿಸಲ್ಪಡುವ ಡೌನ್ ಟು ಅರ್ಥ್ ಮ್ಯಾಗಜಿನ್ ನಲ್ಲಿ ಪ್ರಕಟವಾಗಿದೆ.

CSE warns Bengaluru which is in the line of Capetown

ವಿಶ್ವ ಜಲ ದಿನಾಚರಣೆ ಮುನ್ನ ಸಿಎಸ್ಇ ಬಿಡುಗಡೆಗೊಳಿಸಿರುವ ಹೇಳಿಕೆಯ ಪ್ರಕಾರ ಬೆಂಗಳೂರಿನ ಜಲಪಟ್ಟಿ ಎರಡು ದಶಕಗಳಲ್ಲಿ 10-12 ಮೀಟರ್ ನಿಂದ 76-91 ಮೀಟರ್ ಗೆ ಕುಗ್ಗಿದೆ. 30ವರ್ಷಗಳ ಹಿಂದೆ 5 ಸಾವಿರದಷ್ಟಿದ್ದ ಬಾವಿಗಳ ಸಂಖ್ಯೆ 4.5ಲಕ್ಷಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಜನಸಂಖ್ಯೆ 2031ಕ್ಕೆ 2ಕೋಟಿ ದಾಟುವ ನಿರೀಕ್ಷೆ ಇದೆ. ಪ್ರಸ್ತುತ ವಾರ್ಷಿಕ ಶೇ. 3.5ರಷ್ಟು ಜನಸಂಖ್ಯೆ ಏರಿಕೆಯಾಗುತ್ತಿದೆ ಎಂದು ಸಿಎಸಸಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕೇಪ್ ಟೌನ್ ಈ ವರ್ಷದ ಜೂನ್-ಜುಲೈ ನಲ್ಲಿ ಸಂಪೂರ್ಣ ನೀರು ರಹಿತ ಶೂನ್ಯ ದಿನ ಎದುರಿಸಲಿದೆ. ಜಗತ್ತಿನ ಹಲವು ಪ್ರಮುಖ ನಗರಗಳು ಕೆವೇ ವರ್ಷಗಳಲ್ಲಿ ಕೇಪ್‌ಟೌನ್ ನ ಸ್ಥಿತಿ ಎದುರಿಸಲಿದೆ. ಅದರಲ್ಲೂ 10ನಗರಗಳು ನೀರಿನ ನಳ್ಳಿಗಳು ಸಂಪೂರ್ಣ ನೀರಿಲ್ಲದೇ ಒಣಗಿ ನಿರ್ಮಾಣವಾಗುವ ಶೂನ್ಯ ದಿನದ ಇತರ ನಗರಗಳಾದ ಬೀಜಿಂಗ್, ಮೆಕ್ಸಿಕೊ ಸಿಟಿ, ನೈರೋಬಿ, ಕರಾಚಿ, ಕಾಬೂಲ್, ಇಸ್ತಾಂಬುಲ್ ಕೂಡ ಈ ಹತ್ತು ನಗರಗಳಲ್ಲಿ ಸೇರಿದೆ.

ನೀರಿನ ಮಹತ್ವ ಸಾರಲು ವಾಕಥಾನ್ ಏರ್ಪಡಿಸಿದ ಎಂಟರ ಬಾಲೆನೀರಿನ ಮಹತ್ವ ಸಾರಲು ವಾಕಥಾನ್ ಏರ್ಪಡಿಸಿದ ಎಂಟರ ಬಾಲೆ

English summary
Centre for Science and Ecology(CSE) has was Bengaluru is i the line of Capetown of South Africa which is suffering huge scarcity of water. The CSE had told on World Water Day that the 79 percent of water resources of Bengaluru city have been engulfed by Urbanisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X