ಕ್ರೈಂ ರೌಂಡಪ್: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ, ಇನ್ನಿತರ ಸುದ್ದಿ
ಬೆಂಗಳೂರು, ನ. 16: ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರ. ಕೌಟುಂಬಿಕ ಕಲಹಕ್ಕೆ ಬೇಸತ್ತು ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ. ಲೋನ್ ಆಸೆಗೆ ವ್ಯಕ್ತಿಯನ್ನು ಅಪಹರಿಸಿದ್ದ ಮೂವರು ಬಂಧನ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ ವಿವಾದ: ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸುವ ವಿಚಾರ ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಮಸೀದಿಗಳಲ್ಲಿ ದೊಡ್ಡ ಸದ್ದು ಮಾಡುವ ಧ್ವನಿ ವರ್ಧಕ ಬಳಕೆ ಕುರಿತು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ರಾತ್ರಿ ಹತ್ತು ಗಂಟೆ ವೇಳೆ ಹಾಗೂ ಬೆಳಗ್ಗೆ ಆರು ಗಂಟೆ ಸಮಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಸಂಬಂಧ ಸಮಗ್ರ ವಿವರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಮಸೀದಿಗಳಲ್ಲಿ ಬೆಳಗಿನ ಜಾವ ಧ್ವನಿವರ್ಧಕ ಹಾಕಲಾಗುತ್ತದೆ. ಮಸೀದಿಗಳಲ್ಲಿ ಎಷ್ಟು ಡೆಸಿಬಲ್ ಶಬ್ದದೊಂದಿಗೆ ಧ್ವನಿವರ್ಧಕ ಬಳಕೆ ಕುರಿತು ವಕ್ಫ್ ಮಂಡಳಿ ಆದೇಶ ಹೊರಡಿಸಿದೆ. ಯಾವ ಕಾನೂನು ಅಡಿಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ. ಈ ಕುರಿತು ಸರ್ಕಾರ ವಿವರಣೆ ನೀಡಬೇಕು. ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಹೆಚ್ಚಿನ ಶಬ್ದ ಹೊರ ಸೂಸುವ ಸೈಲನ್ಸರ್ ಅಳವಡಿಸುವುದನ್ನು ತಡೆಯಬೇಕು. ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆ ಮಾಡಲಾಗುತ್ತಿದೆ. ಬೆಳಗಿನ ಜಾವ ಹೆಚ್ಚು ಶಬ್ದ ಬಳಿಸಿ ಧ್ವನಿವರ್ಧಕ ಹಾಕುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಲಾಗಿದ್ದು ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಕುರಿತು ಹೊರಡಿಸಿರುವ ಆದೇಶ ಮತ್ತು ಕೈಗೊಂಡಿರುವ ಕ್ರಮ ಕುರಿತು ವರದಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಪೊಲೀಸ್ ಪೇದೆ ಆತ್ಮಹತ್ಯೆ:
ಕೌಟುಂಬಿಕ ಕಲಹದಿಂದ ಬೇಸತ್ತ ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಗನಾಥ್ ಕುಮಾರ್ ಅತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್ ಪೇದೆ. ಬೆಂಗಳೂರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನಲ್ಲಿ ಕಾರ್ಯ ನಿರ್ವಹಿಸಿದ್ದರು. ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪ್ಪಾರಪೇಟೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಲೋನ್ ಆಸೆಗೆ ವಿದೇಶಿ ಕಿಡ್ನಾಪ್:
ಒಂದು ಕೋಟಿ ರೂ ಲೋನ್ ಆಸೆಗೆ ಬಿದ್ದು ವ್ಯಕ್ತಿಯನ್ನು ಅಪಹರಣ ಮಾಡಿದ್ದ ಮೂವರು ಅರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಉಪೇಂದ್ರ, ನೀಲಮ್ಮ, ಸಮೀರ್ ಬಂಧಿತ ಆರೋಪಿಗಳು. ಕಾಂಗೋದಿಂದ ಬಂದಿದ್ದ ನಾಗರಾಜ್‌ಗೆ ಬಂಧಿತ ಆರೋಪಿ ಉಪೇಂದ್ರ ಪರಿಚಯವಾಗಿದ್ದ. ಲೋನ್‌ಗಾಗಿ ಅಲೆಯುತ್ತಿದ್ದ ನಾಗರಾಜ್‌ಗೆ ಒಂದು ಕೋಟಿ ರೂ. ಲೋನ್ ಕೊಡಿಸುವುದಾಗಿ ಉಪೇಂದ್ರ ಹೇಳಿದ್ದ. ದಾಖಲೆಗಳನ್ನು ನೀಡಿ ನಾಗರಾಜ್ ಕಾಂಗೋಗೆ ತೆರಳಿದ್ದ. ನಾಗರಾಜ್ ಗೆ ಒಂದು ಕೋಟಿ ಲೋನ್ ಕೊಡುವುದಾಗಿ ಬ್ಯಾಂಕ್ ಸಿಬ್ಬಂದಿ ಹೇಳಿದ್ದರು. ಸಾಲ ನೀಡಲು ನಾಗರಾಜ್ ಹೊಂದಿರುವ ಐದು ಲಕ್ಷ ರೂ. ಲೋನ್ ಪಾವತಿಸಲು ಸೂಚಿಸಲಾಗಿತ್ತು. ನಾಗರಾಜ್‌ಗೆ ಲೋನ್‌ನ್ನು ಉಪೇಂದ್ರ ತೀರಿಸಿದ್ದ. ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು ನಾಗರಾಜ್ ಭಾರತಕ್ಕೆ ಬಂದಿದ್ದ. ಲೋನ್ ವಿಚಾರಿಸಿದಾಗ ಸಹಿ ಮಾಡಬೇಕಿರುವ ವಿಚಾರ ತಿಳಿಸಿದ್ದಾರೆ. ಲೋನ್ ಪಡೆಯಲು ನಾಗರಾಜ್ ನಿರಾಕರಿಸಿದ್ದು, ಈ ವೇಳೆ ಬಡ್ಡಿ ಸಮೇತ ಹಣ ನೀಡಲು ಉಪೇಂದ್ರ ಸೂಚಿಸಿದ್ದಾನೆ. ಹಣ ನೀಡಲು ನಿಕಾರಿಸಿದಾಗ, ಸಮೀರ್ ಮೂಲಕ ನಾಗರಾಜ್‌ನನ್ನು ಅಪಹರಣ ಮಾಡಿ ಮುದ್ದಯ್ಯನ ಪಾಳ್ಯದ ನೀಲಮ್ಮ ಎಂಬಾಕೆ ಮನೆಯಲ್ಲಿಟ್ಟು ಹಲ್ಲೆ ಮಾಡಿದ್ದಾರೆ. ಬಳಿಕ ನಾಗರಾಜ್ ಖಾತೆಯಲ್ಲಿದ್ದ 4.5 ಲಕ್ಷ ರೂ. ಹಣವನ್ನು ಕಿತ್ತುಕೊಂಡು ಬಿಟ್ಟು ಕಳಿಸಿದ್ದಾರೆ. ನಾಗರಾಜ್ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications