ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವೇಳೆ ಹೊರ ಬಂದ್ರೆ ಕ್ರಿಮಿನಲ್ ಕೇಸ್ !

ಬೆಂಗಳೂರು, ಜ. 05: ನೈಟ್ ಕರ್ಪ್ಯೂ ಮತ್ತು ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟು ಜಾರಿ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಸೂಚನೆ. ಕೇವಲ 1500 ರೂ. ವಿಚಾರವಾಗಿ ಯುವಕನ ಬರ್ಬರ ಹತ್ಯೆ. ವಿದ್ಯುತ್ ತಗುಲಿ ಗುತ್ತಿಗೆ ನೌಕರ ಮಾಗಡಿಯಲ್ಲಿ ಸಾವು. ಪ್ಲಾಟ್ ನೋಂದಣಿ ಮಾಡಲು ಲಂಚ ಸ್ವೀಕರಿಸಿ ಕಂದಾಯ ನಿರೀಕ್ಷಕ ಬೆಂಗಳೂರಿನಲ್ಲಿ ಎಸಿಬಿ ಬಲೆಗೆ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.

ವೀಕೆಂಡ್ ಕರ್ಫ್ಯೂ ಕಟ್ಟು ನಿಟ್ಟಿನ ಜಾರಿ- ಕಮಲ್‌ಪಂತ್ :

ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನೈಟ್ ಕರ್ಫ್ಯೂ ಹಾಗೂ ವಾರಂತ್ಯದ ಕರ್ಫ್ಯೂ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದ್ದಾರೆ.

ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಕಮಲ್‌ಪಂತ್ ಮಾಹಿತಿ ನೀಡಿದರು.

Bengaluru crime Roundup: Bengaluru police commissioner about Night, weekend curfew

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸುವ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲು ಪೊಲೀಸ್ ಇಲಾಖೆ ಸರ್ವ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದೇವೆ. ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಕಟ್ಟು ನಿಟ್ಟಾಗಿ ಜಾರಿಗೆ ತರುತ್ತೇವೆ. ಈ ಕುರಿತು ಪೊಲೀಸರು ಏನು ಮಾಡಬೇಕು ಎಂಬುದರ ಬಗ್ಗೆ ಎಲ್ಲಾ ಡಿಸಿಪಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಯಾವುದೇ ಪಾಸ್ ಇಲ್ಲ:

ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ವೇಳೆ ವಿಶೇಷವಾಗಿ ಸಂಚರಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ಪಾಸ್ ನೀಡಲ್ಲ. ಸರ್ಕಾರ ಸೂಚಿಸಿರುವ ತುರ್ತು ಕೆಲಸ ಹೊರತು ಪಡಿಸಿ ಅನಾವಶ್ಯಕವಾಗಿ ರಸ್ತೆಗೆ ಇಳಿದರೆ ಕ್ರಿಮಿನಲ್ ಕೇಸು ದಾಖಲಾಗುತ್ತದೆ. ವಾಹನವೂ ಬಂದ್ ಆಗುತ್ತದೆ. ವಿನಾಯಿತಿ ಪಡೆಯುವವರು ಸೂಕ್ತ ದಾಖಲೆ ಇಟ್ಟುಕೊಂಡು ಸಂಚರಿಸಲು ಅವಕಾಶ ನೀಡಲಾಗಿದೆ ಎಂದು ಕಮಲ್‌ಪಂತ್ ತಿಳಿಸಿದ್ದಾರೆ.

ಸಹಕಾರಕ್ಕೆ ಮನವಿ:

ಕಳೆದ ಬಾರಿ ಕರ್ಫ್ಯೂ ಜಾರಿ ವೇಳೆ ಬೆಂಗಳೂರು ನಾಗರಿಕರು ಸಹಕರಿಸಿದ್ದರು. ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ನಡೆದುಕೊಂಡಿದ್ದರು. ಈ ಬಾರಿಯೂ ಜನರು ಸಹಕಾರ ನೀಡಬೇಕು. ವೀಕೆಂಟ್ ಕರ್ಫ್ಯೂ ವೇಳೆ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಹೀಗಾಗಿ ದಿನಸಿ ಹೆಸರಿನಲ್ಲಿ ಯಾರೂ ಹೊರಗೆ ಬರುವುದು ಸೂಕ್ತವಲ್ಲ. ತುರ್ತು ಕೆಲಸ ಬಿಟ್ಟರೆ ಯಾರೂ ಹೊರಗೆ ಬರಬಾರದು ಎಂದು ಕಮಲ್‌ಪಂತ್ ಮನವಿ ಮಾಡಿದ್ದಾರೆ.

Bengaluru crime Roundup: Bengaluru police commissioner about Night, weekend curfew

1500 ರೂ.ಗಾಗಿ ಕೊಲೆ:

ಕೇವಲ 1500 ರೂ. ವಿಷಯವಾಗಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೆಹಬೂಬ್ ಕೊಲೆಯಾದ ಯುವಕ. ಮಚ್ಚು ಮತ್ತು ಲಾಂಗಿನಿಂದ ಚಚ್ಚಿ ಕೊಲೆ ಮಾಡಲಾಗಿದೆ. ಲಲಿತ್ ಹಾಗೂ ಮಣಿಕಂಠ ಎಂಬುವರ ನಡುವೆ ಹಣದ ವಿಚಾರವಾಗಿ ಗಲಾಟೆ ನಡೆದಿತ್ತು. ಎರಡು ಬಣದ ನಡುವಿನ ಮಾತುಕತೆ ವಿಕೋಪಕ್ಕೆ ತಿರುಗಿ ಮೆಹಬೂಬ್ ನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಹದಿಮೂರು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ವಿದ್ಯುತ್‌ಗೆ ಲೈನ್‌ಮನ್ ಸಾವು:

ವಿದ್ಯುತ್ ಪ್ರಸರಿಸಿ ಗುತ್ತಿಗೆ ನೌಕರ ಸಾವನ್ನಪ್ಪಿರುವ ಘಟನೆ ಮಾಗಡಿ ತಾಲೂಕಿನ ಶಿರಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನರಾಜು ಮೃತಪಟ್ಟವರು. ಗುತ್ತಿಗೆ ನೌಕರನಾಗಿದ್ದ ಹೊನ್ನರಾಜು ಟ್ರಾನ್ಸಫಾರ್ಮರ್ ದುರಸ್ತಿ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕುದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಎಸಿಬಿ ಬಲೆಗೆ ಕಂದಾಯ ನಿರೀಕ್ಷಕ:

Recommended Video

      Jaspreet Bumrah ಅವರು ಸಿಟ್ಟಿನಿಂದ 6 ಹೊಡೆದಿದ್ದು ಹೇಗೆ | Oneindia Kannada

      ಪ್ಲಾಟ್ ನೋಂದಣಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಬಿಎಂಪಿ ಕಂದಾಯ ನಿರೀಕ್ಷಕನನ್ನು ಬೆಂಗಳೂರು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಕೂಡ್ಲು ಬಳಿ ಇರುವ ಬಿಬಿಎಂಪಿ ಕಚೇರಿಯ ಕಂದಾಯ ನಿರೀಕ್ಷಕ ಗಿರೀಶ್ ಬಂಧಿತ ಆರೋಪಿ. ಲಂಚ ಸ್ವೀಕರಿಸುವಾಗ ಎಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+