ಬೆಂಗಳೂರಲ್ಲಿ ಪಟಾಕಿ ವ್ಯಾಪಾರ ಶೇ 50ರಷ್ಟು ಕುಸಿತ
ಬೆಂಗಳೂರು, ನವೆಂಬರ್ 05 : ಪಟಾಕಿ ಬಳಕೆ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ನಂತರ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಪಟಾಕಿ ವ್ಯಾಪಾರ ಶೇ 40 ರಿಂದ 50ರಷ್ಟು ಕುಸಿತಗೊಂಡಿದೆ.
ಬೆಂಗಳೂರು ನಗರದ ಹೋಲ್‌ಸೇಲ್ ಡೀಲರ್‌ಗಳು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ 50ರಷ್ಟು ಪಟಾಕಿ ವ್ಯಾಪಾರ ಕುಸಿದಿದೆ ಎಂದು ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಬೇಡಿಕೆ ಕಡಿಮೆ ಆಗುತ್ತಿದೆ ಎಂದು ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಆಟದ ಮೈದಾನದಲ್ಲಿ ಪಟಾಕಿ ಮಾರಾಟ ಮಾಡಲು ಅನುಮತಿ ನೀಡಿದೆ. ಹಲವು ವ್ಯಾಪಾರಿಗಳು ಅಂಗಡಿಗಳನ್ನು ಹಾಕುತ್ತಿದ್ದಾರೆ. ಆದರೆ, ವ್ಯಾಪಾರ ಎಷ್ಟಾಗಲಿದೆ? ಎಂದು ಕಾದು ನೋಡಬೇಕು.

ಜನರು ಪಟಾಕಿಗೆ ಹಣ ಹೂಡುವುದನ್ನು ಕಡಿಮೆ ಮಾಡಿದ್ದಾರೆ. ಮೊದಲು 5 ಸಾವಿರ ರೂ. ಬಾಕ್ಸ್ ಖರೀದಿ ಮಾಡುತ್ತಿದ್ದರು. ಈಗ ಕೇವಲ1 ಸಾವಿರ ರೂ. ಬಾಕ್ಸ್ ಖರೀದಿ ಮಾಡುತ್ತಿದ್ದಾರೆ' ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಅವೆನ್ಯೂ ರಸ್ತೆಯಲ್ಲಿ ಪಟಾಕಿ ವ್ಯಾಪಾರ ಮಾಡುವ ಶಿವಪ್ಪ ಅವರು, 'ಕಳೆದ ನಾಲ್ಕು ವರ್ಷದಿಂದ ನಷ್ಟವಾಗುತ್ತಿದೆ. ಈಗ ಜನರು ಹೆಚ್ಚು ಶಬ್ದವಿಲ್ಲದ ಪಟಾಕಿಗಳನ್ನು ಹೆಚ್ಚಾಗಿ ಕೇಳುತ್ತಿದ್ದಾರೆ' ಎಂದು ಹೇಳಿದ್ದಾರೆ.












Click it and Unblock the Notifications