CoWIN Data Leakage: ಕಹಿ ಸುದ್ದಿ: ಭಾರತೀಯರ ಆಧಾರ್-ಪ್ಯಾನ್ ಮಾಹಿತಿ ಟೆಲಿಗ್ರಾಮ್‌ನಲ್ಲಿ ಬಹಿರಂಗ

ಬೆಂಗಳೂರು, ಜೂನ್ 12: ಭಾರತದ ಉನ್ನತ ರಾಜಕೀಯ ನಾಯಕರು ಸೇರಿದಂತೆ ನಾಗರಿಕರ ಆಧಾರ್, ಪ್ಯಾನ್ ಸೇರಿದಂತೆ ದತ್ತಾಂಶಗಳ (Data) ಟೆಲಿಗ್ರಾಮ್ ನಲ್ಲಿ ಲಭ್ಯವಿದೆ ಎಂಬ ಆಘಾತಕಾರಿ ವರದಿಯೊಂದು ಸೋಮವಾರ ಹೊರಹೊಮ್ಮಿದೆ.

ಸರ್ಕಾರ ವ್ಯಾಪ್ತಿಯ ಕೋವಿಡ್ ಲಸಿಕೆಯ ಪೋರ್ಟಲ್ ಆಗಿರುವ ಕೋವಿನ್ (CoWIN) ವೆಬ್‌ಸೈಟ್‌ನಲ್ಲಿ ಲಸಿಕೆ ಪಡೆಯಲು ನೋಂದಾಯಿಸಿಕೊಂಡ ಎಲ್ಲಾ ಭಾರತೀಯ ನಾಗರಿಕರ ವೈಯಕ್ತಿಕ ಮಾಹಿತಿಯು ಉಚಿತವಾಗಿ ಟೆಲಿಗ್ರಾಮ್‌ ಅಪ್ಲಿಕೇಷನ್‌ನಲ್ಲಿ ಲಭ್ಯವಿದೆ. ಆದರೆ ಗೌಪ್ಯವಾಗಿರಬೇಕಾದ ಭಾರತೀಯ ಪ್ರಜೆಯ ವೈಯಕ್ತಿ ಮಾಹಿತಿ ಸಾರ್ವಜನಿಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

CoWIN Data Leakage: Indian Citizens Aadhaar Pan etc Personal Data expose through Teligram App

ದಿ ಫೋರ್ತ್ ನ್ಯೂಸ್‌ ವರದಿ ಪ್ರಕಾರ, ಭಾರತೀಯ ನಾಗರಿಕರ ವೈಯಕ್ತಿಕ ಮಾಹಿತಿ, ಅವರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್‌ನಲ್ಲಿ ಲಭ್ಯವಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

ಕೋವಿನ್ (CoWIN) ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ನಮೂದಿಸಿದರೆ ಟೆಲಿಗ್ರಾಮ್ ಬಾಟ್ ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಆಧಾರನಲ್ಲಿನ ವ್ಯಕ್ತಿಯ ಹೆಸರು, ಲಿಂಗ, ಜನ್ಮ ವರ್ಷ ಮತ್ತು ಲಸಿಕೆ ಕೇಂದ್ರದ ಹೆಸರು ಮತ್ತು ಅವನ /ಅವಳ ಡೋಸ್, ಅಲ್ಲದೇ ಆಧಾರ-ಪ್ಯಾನ್ ಸಂಖ್ಯೆ ಸಹ ಬಹಿರಂಗಪಡಿಸುತ್ತದೆ

ಎಂದು ವರದಿ ಹೇಳಿದೆ. ಈ ಮೂಲಕ ಡೇಟಾ ನಿಯಮಗಳು ಉಲ್ಲಂಘನೆ ಆಗಿರುವುದು ಸ್ಪಷ್ಟವಾಗುತ್ತದೆ.

CoWIN Data Leakage: Indian Citizens Aadhaar Pan etc Personal Data expose through Teligram App

ಟೆಲಿಗ್ರಾಮ್ ಮೂಲಕ ಭಾರತೀಯ ನಾಗರಿಕರ ವೈಯಕ್ತಿಕ ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಗಳನ್ನು ಯಾರಾಬೇಕಾದರೂ ನೋಡಬಹುದು. ಅಷ್ಟೇ ಅಲ್ಲದೇ ದುರ್ಬಳಕೆಗೂ ಇದು ದಾರಿಯಾಗುತ್ತದೆ.

ಅಧಿಕಾರಿಗಳಿಂದ ಕೋವಿನ್ ಡೇಟಾ ಪರಿಶೀಲನೆ

ಕೋವಿನ್ ಡೇಟಾಬೇಸ್ ನಲ್ಲಿನ ಸೂಕ್ಷ್ಮ ಮಾಹಿತಿ ಬಹಿರಂಗಪಡಿಸಿದ ಟೆಲಿಗ್ರಾಮ್ ಬೋಟ್‌ನ ಡೆವಲಪರ್‌ಗಳನ್ನು ನಿಷ್ಕ್ರೀಯಗೊಳಿಸಲಾಗಿದೆ. ಅಲ್ಲದೇ ಡೇಟಾಬೇಸ್ ಗೆ ಖಾಸಗಿಯವರ ಪ್ರವೇಶ ಕುರಿತು ಸಂಪೂರ್ಣ ಆಡಿಟ್ ನಡೆಸಲಾಗುತ್ತದೆ. ಅಲ್ಲದೇ ಕೋವಿನ್ ಡೇಟಾಬೇಸ್ ನಲ್ಲಿನ ಮಾಹಿತಿ ಹಾಗೂ ಟೆಲಿಗ್ರಾಮ್ ಬಾಟ್‌ ಮಾಹಿತಿಯ ಸ್ಕ್ರೀನ್ ಶಾಟ್‌ಗಳನ್ನು ನಿಜವೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಸರ್ಕಾರಿ ಅಧಿಕಾರಿಗಳು CoWIN ಅಪ್ಲಿಕೇಶನ್‌ನ ಹ್ಯಾಕ್ ಆಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ನಮ್ಮ ಕೋವಿನ್ ಅಪ್ಲಿಕೇಶನ್‌ಗೆ ಹೊರಗಿನಿಂದ ಯಾರಾದರೂ ಪ್ರವೇಶಿಸುತ್ತಿದ್ದಾರೆಯೇ? ಎಂದು ಪರಿಶೀಲಿಸುತ್ತೇವೆ ಎಂದರು.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ವೈಯಕ್ತಿಕ ಮಾಹಿತಿ ಸಹ ಸೋರಿಕೆಯಾಗಿದೆ. ಸಾಮಾಜ್ಯ ಜನರಿಂದ ಹಿಡಿದು ಉನ್ನತ ರಾಜಕರಾಣಿಗಳ ಡೇಟಾ ಸೋರಿಕೆ ಆಗಿದೆ. ಉತ್ತರಾಖಂಡ ಶಾಸಕರೊಬ್ಬರ ಮೊಬೈಲ್ ಸಂಖ್ಯೆ ನಮೂದಿಸಿದರೆ ಶಾಸಕರ ಆಧಾರ್ ನ ಅಂತಿಮ ನಾಲ್ಕು ಸಂಖ್ಯೆ ಮತ್ತು ಜನ್ಮ ದಿನಾಂಕ ಹಾಗೂ ಇನ್ನಿತರ ಮಾಹಿತಿಗಳು ಬಹಿರಂಗಗೊಂಡಿವೆ.

ಯಾವ ರಾಜಕೀಯ ನಾಯಕರ ಮಾಹಿತಿ ಬಹಿರಂಗ

ಇವರಷ್ಟೇ ಅಲ್ಲದೇ ಕೋವಿನ್ ಹೈಪವರ್ ಪ್ಯಾನೆಲ್‌ನ ಅಧ್ಯಕ್ಷ ರಾಮ್ ಸೇವಕ್ ಶರ್ಮಾ, ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಕೇಂದ್ರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ವೈಯಕ್ತಿಕ ವಿವರಗಳು ಸೋರಿಕೆ ಆಗಿದ್ದರ ಬಗ್ಗೆ ವರದಿ ಆಗಿದೆ.

2021ರಲ್ಲಿ ಸರ್ಕಾರದ ನಿರ್ವಹಣೆಯಲ್ಲಿರುವ CoWIN ಪೋರ್ಟಲ್ ಅನ್ನು ಹ್ಯಾಕ್ ಮಾಡಲಾಗಿದೆ. 15 ಕೋಟಿ ಜನರ ಡೇಟಾಬೇಸ್ ಮಾರಾಟಕ್ಕೆ ಕಾರಣವಾಯಿತು ಎಂದು ವರದಿಯಾಗಿತ್ತು. ಆದರೆ ಈ ಸೋರಿಕೆಯನ್ನು ಸೈಬರ್ ಅಧಿಕಾರಿಗಳು ಒಪ್ಪಲಿಲ್ಲ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌ಎಸ್ ಶರ್ಮಾ ಅವರು, ಕೋವಿನ್ ಪೋರ್ಟಲ್ ಅತ್ಯಾಧುನಿಕ ಭದ್ರತಾ ಮೂಲ ಸೌಕರ್ಯ ಹೊಂದಿದೆ. ಹೀಗಾಗಿ ಕೋವಿನ್‌ ನಿಂದ ಮಾಹಿತಿ ಸೋರಿಕೆ ಆಗಿಲ್ಲ. ದೇಶದ ನಾಗರಿಕರ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರು ನಾಗರಿಕರು ಮತ್ತು ಉನ್ನತ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಸೋರಿಕೆ ಬಗ್ಗೆ ವಿಷಾಧಿಸಿದ್ದಾರೆ. ಇದು ಪ್ರಧಾನಿ ಮೋದಿ ಸರ್ಕಾರದ ಪ್ರಮುಖ ಡೇಟಾ ಉಲ್ಲಂಘನೆಯಾಗಿದೆ. ಸರ್ಕಾರದ ಸುಪರ್ದಿಯಲ್ಲಿದ್ದ ಭಾರತೀಯ ನಾಗರಿಕರ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆಗಳು, ಪಾಸ್‌ಪೋರ್ಟ್ ಸಂಖ್ಯೆಗಳು, ವೋಟರ್ ಐಡಿ, ಕುಟುಂಬ ಸದಸ್ಯರ ವಿವರಗಳು, ಲಸಿಕೆ ಪಡೆದ, ಪಡೆಯದ ಭಾರತೀಯರ ವೈಯಕ್ತಿಕ ವಿವರಗಳು ಸೋರಿಕೆ ಆಗಿವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+