ಕೋವಿಡ್ ಭೀತಿ; ಬೆಂಗಳೂರಲ್ಲಿ ಲಭ್ಯವಿರುವ ಅಂಬ್ಯುಲೆನ್ಸ್‌ಗಳ ಲೆಕ್ಕ

ಬೆಂಗಳೂರು, ಜುಲೈ 07 : ಬೆಂಗಳೂರು ನಗರದಲ್ಲಿ ಕೋವಿಡ್ - 19 ಸೋಂಕಿತರು ಆಸ್ಪತ್ರೆಗೆ ತೆರಳಲು ಅಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ದಿನವಿಡೀ ಕಾದರೂ ಅಂಬ್ಯುಲೆನ್ಸ್ ಬರುತ್ತಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಬಿಬಿಎಂಪಿ ಅಂಬ್ಯುಲೆನ್ಸ್ ಕೊರತೆ ಇಲ್ಲ ಎಂದು ಹೇಳಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯವಾರು ಅಂಬ್ಯುಲೆನ್ಸ್‌ಗಳನ್ನು ಹಂಚಿಕೆ ಮಾಡಿದೆ. ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಟೆಂಪೋ ಟ್ರಾವೆಲರ್ ವ್ಯವಸ್ಥೆಗಳನ್ನು ಮಾಡಿದೆ.

ಬೆಂಗಳೂರು ನಗರ ಬಿಟ್ಟು ಹೋಗುವವರು ನಗರದಲ್ಲಿ ಚಿಕಿತ್ಸೆಗೆ ಸರಿಯಾದ ಹಾಸಿಗೆಗಳ ವ್ಯವಸ್ಥೆ ಇಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ - 19 ರೋಗಿಗಳಿಗೆ ಮೀಸಲಾದ ಶೇ 78ರಷ್ಟು ಹಾಸಿಗೆಗಳು ಖಾಲಿ ಇವೆ.

ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಕಳೆದ ಒಂದು ವಾರದಿಂದ ಹೆಚ್ಚಾಗುತ್ತಿದೆ. ಸೋಮವಾರ ನಗರದಲ್ಲಿ 981 ಹೊಸ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 10,561.

ಬಿಬಿಎಂಪಿ ಹೇಳುವುದೇನು?

ಬಿಬಿಎಂಪಿ ಹೇಳುವುದೇನು?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಬ್ಯುಲೆನ್ಸ್‌ಗಳು ಮಾತ್ರವಲ್ಲ ಟೆಂಪೋ ಟ್ರಾವೆಲರ್‌ಗಳನ್ನು ಸಹ ಜನರನ್ನು ಕರೆದುಕೊಂಡು ಹೋಗಲು ನಿಯೋಜನೆ ಮಾಡಿದೆ. ನಗರದ 198 ವಾರ್ಡ್‌ಗಳಲ್ಲಿ 250 ಒಟ್ಟು ವಾಹನಗಳು ಲಭ್ಯವಿವೆ.

ಅಂಬ್ಯುಲೆನ್ಸ್ ಕೊರತೆ ಇಲ್ಲ

ಅಂಬ್ಯುಲೆನ್ಸ್ ಕೊರತೆ ಇಲ್ಲ

ಬೆಂಗಳೂರು ನಗರದಲ್ಲಿ ಅಂಬ್ಯುಲೆನ್ಸ್‌ಗಳು ಲಭ್ಯವಿಲ್ಲ ಎಂದು ಜನರು ಆರೋಪ ಮಾಡುತ್ತಿದ್ದಾರೆ. ಆದರೆ, ವಲಯವಾರು ವಾಹನಗಳನ್ನು ನಿಯೋಜನೆ ಮಾಡಲಾಗಿದೆ. 71 ಅಂಬ್ಯುಲೆನ್ಸ್‌ ಮತ್ತು 179 ಟೆಂಪೋ ಟ್ರಾವೆಲರ್‌ಗಳು ನಗರದಲ್ಲಿ ಲಭ್ಯವಿದೆ.

ವಲಯವಾರು ವಿವರಗಳು

ವಲಯವಾರು ವಿವರಗಳು

ಪೂರ್ವ ವಲಯದಲ್ಲಿ 6 ಅಂಬ್ಯುಲೆನ್ಸ್, 33 ಟೆಂಪೋ ಟ್ರಾವೆಲರ್ ಸೇರಿ 39 ವಾಹನ ಲಭ್ಯವಿದೆ. ಪಶ್ಚಿಮ ವಿಭಾಗದಲ್ಲಿ 10 ಅಂಬ್ಯುಲೆನ್ಸ್, 54 ಟೆಂಪೋ ಟ್ರಾವೆಲರ್ ಸೇರಿ 64 ವಾಹನವಿದೆ. ದಕ್ಷಿಣ ವಲಯದಲ್ಲಿ 20 ಅಂಬ್ಯುಲೆನ್ಸ್ ಇದ್ದರೆ, 47 ಟೆಂಪೋ ಟ್ರಾವೆಲರ್‌ಗಳಿವೆ. ಬೊಮ್ಮನಹಳ್ಳಿ ವಲಯದಲ್ಲಿ 6 ಅಂಬ್ಯುಲೆನ್ಸ್ ಮತ್ತು 11 ಟಿಟಿ ಸೇರಿ ಒಟ್ಟು 17 ವಾಹನವಿದೆ.

ವಲಯವಾರು ಹಂಚಿಕೆ ಹೀಗಿದೆ

ವಲಯವಾರು ಹಂಚಿಕೆ ಹೀಗಿದೆ

* ರಾಜರಾಜೇಶ್ವರ ನಗರ ಅಂಬ್ಯುಲೆನ್ಸ್ 10, ಟಿಟಿ 10 ಒಟ್ಟು 20
* ದಾಸರಹಳ್ಳಿ 5 ಅಂಬ್ಯುಲೆನ್ಸ್, ಟಿಟಿ 7 ಒಟ್ಟು 12
* ಯಲಹಂಕ 9 ಅಂಬ್ಯುಲೆನ್ಸ್, ಟಿಟಿ 6 ಒಟ್ಟು 15
* ಮಹದೇವಪುರ 5 ಅಂಬ್ಯುಲೆನ್ಸ್, 11 ಟಿಟಿ ಒಟ್ಟು 16

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+