ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮೂರು ಪಟ್ಟು ಹೆಚ್ಚಾದ ಕೋವಿಡ್ ಪ್ರಕರಣ

|
Google Oneindia Kannada News

ಬೆಂಗಳೂರು ಜೂ. 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ದಿನೇ ದಿನೆ ಉಲ್ಬಣಗೊಳ್ಳುತ್ತಿದೆ. ಕಳೆದ ಹತ್ತು ದಿನದಲ್ಲಿ ನಗರದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದ ಶೇ.1.1ರಷ್ಟಿದ್ದ ಪಾಸಿಟಿವಿಟಿ ದರ ಶೇ. 2.9ಕ್ಕೆ ತಲುಪಿದೆ. ಬಿಬಿಎಂಪಿ ಕೊರೋನಾ ವರದಿ ಪ್ರಕಾರ, ಕಳೆದ ಮೇ 31ರಂದು 178 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಜೂ.10 ರಂದು 494 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಈ ಮೂಲಕ ಸೋಂಕು ಆರ್ಭಟಿಸುವ ಮುನ್ಸೂಚನೆ ನೀಡಿದೆ.

ಕೆಲ ವಾರ್ಡ್‌ಗಳಲ್ಲಿ ಸೋಂಕು ಉಲ್ಬಣ:

ಬಿಬಿಎಂಪಿ ವ್ಯಾಪ್ತಿಯ ಹತ್ತು ವಾರ್ಡ್‌ಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗಿದೆ. ಈ ಪೈಕಿ ಮಹಾದೇವಪುರ ಮತ್ತು ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ವಾರ್ಡಗಳಲ್ಲಿ ಅಧಿಕ ಜನರು ಸೋಂಕಿಗೆ ತುತ್ತಾಗಿರುವುದು ಗೊತ್ತಾಗಿದೆ. ಈ ವ್ಯಾಪ್ತಿಯಲ್ಲಿನ ವಾರ್ಡಗಳಲ್ಲಿ ಅತ್ಯಧಿಕ ಜನಸಂಖ್ಯೆ ಇರುವುದರಿಂದ ಹಾಗೂ ಕೋವಿಡ್ ಭಿತಿ ಕಡಿಮೆಯಾದಾಗಿನಿಂದ ಈವರೆಗೆ ಸರ್ಕಾರದ ಮಾರ್ಗಸೂಚಿ ಪಾಲಿಸಿದಿರುವುದರಿಂದ ಸೋಂಕು ಹೆಚ್ಚಳವಾಗಿದೆ.

Covid Positive Cases Increase in Bengaluru City

ಬೆಳ್ಳಂದೂರು ಒಂದರಲ್ಲಿ 1.30ಲಕ್ಷ ಜನಸಂಖ್ಯೆ, ಅದೇ ರೀತಿ ವರ್ತೂರು, ಹಗದೂರಿನಲ್ಲಿ ಸುಮಾರು 60ಸಾವಿರ ಜನರು ಇದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿಯೇ ಆಭಾಗದಲ್ಲಿ ಸೋಂಕಿನ ಅಬ್ಬರ ಹೆಚ್ಚಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ (ಮಹಾದೇವಪುರ) ಡಾ. ಸುರೇಂದರ್ ತಿಳಿಸಿದ್ದಾರೆ.

ರಾಜ್ಯದ ನಾನಾ ಭಾಗದಿಂದ ಬಂದು ನಗರದಲ್ಲಿರುವ ವಲಹೆ ಹಾಗೂ ಕೂಲಿ ಕಾರ್ಮಿಕರ ಪ್ರದೇಶಗಳಲ್ಲಿ ಸಹ ಕೊರೋನಾ ಹೆಚ್ಚಾಗಿದೆ. ಅಲ್ಲದೇ ಇತ್ತೀಚೆಗೆ ನೆರೆ ರಾಜ್ಯ ಹಾಗೂ ವಿದೇಶಗಳಿಗೆ ಜನ ನಗರದಿಂದ ಹೋಗುವುದು ಮತ್ತು ನಗರಕ್ಕೆ ಮರಳುವುದು ಸೋಂಕು ಅಧಿಕವಾಗಲು ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Covid Positive Cases Increase in Bengaluru City

ಕೋವಿಡ್ ಪರೀಕ್ಷೆ ಹೆಚ್ಚಳ:

ಸೋಂಕಿನ ಹರಡುವಿಕೆ ತಡೆಯುವ ಸಲುವಾಗಿ ಮಹಾದೇವಪುರ ವಲಯದಲ್ಲಿ 5-12ಕ್ಲಸ್ಟರ್ ಗಳನ್ನ ನಿರ್ಮಿಸಲಾಗಿದೆ. ಸೋಂಕಿತರಿಗೆ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೊದಲು ಮಹಾದೇವಪುರದಲ್ಲಿ ನಿತ್ಯ ಸುಮಾರು 1400 ಕೊರೋನಾ ಟೆಸ್ಟ್‌ ಮಾಡಲಾಗುತ್ತಿದ್ದು, ಇದೀಗ ಅದನ್ನು 2,000 ಕ್ಕೆ ಹೆಚ್ಚಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

(ಒನ್ಇಂಡಿಯಾ ಸುದ್ದಿ)

English summary
Coronavirus cases are on rise in Bengaluru city. The positivity rate has increased almost three fold in last 10 days. This can be an alarm bell for fourth Covid wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X