ಬೆಂಗಳೂರು: ಒಂದೇ ದಿನ 100ಕ್ಕೂ ಹೆಚ್ಚು ಕೊರೊನಾ ಕೇಸ್, ಪಾಸಿಟಿವಿಟ್ ರೇಟ್ 4.1ಕ್ಕೆ ಜಂಪ್, ಹೆಚ್ಚಾಯ್ತು ಆತಂಕ
ಬೆಂಗಳೂರು, ಏಪ್ರಿಲ್ 04: ದೇಶಾದ್ಯಂತ ಹೆಚ್ಚಳವಾಗುತ್ತಿದ್ದ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳ ಭೀತಿ ಇದೀಗ ಬೆಂಗಳೂರಿಗೂ ಆವರಿಸಿದೆ. ನಗರದಲ್ಲಿ ಕೊರೊನಾ ತೀವ್ರ ಹೆಚ್ಚುತ್ತಿದೆ.
ಸೋಮವಾರ ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ 100ಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಕಳೆದ ಹಲವು ತಿಂಗಳುಗಳ ನಂತರ ನಾಲ್ಕನೇ ಬಾರಿಗೆ ನಗರದಲ್ಲಿ 100ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಕಳವಳ ವ್ಯಕತಪಡಿಸಿರುವ ಆರೋಗ್ಯ ಇಲಾಖೆ ಮಾರ್ಗಸೂಚಿ ಪಾಲಿಸುವಂತೆ ಜನರಿಗೆ ಎಚ್ಚರಿಕೆ ನೀಡಿದೆ.

ಸೋಮವಾರ ಸಂಜೆಯವರೆಗೆ ಹೋಲಿಕೆ ಮಾಡಿದೆ ಅದರ ಹಿಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 132 ಡಿಸ್ಚಾರ್ಜ್ ವಿರುದ್ಧ ರಾಜ್ಯದಲ್ಲಿ 284 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,410 ಕ್ಕೆ ತಲುಪಿದೆ.
ರಾಜ್ಯದಲ್ಲಿ ದಾಖಲಾಗದ ಒಟ್ಟು ಪ್ರಕರಣಗಳ ಪೈಕಿ ಬೆಂಗಳೂರು ಒಂದರಲ್ಲೇ ಒಂದೇ ದಿನಕ್ಕೆ 109 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ನಗರದ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 4.11ಕ್ಕೆ ಏರಿಕೆ ಆಗುವ ಮೂಲಕ ನಗರ ನಿವಾಸಿಗಳಲ್ಲಿ ಹಾಗೂ ಆರೋಗ್ಯ ಇಲಾಖೆಯಲ್ಲಿ ಆತಂಕ ಸೃಷ್ಟಿ ಮಾಡಿದೆ.
ಇನ್ನೂ ರಾಜ್ಯದಲ್ಲಿ ಒಂದೇ ಬಾರಿಗೆ 284 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಕರ್ನಾಟಕ ರಾಜ್ಯದ ಕೊವಿಡ್ ಪಾಸಿಟಿವಿಟಿ ದರ (ರೇಟ್) ಶೇಕಡಾ 3.22 ಕ್ಕೆ ತಲುಪಿದೆ. ಕರ್ನಾಟಕದಲ್ಲಿ ಒಬ್ಬರ ಕೊರೊನಾ ಸೋಂಕಿತ ರೋಗಿ ಮೃತಪಟ್ಟಿದ್ದು, ಬೆಂಗಳೂರಿನಲ್ಲಿ ಒಂದು ಸಾವು ಆಗಿಲ್ಲ ಎಂದು ವರದಿಯಾಗಿದೆ.

ಐಪಿಎಲ್ ಪಂದ್ಯದ ಮೆಲೆ ಕೊರೊನಾ ಛಾಯೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಒಟ್ಟು ಪಂದ್ಯಗಳ ಪೈಕಿ ಹಲವು ಮ್ಯಾಚ್‌ಗಳು ಉದ್ಯಾನ ನಗರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಮೊದಲ ದಿನ ಏಪ್ರಿಲ್ 2ರಂದು ಭಾನುವಾರ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಆಟವಾಡಿವೆ. ಕೊರೊನಾ ಪಂದ್ಯಾವಳಿ ವೇಳೆ ಜನರು ಹೆಚ್ಚೆಚ್ಚು ಗುಂಪು ಸೇರುವುದರಿಂದ ಕೊರೊನಾ ಸೋಂಕಿನ ಪ್ರಕರಣಗಳು ಇನ್ನಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಪಂದ್ಯಾವಳಿಯನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ. ಗುಂಪು ಗಂಪಾಗಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಈ ಕಾರಣಗಳಿಂದಲೂ ನಗರದಲ್ಲಿ ಕೊರೊನಾ ಏರಿಕೆ ಆಯಿತೇ? ಎಂಬ ಅನುಮಾನ ವ್ಯಕ್ತವಾಗಿದೆ ಎಂದು
ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಾಖಲಾದ 109 ಪ್ರಕರಣಗಳ ವಿರುದ್ಧವಾಗಿ ಕೇವಲ 49 ಮಂದಿ ಗುಣಮುಖರಾಗಿದ್ದಾರೆ. ಸದ್ಯ ನಗರದಲ್ಲಿ ಹೊಸ ಪ್ರಕರಣಗಳ ವರದಿಯಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 817ಕ್ಕೆ ಏರಿಕೆ ಆಗಿದೆ. ಒಟ್ಟು 50ಕ್ಕೂ ಅಧಿಕ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಮಂದಿ ಮಾತ್ರ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶಗಳು ಮಾಹಿತಿ ನೀಡಿದೆ.
ಒಂದೇ ದಿನದಲ್ಲಿ ಬಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ 276 ಆಂಟಿಜನ್ ಮತ್ತು 620 ಆರ್‌ಟಿಪಿಸಿಆರ್ ತಾಪಸಣೆ ನಡೆಸಲಾಗಿದೆ. ಒಂದೇ ದಿನದಲ್ಲಿ ಒಟ್ಟು 40ಮಂದಿ ಲಸಿಕೆ ಪಡೆದಿದ್ದಾರೆ. ಅದರಲ್ಲಿ 6 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನೂ 32 ಮಂದಿ ಬೂಸ್ಟರ್ ಡೋಸ್ ಪಡೆದರೆ, ಉಳಿದವರು ಒಂದೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲಿ ಹೆಚ್ಚು ಪ್ರಕರಣ ಪತ್ತೆ
ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಬೆಳ್ಳಂದೂರು, ಎಚ್‌ಎಸ್‌ಆರ್ ಬಡಾವಣೆ, ದೊಡ್ಡಾನೆಕ್ಕುಂದಿ, ವರ್ತೂರು, ಕೊನೇನ ಅಗ್ರಹಾರ, ಬೇಗೂರೂ, ಗರುಡಾಚಾರ್ ಪಾಳ್ಯ, ನ್ಯೂ ತಿಪ್ಪಸಂದ್ರ, ಹಗದೂರು, ಕೋರಮಂಗಳ ಸೇರಿದಂತೆ ಹಲವೆಡೆ ಮಾತ್ರವೇ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಬಿಬಿಎಂಪಿ ಆರೋಗ್ಯ ವರದಿ ತಿಳಿಸಿದೆ.












Click it and Unblock the Notifications