ಕೋವಿಡ್; ಶನಿವಾರ ಬೆಂಗಳೂರಲ್ಲಿ 149 ಸಾವು

ಬೆಂಗಳೂರು, ಏಪ್ರಿಲ್ 25; ಬೆಂಗಳೂರು ನಗರದಲ್ಲಿ ಶನಿವಾರ 17,342 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 149 ಜನರು ಮೃತಪಟ್ಟಿದ್ದಾರೆ. ನಗರದಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 5723ಕ್ಕೆ ಏರಿಕೆಯಾಗಿದೆ.

ಏಪ್ರಿಲ್ 23ರಂದು ಬೆಂಗಳೂರು ನಗರದಲ್ಲಿ 124 ಜನರು ಮೃತಪಟ್ಟಿದ್ದರು. ಏಪ್ರಿಲ್ 24ರ ಹೆಲ್ತ್ ಬುಲೆಟಿನ್ ಪ್ರಕಾರ 149 ಜನರು ಮೃತಪಟ್ಟಿದ್ದಾರೆ. ಈ ತಿಂಗಳಿನಲ್ಲಿ ಮೃತಪಟ್ಟವರ ಸಂಖ್ಯೆ 1093.

ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಒಂದು ತಿಂಗಳಿನಲ್ಲಿ ಸಾವಿನ ಸಂಖ್ಯೆ 1000ದ ಗಡಿ ದಾಟಿದೆ. 2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ 971 ಜನರು ಮೃತಪಟ್ಟಿದ್ದು, ಇದುವರೆಗೂ ಅಧಿಕವಾಗಿತ್ತು.

COVID Bengaluru City Recorded 149 Deaths On April 24

ಏಪ್ರಿಲ್ 15 ರಿಂದ 24ರ ತನಕ 760 ಜನರು ಮೃತಪಟ್ಟಿದ್ದಾರೆ. ಜನವರಿ ಇಂದ ಮಾರ್ಚ್ ತನಕ 301 ಜನರು ಮೃತಪಟ್ಟಿದ್ದರು. ಏಪ್ರಿಲ್ ತಿಂಗಳ ಮೊದಲ 15 ದಿನದಲ್ಲಿ 333 ಜನರು ಸಾವನ್ನಪ್ಪಿದ್ದರು.

ಕೋವಿಡ್ ಸೋಂಕಿತರಿಗೆ ರಾಜ್ಯದಲ್ಲಿ ಹಾಸಿಗೆ ಸಿಗುತ್ತಿಲ್ಲ ಎಂಬುದು ಪ್ರಮುಖ ಆರೋಪವಾಗಿದೆ. ಕರ್ನಾಟಕ ಸರ್ಕಾರ ಶನಿವಾರ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಶೇ 75ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಬೇಕು ಎಂದು ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+