ಮಾಸ್ಕ್‌ ಕಡ್ಡಾಯ ಮಾಡದ ಥಿಯೇಟರ್, ಹೋಟೆಲ್: ದಂಡದ ಮೊತ್ತ 10 ಸಾವಿರಕ್ಕೆ ಇಳಿಕೆ

ಬೆಂಗಳೂರು, ಡಿಸೆಂಬರ್ 10: ಮಾಸ್ಕ್ ಕಡ್ಡಾಯವಿಲ್ಲದ ಥಿಯೇಟರ್ ಹಾಗೂ ಹೋಟೆಲ್‌ಗಳಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು 10 ಸಾವಿರ ರೂ.ಗೆ ಇಳಿಸಲಾಗಿದೆ.

ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಮೇಲೆ ನಿಗಾವಹಿಸಲು ವಿಫಲವಾಗಿರುವ ಹೋಟೆಲ್‌, ಥಿಯೇಟರ್‌ಗಳು, ಮಾಲ್‌ಗಳು, ಕಲ್ಯಾಣ ಮಂಟಪಗಳ ಮೇಲೆ ಬಿಬಿಎಂಪಿ ವಿಧಿಸಿದ್ದ 1 ಲಕ್ಷ ರೂ. ದಂಡದ ಮೊತ್ತವನ್ನು 10 ಸಾವಿರ ರೂ.ಗಳಿಗೆ ಇಳಿಸಿದೆ.

Mask

ಹವಾನಿಯಂತ್ರಿತವಲ್ಲದ ಪಾರ್ಟಿ ಹಾಲ್‌ ಮತ್ತು ಡಿಪಾರ್ಟ್‌ಮೆಂಟ್‌ ಸ್ಟೋರ್‌ಗಳಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.ಹವಾನಿಯಂತ್ರಿತ ಪಾರ್ಟಿ ಹಾಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಬ್ರಾಂಡೆಡ್ ಅಂಗಡಿಗಳು (ಏಕ ಮತ್ತು ಬಹು ಬ್ರಾಂಡ್‌ಗಳು), ಶಾಪಿಂಗ್ ಮಾಲ್‌ಗಳು, ತ್ರೀ-ಸ್ಟಾರ್ ಮತ್ತು ಅದಕ್ಕಿಂತ ಹೆಚ್ಚಿನ ಹೋಟೆಲ್‌ಗಳು, ಕನಿಷ್ಠ 500 ಜನರ ಸಾಮರ್ಥ್ಯವಿರುವ ಮದುವೆ ಅಥವಾ ಸಮಾವೇಶ ಸಭಾಂಗಣಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಲು ವಿಫಲವಾದರೆ 10,000 ದಂಡ ವಿಧಿಸಲಾಗುತ್ತದೆ.

ಗ್ರಾಹಕರು ಕೋವಿಡ್ ನಿಯಮ ಉಲ್ಲಂಘಿಸಿದರೆ, ಆಯಾ ವಾಣಿಜ್ಯ ಮಳಿಗೆ ಮೇಲೆ ದಂಡ ವಿಧಿಸುವುದಾಗಿ ಈಚೆಗೆ ಬಿಬಿಎಂಪಿ ಅಧಿಸೂಚನೆ ಹೊರಡಿಸಿದ್ದು, ಈ ಕುರಿತಂತೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸದಸ್ಯರು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅವರನ್ನು ಭೇಟಿಯಾಗಿ ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು.

ರೆಸ್ಟೋರೆಂಟ್, ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ತಿನ್ನುವಾಗ, ಕುಡಿಯುವಾಗ ಮಾಸ್ಕ್‌ ಹಾಕಿಕೊಳ್ಳಲು ಆಗುವುದಿಲ್ಲ. ಸರ್ಕಾರಕ್ಕೆ ತಾನು ಹೊರಡಿಸಿರುವ ಅಧಿಸೂಚನೆ ಕುರಿತು ಸ್ಪಷ್ಟತೆ ಹೊಂದಿಲ್ಲ.

ಮಾಸ್ಕ್‌ ಧರಿಸುವುದು, ನಿಯಮ ಪಾಲಿಸುವುದು ನಾಗರೀಕರ ಕರ್ತವ್ಯ. ವಾಣಿಜ್ಯ ಮಳಿಗೆಗಳ ಮಾಲೀಕರೂ, ತಮ್ಮ ಗ್ರಾಹಕರು ಮಾಸ್ಕ್‌ ಧರಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಿಸಬಹುದು.

ಆದರೆ ಮಾಲೀಕರ ಮೇಲೆ ದಂಡ ಹೇರುವುದು ಸರಿಯಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+