ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಗಾರ್ಡ್‌ ಮೇಲೆ ಹಲ್ಲೆ, ಇಬ್ಬರ ಬಂಧನ

|
Google Oneindia Kannada News

ಬೆಂಗಳೂರು, ಮೇ. 25: ರೋಗಿಯ ಮುಖ ತೋರಿಸಲಿಲ್ಲ ಎಂದು ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಸೆಕ್ಯುರಿಟಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವೈದ್ಯರನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನದಿಂದ ಬೇಡಿದರೂ ಮುಖ ನೋಡಲು ಅವಕಾಶ ಕೊಟ್ಟಿರಲಿಲ್ಲ.

ನಾಗರಭಾವಿ ನಿವಾಸಿ ಪ್ರಶಾಂತ್ ಹಾಗೂ ಬ್ಯಾಡರಹಳ್ಳಿ ನಿವಾಸಿ ವೆಂಕಟೇಶ್ ಬಂಧಿತರು. ಕೋವಿಡ್ ಸೋಂಕಿತ ರೋಗಿಯನ್ನು ನೋಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಎರಡು ದಿನದ ಹಿಂದೆ ವೆಂಕಟೇಶ್ ಮತ್ತು ಪ್ರಶಾಂತ್ ಬಿಜಿಎಸ್ ಆಸ್ಪತ್ರೆ ಮುಂದೆ ಜಗಳ ತೆಗೆದಿದ್ದಾರೆ.

Covid 19: Two persons held for assault on BGS global hospital guard

Recommended Video

ಕೊರೊನಾ ಸೋಂಕಿತರನ್ನು ರಂಜಿಸಲು ಕುಣಿದು ಕುಪ್ಪಳಿಸಿದ ಶಾಸಕ ರೇಣುಕಾಚಾರ್ಯ | Oneindia Kannada

ರೋಗಿಯನ್ನು ನೋಡಲು ಬಿಡದ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾರೆ. ಕೋವಿಡ್ ಸೋಂಕಿತ ರೋಗಿಯನ್ನು ನೋಡಲು ಅವಕಾಶ ನೀಡಲ್ಲ ಎಂದು ಬುದ್ಧಿವಾದ ಹೇಳಿದ ವೈದ್ಯರ ವಿರುದ್ಧವೂ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಕೂಡಲೇ ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

English summary
Two men have been arrested by Kengeri Police on charges of assaulting a BGS Global Hospital Guard know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X