ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದ ಅಪೋಲೊ ಹಾಗೂ ವಿಕ್ರಂ ಆಸ್ಪತ್ರೆಯ ಒಪಿಡಿ ಬಂದ್‌ಗೆ ಆದೇಶ

|
Google Oneindia Kannada News

ಬೆಂಗಳೂರು, ಜುಲೈ 14: ಜಯನಗರದ ಅಪೋಲೊ ಹಾಗೂ ವಿಕ್ರಂ ಆಸ್ಪತ್ರೆಯ ಒಪಿಡಿ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Recommended Video

ಸದ್ಯಕ್ಕೆ ಸರಿಯಾಗೋದಿಲ್ಲ ಕೊರೊನ ಪರಿಸ್ಥಿತಿ - WHO | Oneindia Kannada

ಕೊವಿಡ್ ಸೋಂಕಿತರಿಗೆ ಸರ್ಕಾರ ನಿಗದಿ ಮಾಡಿರುವ ಶೇ 50 ರಷ್ಟು ಹಾಸಿಗೆಗಳಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನಲೆಯಲ್ಲಿ ಎರಡು ಆಸ್ಪತ್ರೆಗಳ ಹೊರ ರೋಗಿಗಳ ಚಿಕಿತ್ಸೆಯನ್ನು 48 ಗಂಟೆಗಳ ಕಾಲ ಸ್ಥಗಿತ ಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆಗಸ್ಟ್‌ 15ಕ್ಕೆ ಭಾರತಕ್ಕೆ ದೊರೆಯಲಿದೆ ರಷ್ಯಾದ ಕೊರೊನಾ ಲಸಿಕೆಆಗಸ್ಟ್‌ 15ಕ್ಕೆ ಭಾರತಕ್ಕೆ ದೊರೆಯಲಿದೆ ರಷ್ಯಾದ ಕೊರೊನಾ ಲಸಿಕೆ

ವಸಂತ ನಗರದಲ್ಲಿರುವ ಪ್ರತಿಷ್ಟಿತ ವಿಕ್ರಂ ಆಸ್ಪತ್ರೆ ಹಾಗೂ ಜಯನಗರದಲ್ಲಿರುವ ಅಪೋಲೊ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಅಧಿಕೃತ ಜ್ಞಾಪನಾಪತ್ರವನ್ನು ರವಾನಿಸಿದ್ದಾರೆ.

DC Orders Cancellation Of Outpatient Services In Two Hospitals For 48 Hours

24 ಗಂಟೆಗಳ ಒಳಗಾಗಿ ಜಿಲ್ಲಾಡಳಿತಕ್ಕೆ ಸ್ಪಷ್ಟ ಕಾರಣ ಕೇಳಿ ನೋಟಿಸ್‌ ನೀಡಿತ್ತು.ಆದರೆ ನೋಟಿಸ್‌ಗೆ ಉತ್ತರಿಸದಿರುವ ಹಿನ್ನಲೆಯಲ್ಲಿ ತಡರಾತ್ರಿ ಬಿಬಿಎಂಪಿ ಅಧಿಕಾರಿಗಳು ಎರಡೂ ಆಸ್ಪತ್ರೆಗಳಿಗೆ ಬೇಟಿ ನೀಡಿ ಆಡಳಿತ ಮಂಡ ಳಿ ಜೊತೆ ಮಾತುಕತೆ ನಡೆಸಿ ತಕ್ಷಣ ಬೆಡ್ ಗಳನ್ನು ನೀಡುವಂತೆ ಸೂಚಿಸಿದ್ದರು.

ಇಷ್ಟಾದರೂ ಎಚ್ಚೆತ್ತುಕೊಳ್ಳದ ಖಾಸಗಿ ಆಸ್ಪತ್ರೆಗಳ ವಿರುದ್ಧ ಹೊರ ರೋಗಿಗಳ ಚಿಕಿತ್ಸೆ ಬಂದ್ ಮಾಡುವಂತೆ ಸೂಚಿಸಿದ್ದಾರೆ.ಇದನ್ನೂ ಉಲ್ಲಂಘಿಸಿದರೆ ಆಸ್ಪತ್ರೆಯನ್ನು ವಿಪತ್ತು ನಿರ್ವಹಣಾ ಕಾಯಿದೆಯಡಿ ಪ್ರಕರಣ ದಾಖಲಿಸಿ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ರವಾನಿಸಿದ್ದಾರೆ.

ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಆದ ಮಾತುಕತೆ ಪ್ರಕಾರ ಸರ್ಕಾರಕ್ಕೆ ಶೇ 50ರಷ್ಟು ಬೆಡ್ ನೀಡಲು ಕಳೆದ ವಾರವಷ್ಟೇ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ನೀಡಿದ್ದವು. ಆದರೆ ಇದುವರೆಗೂ ತಮ್ಮಲ್ಲಿರುವ ಬೆಡ್ ಗಳ ಮಾಹಿತಿ, ಕೊವಿಡ್ ಸೋಂಕಿತರನ್ನು ದಾಖಲಿಸಿಕೊಂಡಿರುವ ವಿಷಯ,ಇಂತಿಷ್ಟು ಬೆಡ್ ಗಳನ್ನು ನೀಡುವ ಬಗ್ಗೆ ಮಾಹಿತಿ ನೀಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಎರಡು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದರು.

English summary
DC orders cancellation of outpatient services for 48 hours at Apollo hospital in Jayanagar and Vikram hospital in Bengaluru for allegedly not admitting COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X