ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋರಾಟಗಾರರ ದಾಹ ತಣಿಸುತ್ತಿದ್ದ ಪಿಂಟೂ ಪ್ರಕಾಶ್ ಕೋವಿಡ್‌ಗೆ ಬಲಿ!

|
Google Oneindia Kannada News

ಬೆಂಗಳೂರು, ಮೇ. 22: ಸ್ವಾತಂತ್ರ್ಯ ಉದ್ಯಾನವನ ಪ್ರತಿಭಟಾನಾಕಾರರ ಪಾಲಿಗೆ ತಮ್ಮ ಬಹುಬೇಡಿಕೆ ಈಡೇರಿಸುವ ಹೋರಾಟದ ಕೇಂದ್ರ. ರಾಜ್ಯದ ಮೂಲೆ ಮೂಲೆಯಿಂದಲೂ ಬರುವ ಹೋರಾಟಗಾರರಿಗೆ ಬಾಯಾರಿಕೆ ಆದರೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ಕೊಳಾಯಿ ಕೂಡ ಇಲ್ಲ. ನಡೆದುಕೊಂಡು ಸುಸ್ತಾದ, ಹೋಗಾಟದ ಕೂಗಿನಿಂದ ಬಾಯಾರಿಕೆಯಾದವರಿಗೆ ಕ್ಷಣ ಮಾತ್ರದಲ್ಲಿ ಕುಡಿಯುವ ನೀರು ಒದಗಿಸುತ್ತಿದ್ದ ಬಡಪಾಯಿ ಜೀವ ವಾಟರ್ ಟ್ಯಾಂಕರ್ ಪಿಂಟೂ ಪ್ರಕಾಶ್ ಕೋವಿಡ್ ಗೆ ಬಲಿಯಾಗಿದ್ದಾರೆ. ಇವರ ಅಮೂಲ್ಯ ಸೇವೆಯನ್ನು ಪೊಲೀಸರು ಸ್ಮರಿಸಿಕೊಂಡಿದ್ದಾರೆ.

ಕೊವಿಡ್ 19: ಮೇ 22ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?ಕೊವಿಡ್ 19: ಮೇ 22ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?

ರಾಜಧಾನಿ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಾರಕ್ಕೆ ಎರಡು ಮೂರು ಹೋರಾಟ ನಡೆಯುವ ಜಾಗ. ಪ್ರತಿಭಟನೆ, ಜಾಥಾ, ಅಮರಣಾಂತ ಉಪವಾಸ ಸತ್ಯಾಗ್ರಹ, ಅನಿರ್ಧಿಷ್ಟ ಅವಧಿ ಮುಷ್ಕರ ನಡೆಯುತ್ತವೆ. ಇನ್ನು ಬಂದೋಬಸ್ತ್ ಗೆಗಾಗಿ ಸಶಸ್ತ್ರ ಮೀಸಲು ಪಡೆ, ಸಂಚಾರ ಪೊಲೀಸರು, ಕಾನೂಣು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮೈ ಸುಡುವ ಬೇಸಿಗೆ ಕಾಲದಲ್ಲಂತೂ ಅಲ್ಲಿ ಬಾಯಾರಿಕೆ ಆದರೆ, ನೀರು ಕುಡಿಯಲು ಅರ್ಧ ಕಿ.ಮೀ ನಷ್ಟು ದೂರ ನಡೆದುಕೊಂಡೇ ಹೋಗಬೇಕು. ಒಂದು ಲೋಟ ಕುಡಿಯುವ ನೀರಿಗೂ ಅಲ್ಲಿ ತಾತ್ವಾರ. ಇದೊಂದು ಸಮಸ್ಯೆ ಹೋರಾಟಗಾರರಿಗೆ ಕುಡಿಯುವ ನೀರು ಸೌಲಭ್ಯ ಮಾಡಬೇಕು ಎಂಬ ಸಣ್ಣ ಜ್ಞಾನ ಸರ್ಕಾರದ ಯಾವ ಇಲಾಖೆಯ ಕಣ್ಣಿಗೂ ಬಿದ್ದಿಲ್ಲ. ಪಿಂಟೂ ಪ್ರಕಾಶ್ ಗೆ ಮಾತ್ರ ಅರಿವು ಇತ್ತು.

covid 19: Pintu Prakash a supplier of drinking water to protesters at Freedom Park, has died

ಹೌದು. ಕೊರೊನಾ ಸೊಂಕಿಗೆ ಬಲಿಯಾಗಿರುವ ಬೆಂಗಳೂರು ಜಲ ಮಂಡಳಿ ವಾಟರ್ ಟ್ಯಾಂಕರ್ ಚಾಲಕ ಪಿಂಟೂ ಪ್ರಕಾಶ್ ಹೋರಾಟಗಾರರ ಪಾಲಿಗೆ, ಮುಷ್ಕರಕ್ಕೆ ನಿಯೋಜನೆಗೊಳ್ಳುವ ಪೊಲೀಸರ ದಣಿವಿಗೆ ಸ್ಪಂದಿಸುತ್ತಿದ್ದ ಬಡಪಾಯಿ ಜೀವ. ವಾಟರ್ ಮ್ಯಾನ್ ಪಿಂಟೂ ಅಂತಲೇ ಪೊಲೀಸ್ ಇಲಾಖೆಯಲ್ಲಿ ಚಿರಪರಿಚಿತರಾಗಿದ್ದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಹೋರಾಟದ ವೇಳೆ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಬಡಪಾಯಿ ಜೀವ ಅಳಿಲು ಸೇವೆ ಮಾಡುತ್ತಿತ್ತು. ಸಾವಿರಾರು ಮಂದಿಹ ದಾಹ ತಣಿಸುತ್ತಿದ್ದ ಅಮೂಲ್ಯ ವ್ಯಕ್ತಿತ್ವದ ಮೂಲಕ ಪರಿಚಿತರಾಗಿದ್ದ ಪಿಂಟೂ ಪ್ರಕಾಶ್ ಕೋರೊನಾ ಸೋಂಕಿಗೆ ಬಲಿಯಾಗಿದ್ದಾರೆ.

covid 19: Pintu Prakash a supplier of drinking water to protesters at Freedom Park, has died

ಪಿಂಟೂ ಪ್ರಕಾಶ್ ಅವರ ಸೇವೆಯನ್ನು ಸ್ಮರಿಸಿರುವ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಅವರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಯಾರ ಕಣ್ಣಿಗೂ ಕಾಣದಂತೆ ಕುಡಿಯುವ ನೀರು ಪೂರೈಸುವ ಮೂಲಕ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್ ಅಳಿಲು ಸೇವೆಯನ್ನು ಕೊಂಡಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.

Recommended Video

Surajpur ಜಿಲ್ಲೆಯ Collector ಮಾಡಿದ ಕೆಲಸ ನೋಡಿ | Oneindia Kannada

English summary
BWSSB water tanker driver Pinto Prakash who served drinking water to protesters at Freedom Park, has died due to corona infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X