ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೋನಾ 2ನೇ ಅಲೆ: ಈ ವಯೋಮಿತಿ ಪುರುಷರೇ ಟಾರ್ಗೆಟ್

|
Google Oneindia Kannada News

ಬೆಂಗಳೂರು, ಮಾರ್ಚ್ 21: ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಯಾವ ವಯೋಮಿತಿಯಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ ಎಂಬುದನ್ನು ತಜ್ಞರು ಬಹಿರಂಗ ಪಡಿಸಿದ್ದಾರೆ.

ಕಳೆದ ವರ್ಷ ಇದೇ ಅವಧಿಗೆ ಕೊರೊನಾ ಮೊದಲ ಅಲೆ ಬಂದಾಗ 30 ರಿಂದ 45 ವರ್ಷ ವಯೋಮಿತಿಯವರಿಗೆ ಕೊರೋನಾ ಸೋಂಕು ತಗುಲಿತ್ತು ಹಾಗೂ ಮೃತಪಟ್ಟವರ ವಯೋಮಿತಿಯೂ ಇದೇ ಸರಾಸರಿಯಲ್ಲಿತ್ತು ಎಂದಿದ್ದಾರೆ.

ಕೊರೊನಾ ಎರಡನೇ ಅಲೆ ಬಂದಿದ್ದು, ಕಳೆದ 24 ಗಂಟೆಗಳ ವರದಿ ಪ್ರಕಾರ ಪುರುಷರಲ್ಲೇ ಅತಿ ಹೆಚ್ಚು ಸೋಂಕು ದೃಢಪಟ್ಟಿದ್ದು, 10 ಜನರಲ್ಲಿ‌ ಸುಮಾರು 3-4 ಜನರು ಪುರುಷ ರೋಗಿಗಳು ಪತ್ತೆಯಾಗಿದ್ದಾರೆ. ಜೊತೆಗೆ ಸೋಂಕಿನಿಂದ ಸಾವನ್ನಪ್ಪುತ್ತಿರುವವರಲ್ಲೂ ಕೂಡಾ ಪುರುಷರೇ ಹೆಚ್ಚಾಗಿದ್ದಾರೆ.

Covid 19 infection: people in this age group at risk

ಕಳೆದ 24 ಗಂಟೆಯಲ್ಲಿ ಸುಮಾರು 30 -39 ವರ್ಷದ 154 ಜನರಿಗೆ ಕೊರೋನಾ ಸೋಂಕು ತಗುಲಿದೆ. ಎಷ್ಟು ವಯಸ್ಸಿನ ಪುರುಷರಲ್ಲಿ ಸೋಂಕು ಕಾಣಿಸಿಕೊಳ್ತಿದೆ ಎಂಬ ಅಂಕಿ ಅಂಶ ಕೆಳಗಿದೆ:

  • 0-9 ವರ್ಷದ ಬಾಲಕರಲ್ಲಿ 14 ಜನರಲ್ಲಿ ಸೋಂಕು
  • 10-19 ವರ್ಷದ 41 ಯುವಕರಿಗೆ ಸೋಂಕು
  • 20-29 ವರ್ಷದ ಪುರುಷರಲ್ಲಿ 130 ಜನರಿಗೆ ಸೋಂಕು
  • 30-39 ವರ್ಷದ 154 ಪುರುಷರಿಗೆ ಸೋಂಕು
  • 40-49 ವರ್ಷದ 91 ಪುರುಷರಲ್ಲಿ ಕೊರೋನಾ
  • 50-59 ವರ್ಷದ 70 ಪುರುಷರಲ್ಲಿ ಕೊರೋನಾ
  • 60-69 ವರ್ಷದ 58 ವೃದ್ಧರಿಗೆ ಕೊರೋನಾ ಪಾಸಿಟಿವ್
  • 70 ವರ್ಷಕ್ಕೂ ಮೇಲ್ಪಟ್ಟ 56 ವಯೋವೃದ್ಧರಿಗೆ ಸೋಂಕು ಧೃಡ
Covid 19 infection: people in this age group at risk

Recommended Video

ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 14ಕ್ಕೆ ಏರಿಕೆ-2 ಹೊಸ ವಾರ್ಡ್ ಸೇರ್ಪಡೆಗೊಳಿಸಿದ ಬಿಬಿಎಂಪಿ | Oneindia Kannada

ಈ‌ ಹಿನ್ನೆಲೆ ಮನೆಯಿಂದ ಹೊರಗೆ ಓಡಾಡುವಾಗ ಪುರುಷರು ಎಚ್ಚರಿಕೆ ವಹಿಸಬೇಕಿದೆ. ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ ಎಂದು ತಜ್ಞರು ಹೇಳಿದ್ದಾರೆ.

English summary
Bengaluru People in age groups between 30-39 continue to be more at risk of Covid 19 infection says experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X