ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಕೋಟೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ!

|
Google Oneindia Kannada News

ಬೆಂಗಳೂರು, ಜೂ. 02: ಮೂವರು ಆಪ್ತ ಸ್ನೇಹಿತರು ಹುಟ್ಟು ಹಬ್ಬದ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಹಾಗೂ ಬಡವರಿಗೆ ಒಂದು ತಿಂಗಳ ಉಚಿತ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ. ಹೊಸಕೋಟೆ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರೆಯರಿಗೆ ಉಚಿತ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ವಿನೂತನವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

ನಿಸರ್ಗ ಬಡಾವಣೆ ಗುತ್ತಿಗೆದಾರ ವಿ. ಶಂಕರಪ್ಪ, ಕೊಡಗೇಹಳ್ಳಿ ನಾಗರಾಜ್ ಹಾಗೂ ವಿ. ನಾಗರಾಜ್ ಅವರ ಹುಟ್ಟು ಹಬ್ಬದ ಅಂಗವಾಗಿ ನೂರಾರು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದವರು. ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗಾಗಿ ಆಶಾ ಕಾರ್ಯಕರ್ತೆಯರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.

covid 19: Food kits distributed for Asha Workers in Hoskote

ಜನರಿಗಾಗಿ ಜೀವ ಪಣಕ್ಕೆ ಇಟ್ಟಿರುವ ಆಶಾ ಕಾರ್ಯಕರ್ತೆಯರಿಗೆ ಸೌಲಭ್ಯ ಒದಗಿಸುವುದು ಸಮಾಜದ ಜವಾಬ್ಧಾರಿ. ಹೀಗಾಗಿ ಮೊದಲ ಆದ್ಯತೆಯಾಗಿ ಆಶಾ ಕಾರ್ಯಕರ್ತೆಯರಿಗೆ ಉಚಿತ ಆಹಾರ ಸಮಾಗ್ರಿ ಮೊದಲ ಹಂತದಲ್ಲಿ ನೀಡಿದ್ದೇವೆ. ಹೊಸ ಕೋಟೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವಕರು ಕೊರೊನಾ ಕಷ್ಟ ಕಾಲದಲ್ಲಿ ದಾನಿಗಳನ್ನು ಹುಡುಕಿ ಬಡವರಿಗೆ ಸೇವೆ ಒದಗಿಸುವ ಕಾರ್ಯ ಮುಂದುವರೆಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಗುವುದು ಎಂದು ಶಂಕರಪ್ಪ ಅವರು ತಿಳಿಸಿದರು.

Recommended Video

KSRTC ಪದ ಬಳಸುವ ಹಕ್ಕು ಈಗ ಕೇರಳಕ್ಕೆ ಮಾತ್ರ | Oneindia Kannada

English summary
Three real estate entrepreneurs distributed free food kits to Asha workers and poor families in Hoskote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X