ರಾಘವೇಶ್ವರರ ವಿರುದ್ಧ ಕಾದಂಬರಿಗೆ ನಿರ್ಬಂಧ ಹೇರಿದ ನ್ಯಾಯಾಲಯ
ಬೆಂಗಳೂರು, ನವೆಂಬರ್ 07:ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀರಾಮಚಂದ್ರಾಪುರಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಯಾವುದೇ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವುದನ್ನು ತಡೆಗಟ್ಟಲು ಪ್ರತಿಬಂಧಕಾಜ್ಞೆ ಹೊರಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ಅಂಗೀಕರಿಸಿದೆ.
ಮುಖ್ಯವಾಗಿ ಒಂದು ಕಾಲದಲ್ಲಿ ಶ್ರೀಮಠದಲ್ಲಿದ್ದು, ಸ್ವಾಮೀಜಿಗಳ ನಿಕಟವರ್ತಿಯಾಗಿದ್ದ ಅಭಿರಾಮ್ ಹೆಗ್ಡೆ ಅವರು ಬರೆಯಲು ಮುಂದಾಗಿದ್ದ ಕಾದಂಬರಿಗೆ ಬ್ರೇಕ್ ಹಾಕಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲೂ ಸ್ವಾಮೀಜಿ ವಿರುದ್ಧ ಏನನ್ನೂ ಬರೆದಂತೆ ಕೈ ಕಟ್ಟಿ ಹಾಕಲಾಗಿದೆ.
ರಾಘವೇಶ್ವರ ಸ್ವಾಮೀಜಿಗೆ ಪುತ್ತೂರು ನ್ಯಾಯಾಲದಿಂದ ಸಮನ್ಸ್
ರಾಘವೇಶ್ವರ ಸ್ವಾಮೀಜಿಗಳ ಬಗ್ಗೆ ತಾವು ಬರೆಯಲು ಉದ್ದೇಶಿಸಿದ್ದ ಕಾದಂಬರಿಗೆ ಮುನ್ನುಡಿ ಎಂಬಂತೆ ಅಭಿರಾಮ್ ಅವರು ಇತ್ತೀಚೆಗೆ ವೆಬ್ ತಾಣವೊಂದರಲ್ಲಿ ರಾಘವೇಶ್ವರರ ಬಗ್ಗೆ ಬರೆದಿದ್ದರು. ಇದಾದ ಬಳಿಕ ಈ ಬಗ್ಗೆ ಫೇಸ್ ಬುಕ್ ನಲ್ಲಿ ಚರ್ಚೆ ನಡೆದಿತ್ತು. ಇದೆಲ್ಲವನ್ನು ಗಮನಿಸಿದ ಶ್ರೀಮಠದವರು, ನ್ಯಾಯಾಲಯಕ್ಕೆ ತೆರಳಿ ಇಂಜೆಂಕ್ಷನ್ ಆರ್ಡರ್ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 45 ಮಾಧ್ಯಮಗಳು ಸದರಿ ಪ್ರಕರಣಗಳಲ್ಲಿ ಯಾವುದೇ ಯಾವುದೇ ಮಾನಹಾನಿ ಮಾಹಿತಿಯನ್ನು ಜನರಿಗೆ ಪ್ರಚಾರ ಮಾಡದಂತೆ ನ್ಯಾಯಾಲಯವನ್ನು ಕೋರಿದ್ದರು. ಅದಕ್ಕೆ ನ್ಯಾಯಾಲಯ ಒಪ್ಪಿಗೆಯನ್ನೂ ನೀಡಿದೆ ಎಂಬ ಮಾಹಿತಿ ಇದೆ.
ಗೋಕರ್ಣ ದೇವಾಲಯ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ
ಇನ್ನೊಂದೆಡೆ, ತಮ್ಮ ಒಂದು ಕಾಲದ ಶಿಷ್ಯ, ನಂತರ ಸರಕಾರದ ಪರ ಸಾಕ್ಷಿದಾರನಾದ ಅಭಿರಾಮ್ ಗಣಪತಿ ಹೆಗಡೆ ವಿರುದ್ಧ ನ್ಯಾಯಾಲಯಕ್ಕೆ 'ಒರಿಜಿನಲ್ ಸೂಟ್' ಸಲ್ಲಿಸಿದ್ದಾರೆ.

ಏನಿದು ಕೇಸ್ : ಯುವತಿಯೊಬ್ಬರ ಮೇಲೆ ಶ್ರೀಗಳು ಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಸರ್ಕಾರ ಪರ ಸಾಕ್ಷೀದಾರನಾಗಿರುವ ಅಭಿರಾಮ್ ಗಣಪತಿ ಹೆಗಡೆ ಅವರು, ತಮಗೆ ಬೆದರಿಕೆ ಕರೆಗಳು ಬರುತ್ತಿವೆ, ಈ ಪ್ರಕರಣದಲ್ಲಿ ಆರೋಪಿಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ಅಫಿಡವಿಟ್ ಸಲ್ಲಿಸಿದ್ದಾರೆ.
ರಾಘವೇಶ್ವರ ಶ್ರೀಗಳ ವಿರುದ್ಧ ಸಿಐಡಿ ಪೊಲೀಸರಿಂದ ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ
ಈ ಕುರಿತಂತೆ ಕೋರ್ಟ್ ಆದೇಶ ಹೊರಡಿಸುವುದಕ್ಕೂ ಮುನ್ನ ಒನ್ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿದ ಅಭಿರಾಮ್, "ನನಗೆ ಅಪ್ಪ, ಅಮ್ಮ, ಅಕ್ಕಂದಿರ ನೈತಿಕ ಬೆಂಬಲ ಇದೆ. ನಾನು ಸರಕಾರದ ಪರವಾಗಿ ಸಾಕ್ಷಿ ನುಡಿಯಲು ಒಪ್ಪಿಕೊಂಡವನು. ಅವರು ನನ್ನ ವಿರುದ್ಧ ಏನೇ ದಾಳಿ ನಡೆಸಿದರೂ ಅದು ಸರಕಾರದ ಅಧಿಕೃತ ಸಾಕ್ಷಿ ನಾಶ ಮಾಡುವ ಯತ್ನ ಅಷ್ಟೆ. ಎಷ್ಟೋ ಜನ ಭಕ್ತಿಯಿಂದಷ್ಟೆ ದಾಳಿಗೆ ಇಳಿದಿದ್ದಾರೆ. ಅವರಿಗೆ ಕಾನೂನಿನ ಅರಿವಿದ್ದಿದ್ದರೆ ಈ ಮಟ್ಟಕ್ಕೆ ಇಳಿಯುತ್ತಿರಲಿಲ್ಲ,'' ಎಂದು ಹೇಳಿದರು.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ










Click it and Unblock the Notifications