Get Updates
Get notified of breaking news, exclusive insights, and must-see stories!

ಗೋಕರ್ಣ ದೇವಾಲಯ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ

Recommended Video

      ಗೋಕರ್ಣ ಮಹಾಬಲೇಶ್ವರ ದೇವಸ್ಥಾನ 10 ವರ್ಷಗಳ ನಂತರ ಈಗ ಸರ್ಕಾರದ ವಶಕ್ಕೆ | Oneindia Kannada

      ಬೆಂಗಳೂರು, ಅಕ್ಟೋಬರ್ 03: ಗೋಕರ್ಣ ದೇವಾಲಯ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಬಂದಿದೆ. ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠವು ಇಂದು ಮಠದ ಪರವಾಗಿ ಆದೇಶ ಹೊರಡಿಸಿದ್ದು, ಮುಂದಿನ ಆದೇಶ ಬರುವವರೆಗೆ ದೇಗುಲದ ಆಡಳಿತವನ್ನು ರಾಮಚಂದ್ರಪುರ ಮಠದ ಸುಪರ್ದಿಗೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

      ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಬಗ್ಗೆ 2008ರಲ್ಲಿ ಕರ್ನಾಟಕ ಸರ್ಕಾರ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠವು ಇಂದು(ಆಗಸ್ಟ್ 10) ರದ್ದುಗೊಳಿಸಿದೆ.

      ಆದರೆ, ನಂತರ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಸೆಪ್ಟೆಂಬರ್ 10 ನಂತರ ಕಾರ್ಯ ನಿರ್ವಹಿಸಲಿದೆ, ಸೆಪ್ಟೆಂಬರ್ 10ವರೆಗೆ ಶ್ರೀಮಠವೇ ಆಡಳಿತವನ್ನು ಸಡೆಸಲಿದೆ ಎಂದು ಮಧ್ಯಂತರ ಆದೇಶದಲ್ಲಿ ಹೇಳಿತ್ತು.

      Ramachandrapura Math administration to maintain Gokarna Temple


      ಗೋಕರ್ಣ ದೇವಾಲಯವನ್ನು ರಾಮಚಂದ್ರಾಮಠದ ವಶಕ್ಕೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದು ಮಠದ ವಿರುದ್ಧ ಆದೇಶ ಬಂದಿತ್ತು. 10 ವರ್ಷಗಳ ಬಳಿಕ ಗೋಕರ್ಣ ದೇಗುಲದ ಆಡಳಿತವನ್ನು ಮುಜರಾಯಿ ಇಲಾಖೆ ವಹಿಸಿಕೊಳ್ಳಲು ಮುಂದಾಗಿತ್ತು.

      ಆದ್ರೆ, ಹೈಕೋರ್ಟ್ ಆದೇಶವನ್ನು ರಾಮಚಂದ್ರಪುರ ಮಠದವರು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠವು ಮಧ್ಯಂತರ ಆದೇಶ ನೀಡಿದ್ದು,, ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡುವಂತೆ ಆದೇಶಿಸಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+