ಗೋಬಿ ಮಂಚೂರಿ ನಿಷೇಧ: ರಾಜ್ಯದ ಬೀದಿ ಬದಿ ವ್ಯಾಪಾರಿಗಳಿಗೆ ಒಕ್ಕೂಟದ ಎಚ್ಚರಿಕೆ ಸಂದೇಶವೇನು? ತಿಳಿಯಿರಿ
ಬೆಂಗಳೂರು, ಮಾರ್ಚ್ 18: ಅನಾರೋಗ್ಯಕರ ಕಲರ್ ರಸಾಯನಿಕ ಬಳಸಿ ಮಾಡುವ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಇತ್ತೀಚೆಗೆ ಗೋವಾದಲ್ಲಿ ನಿಷೇಧ ಮಾಡಲಾಗಿದೆ. ಇದೀಗ ಕರ್ನಾಟಕದಲ್ಲೂ ಇವುಗಳ ನಿಷೇಧಕ್ಕೆ ಚಿಂತನೆ ನಡೆಸಿದೆ. ಈ ವೇಳೆ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಸ್ತೆ ಬದಿ ತಿಂಡಿ, ತಿನಿಸಿದ ಅಂಗಡಿ ಮುಂಗಟ್ಟುಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಹಾನಿಕಾರಕ 'ರೋಡಮೈನ್ ಬಿ' ಅಂಶ ಪತ್ತೆ ಹಿನ್ನೆಲೆಯಲ್ಲಿ ಕಾಟನ್ ಕ್ಯಾಂಡಿ ನಿಷೇಧಿಸಿರುವ ಕರ್ನಾಟಕ ಸರ್ಕಾರವು ಗೋಬಿ ಮಂಚೂರಿ ಬ್ಯಾನ್‌ಗೆ ಚಿಂತಿಸಿದೆ. ಗೋಬಿ ಮಂಚೂರಿಯಲ್ಲಿ 'ಸನ್‌ಸೆಟ್ ಯೆಲ್ಲೋ' ಮತ್ತು 'ಟಾಟ್ರಾಜಿನ್' ರಸಾಯನಿಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎರಡು ತಿನಿಸುಗಳ ನಿಷೇಧಕ್ಕೆ ಮುಂದಾಗಿದೆ.

ಗೋಬಿ ಕೆಂಪಗೆ ಕಾಣಲು ಬಳಕೆ ಮಾಡುತ್ತಿದ್ದ ಕಲರ್ (ಪುಡಿ) ಅನ್ನು ಸರ್ಕಾರ ಬ್ಯಾನ್ ಮಾಡಿದ ಬಳಿಕ ಬೆಂಗಳೂರಿನಲ್ಲಿ ಶೇಕಡಾ 80ರಷ್ಟು ಗೋಬಿ ಮಂಚೂರಿ ವ್ಯಾಪಾರದಲ್ಲಿ ಇಳಿಕೆ ಕಂಡು ಬಂದಿದೆ. ಜೆ.ಪಿನಗರ, ಜಯನಗರ, ವಿಜಯನಗರ, ಎಂಜಿ.ರಸ್ತೆ ಸೇರಿದಂತೆ ತಿಂಡಿ ತಿನಿಸು ಅಂಗಡಿಗಳು, ಚಾಟ್ಸ್ ಸೆಂಟರ್, ಫುಡ್ ಸ್ಟ್ರೀಟ್‌ಗಳಲ್ಲಿ ಗೋಬಿ ಮಂಚೂರಿಗೆ ಬೇಡಿಕೆ ಕುಸಿತಗೊಂಡಿದೆ.
ಒಂದು ಎರಡು ಗೋಬಿ ಮಂಚೂರಿ ತಿಂದು ಮನೆಗೆ ಪಾರ್ಸೆಲ್ ಒಯ್ಯುತ್ತಿದ್ದ ಗ್ರಾಹಕರು ಇದೀಗ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಗೋಬಿಯತ್ತ ಮುಖ ಮಾಡುತ್ತಿಲ್ಲ. ಬದಲಾಗಿ ಪಾನಿಪುರಿ, ಇನ್ನಿತರ ತಿಂಡಿ ತಿನಿಸುಗಳನ್ನೇ ಹೆಚ್ಚಾಗಿ ತಿನ್ನುತ್ತಿದ್ದಾರೆ ಎನ್ನಲಾಗಿದೆ.

ಬೀದಿ ಬದಿ ವ್ಯಾಪಾರಿ ಸಂಘಟನೆ ಸೂಚನೆ ಏನು?
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲಕ್ಷಾಂತರ ತಿಂಡಿ ತಿನಿಸು, ಸಾಟ್ ಸೆಂಟರ್‌ಗಳಿವೆ. ಹೊಟ್ಟೆ ಪಾಡಿಗೆ ಅವರು ತಮ್ಮ ಅಂಗಡಿ ವ್ಯಾಪಾರ ನಂಬಿಕೊಂಡಿದ್ದಾರೆ. ಅಲ್ಲದೇ ಗೋಬಿ ಬಳಿಕ ಕಬಾಬ್ ಬ್ಯಾನ್ ವಿಚಾರ ಪ್ರಸ್ತಾಪವಾಗಿದೆ. ಅದರಲ್ಲೂ ಕಲರ್ ಬಳಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ರಾಜ್ಯಧ್ಯಕ್ಷ ಸಿ.ಈ.ರಂಗಸ್ವಾಮಿ ಅವರು ಅಂಗಡಿಕಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಆ ಅಂಶಗಳು ಇಲ್ಲಿವೆ.
ಎಚ್ಚರಿಕೆ ಅಂಶಗಳು
* ಗೋಬಿ ಮಂಚೂರಿ, ಚಿಕನ್ ಕಬಾಬ್, ಪಾನಿಪುರಿ, ಬಜ್ಜಿ, ತಿಂಡಿ, ಸ್ವೀಟ್ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳು, ಊಟ ಹಾಗೂ ಇತರ ಪದಾರ್ಥಗಳನ್ನು FSSAI ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ.
* ಬೀದಿ ಬದಿ ವ್ಯಾಪಾರಿಗಳು ಆಹಾರ ಪದಾರ್ಥಗೆ ಕೆಮಿಕಲ್/ರಸಾಯನಿಕ ಬೆರೆಸಿದರೆ ತಮಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದು, ಆದ್ದರಿಂದ ಕಾಳಜಿ ವಹಿಸಿ.
* ಬೀದಿ ಬದಿ ವ್ಯಾಪಾರಿಗಳು ಆಹಾರ ಪದಾರ್ಥಗಳನ್ನು ಗುಣಮಟ್ಟ ಪದಾರ್ಥವನ್ನು ಗ್ರಾಹಕರಿಗೆ ನೀಡುವಂತೆ ಸೂಚಿಸಿದ್ದಾರೆ.
* ಬೀದಿ ಬದಿ ವ್ಯಾಪಾರಿಗಳು ಆಹಾರ ಪದಾರ್ಥಕ್ಕೆ ಕಲರ್ ಮತ್ತು ವಜ್ರಮಠ ಮತ್ತು ಕಲಬೆರಕೆ ವಸ್ತುಗಳನ್ನು ಯಾವುದನ್ನು ಉಪಯೋಗಿಸಬಾರದು.
* ಅಧಿಕಾರಿಗಳು ನಿಮ್ಮ ಹತ್ತಿರ ಗೊತ್ತಿಲ್ಲದ ರೀತಿಯಲ್ಲಿ ಬಂದು ಪದಾರ್ಥ ಖರೀದಿ ಮಾಡುತ್ತಾರೆ. ಆದ್ದರಿಂದ ಗುಣಮಟ್ಟ, ಆರೋಗ್ಯ ಕರ ಆಹಾರ ನೀಡಿ. ಇದು ಬೀದಿ ಬದಿ ವ್ಯಾಪಾರಿಗಳು ಸಣ್ಣ ಸಣ್ಣ ಹೋಟೆಲ್ ಗಳು ಹಾಗೂ ದೊಡ್ಡ ಹೋಟೆಲ್‌ಗಳಿಗೆ ಇದು ಅನ್ವಯವಾಗಲಿದೆ ಎಂದು ರಂಗಸ್ವಾಮಿಯವರು ತಿಳಿಸಿದರು.
ಬಹುತೇಕ ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ, ವ್ಯಾಪಾರವೇ ಆಸರೆಯಾಗಿದೆ. ಅಧಿಕಾರಿಗಳ ಪರಿಶೀಲನೆ ವೇಳೆ ನಿಮ್ಮದ ತಪ್ಪಿದ್ದಲ್ಲಿ ಶಿಕ್ಷೆ, ದಂಡ ವಿಧಿಸಬಹುದು. ಆದ್ದರಿಂದ ಗುಣಮಟ್ಟದ ಆಹಾರ ನೀಡಬೇಕು. ಗ್ರಾಹಕರ ಆರೋಗ್ಯದತ್ತ ಕಾಳಜಿ ವಹಿಸುವಂತೆ ಮನವಿ ಮಾಡಲಾಗಿದೆ.












Click it and Unblock the Notifications