• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

CoronaVirus Effect: ಬೆಂಗಳೂರಲ್ಲಿ ಡ್ರಿಂಕ್ ಆಂಡ್ ಡ್ರೈವ್ ಪರೀಕ್ಷೆ ಸ್ಥಗಿತ!

|
   Coronavirus :Drunk and Drive test currently stopped in Bengaluru | ONEINDIA KANNADA

   ಬೆಂಗಳೂರು, ಫೆಬ್ರವರಿ.09: ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಭೀತಿ ರಾಜ್ಯ ರಾಜಧಾನಿ ಬೆಂಗಳೂರಿನವರೆಗೂ ಬಂದು ತಲುಪಿದೆ. ಸಿಲಿಕಾನ್ ಸಿಟಿಯಲ್ಲಿ ಮಾರಕ ರೋಗದ ಅಪಾಯ ಜನರನ್ನು ಆತಂಕಕ್ಕೆ ದೂಡಿದೆ.

   ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡುವಿಕೆಯ ಭೀತಿಯಿಂದಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದರಿಂದ ಪೊಲೀಸರು ತಾತ್ಕಾಲಿಕವಾಗಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಯನ್ನೇ ನಿಲ್ಲಿಸಿದ್ದಾರೆ.

   ಭಾರತಕ್ಕೆ ಕೊರೊನಾ ವೈರಸ್ ಹೊತ್ತು ತಂದವರು 150 ಮಂದಿ!

   ಮನುಷ್ಯರ ಉಸಿರಾಟ, ಸ್ಪರ್ಶದಿಂದ ಕೊರೊನಾ ವೈರಸ್ ಸೋಂಕು ಹರಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹೊಸ ಆದೇಶ ಹೊರಡಿಸಿದೆ.

   ಸೋಂಕು ಹರಡುವಿಕೆ ತಪ್ಪಿಸಲು ಪೊಲೀಸರ ಕ್ರಮ

   ಸೋಂಕು ಹರಡುವಿಕೆ ತಪ್ಪಿಸಲು ಪೊಲೀಸರ ಕ್ರಮ

   ಸಿಲಿಕಾನ್ ಸಿಟಿಯಲ್ಲಿ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೂ ಕೂಡಾ ಕ್ರಮ ತೆಗೆದುಕೊಂಡಿದೆ. ಸಾಮಾನ್ಯ ದಿನಗಳಷ್ಟೇ ಅಲ್ಲದೇ ವೀಕೆಂಡ್ ನಲ್ಲೂ ಕೂಡಾ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡರು ಆದೇಶ ಹೊರಡಿಸಿದ್ದಾರೆ.

   ತಪಾಸಣೆಗೆ ಒಂದೇ ಯಂತ್ರ ಬಳಸುವುದೇ ಡೇಂಜರ್

   ತಪಾಸಣೆಗೆ ಒಂದೇ ಯಂತ್ರ ಬಳಸುವುದೇ ಡೇಂಜರ್

   ಒಂದೇ ಯಂತ್ರವನ್ನು ಬಳಸಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಯನ್ನು ನಡೆಸಲಾಗುತ್ತದೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಆದೇಶ ನೀಡುವವರೆಗೂ ತಪಾಸಣೆಗೆ ತಡೆ ನೀಡಲಾಗಿದೆ. ಮುಂದಿನ ಆದೇಶ ನೀಡುವವರೆಗೂ ಯಾವುದೇ ರೀತಿ ತಪಾಸಣೆ ನಡೆಸದಂತೆ ಸೂಚನೆ ನೀಡಲಾಗಿದೆ.

   CoronaVirus: ಸೋಂಕಿತರು ಸರಿದಾಡಿದರೂ ಮೆಸೇಜ್, ತಂತ್ರಜ್ಞಾನದ ಎಫೆಕ್ಟ್!

   ವೈದ್ಯಕೀಯ ಪರೀಕ್ಷೆ ನಡೆಸಿ ದಂಡ ವಿಧಿಸಲು ಅನುಮತಿ

   ವೈದ್ಯಕೀಯ ಪರೀಕ್ಷೆ ನಡೆಸಿ ದಂಡ ವಿಧಿಸಲು ಅನುಮತಿ

   ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಇರೋದಿಲ್ಲ ಎಂದು ವಾಹನ ಸವಾರರು ರಿಲ್ಯಾಕ್ಸ್ ಆಗುವ ಹಾಗಿಲ್ಲ. ಏಕೆಂದರೆ ಅನುಮಾನ ವ್ಯಕ್ತವಾದಲ್ಲಿ ವಾಹನ ಸವಾರರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ದಂಡ ವಿಧಿಸಲು ಸಂಚಾರಿ ಪೊಲೀಸ್ ಆಯುಕ್ತರು ಅನುಮತಿ ನೀಡಿದ್ದಾರೆ.

   ಚೀನಾದಲ್ಲಿ ಸಾವಿನ ಸಂಖ್ಯೆ 811ಕ್ಕೆ ಏರಿಕೆ

   ಚೀನಾದಲ್ಲಿ ಸಾವಿನ ಸಂಖ್ಯೆ 811ಕ್ಕೆ ಏರಿಕೆ

   ಸಾರ್ಸ್ ರೋಗದ ದಾಖಲೆಯನ್ನೂ ಹಿಂದಿಕ್ಕಿ ಕೊರೊನಾ ವೈರಸ್ ರೋಗಕ್ಕೆ ಚೀನಾದಲ್ಲಿ ಇದುವರೆಗೂ 811ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನು, 40 ಸಾವಿರಕ್ಕೂ ಅಧಿಕ ಜನರಲ್ಲಿ ಶಂಕಿತ ಸೋಂಕು ತಗಲಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

   English summary
   CoronaVirus Effect: Banglore Police Temporary Stop The Drink And Drive Testing In City. To Controlled The Spreading Of Dangerous Virus.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X