ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಇಬ್ಬರಿಗೆ ಕೊರೊನಾ ಸೋಂಕು
ಬೆಂಗಳೂರು, ಮಾರ್ಚ್ 28: ಕೊರೊನಾ ರಾಜ್ಯದಲ್ಲಿ ಮೂರನೇ ಹಂತಕ್ಕೆ ಬಂದು ತಲುಪಿದೆ. ಇಷ್ಟು ದಿನ ಕೇವಲ ವಿದೇಶದಿಂದ ಬಂದವರು ಅವರ ಕುಟುಂಬದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕು ಇದೀಗ ವಿದೇಶದಿಂದ ಬಂದವರ ಸಂಪರ್ಕವಿಲ್ಲದೇ ಇರುವವರಲ್ಲೂ ಕಾಣಿಸಿಕೊಳ್ಳಲು ಆರಂಭಿಸಿದೆ.
ಕೆಎಸ್‌ಆರ್‌ಟಿಸಿಯಲ್ಲಿ ಮಂಗಳೂರು ಹಾಗೂ ದಾವಣಗೆರೆಗೆ ಪ್ರಯಾಣಿಸಿದ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.ಮಾ. 18 ಮತ್ತು ಮಾ. 21ರಂದು ಬೆಂಗಳೂರಿನಿಂದ ದಾವಣಗೆರೆ ಮತ್ತು ಮಂಗಳೂರಿಗೆ ಪ್ರಯಾಣಿಸಿದ್ದ ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಆ ಬಸ್ ನಂಬರ್ ನೀಡುವ ಮೂಲಕ ಅದರಲ್ಲಿ ಪ್ರಯಾಣಿಸಿರುವ ಜನರು ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸಾರಿಗೆ ಸಂಸ್ಥೆ ಸೂಚಿಸಿದೆ.
ಪ್ರಯಾಣಿಕರ ಗಮನಕ್ಕೆ:
— KSRTC (@KSRTC_Journeys) March 28, 2020
ನಿಗಮದ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಗೆ COVID-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಸದರಿ ಪ್ರಯಾಣಿಕರು ದಿನಾಂಕ:18-03-2020 ರಂದು ರಾಜಹಂಸ ಬಸ್ಸು ನಂ.KA57F3802 , ಬೆಳಗ್ಗೆ 10 ಕ್ಕೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ದಾವಣಗೆರೆಗೆ ಹೊರಟಿರುತ್ತದೆ. (1/2)
ಮಾ. 18ರಂದು KA 57 F 3802 ಬಸ್ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ದಾವಣಗೆರೆಗೆ ಹೊರಟಿತ್ತು. ಈ ಬಸ್‌ನಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟಿದ್ದ ಪ್ರಯಾಣಿಕನಿಗೆ ಕೊರೋನಾ ಸೋಂಕು ತಗುಲಿದೆ.

ಮಾ. 21ರಂದು KA 19 F 3329 ಬಸ್‌ನಲ್ಲಿ ಸಂಜೆ 4.30ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಪ್ರಯಾಣಿಕನಿಗೂ ಸೋಂಕು ದೃಢಪಟ್ಟಿದೆ. ಈ ಎರಡು ಬಸ್ಗಳಲ್ಲಿ ಪ್ರಯಾಣಿಸಿದವರು ಕೂಡಲೇ ಹತ್ತಿರದ ಜಿಲ್ಲಾಸ್ಪತ್ರೆಗೆ ತೆರಳಿ, ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಸಾರಿಗೆ ನಿಗಮ ಸೂಚನೆ ನೀಡಿದೆ.
ಈ ಬಗ್ಗೆ ಕೆಎಸ್ಆರ್ಟಿಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಕೂಡ ಮಾಡಿದೆ.












Click it and Unblock the Notifications