ಕರ್ನಾಟಕದಲ್ಲಿಂದು ಒಟ್ಟು 67 ಹೊಸ ಕೊರೊನಾ ಕೇಸ್ ಪತ್ತೆ

ಬೆಂಗಳೂರು, ಮೇ 20: ಕರ್ನಾಟಕದಲ್ಲಿ ಸಂಜೆ ವೇಳೆಗೆ ಹೊಸದಾಗಿ 4 ಕೊರೊನಾ ಕೇಸ್ ಪತ್ತೆಯಾಗಿದೆ. ಈ ಮೂಲಕ ಇಂದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆಯಾಗಿದೆ.

ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೂ 63 ಜನರಿಗೆ ಸೋಂಕು ದೃಢವಾಗಿತ್ತು. ಮಧ್ಯಾಹ್ನದಿಂದ ಸಂಜೆ ವೇಳೆಗೆ ಮತ್ತೆ ನಾಲ್ಕು ಹೊಸ ಕೇಸ್ ಪತ್ತೆಯಾಗಿದೆ. ಹೊಸದಾಗಿ ವರದಿಯಾದ ನಾಲ್ಕು ಪ್ರಕರಣಗಳು ರಾಯಚೂರಿನಲ್ಲಿ ದಾಖಲಾಗಿದೆ.

ರಾಯಚೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಹನ್ನೊಂದು ಪ್ರಕರಣಗಳು ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಯಾವುದೇ ಸಾವು ಸಂಭವಿಸಿಲ್ಲ.

Coronavirus Cases in Karnataka: 67 New Covid-19 Cases Reported Today

ಇನ್ನುಳಿದಂತೆ ಹಾಸನದಲ್ಲಿ 21 ಕೇಸ್, ಬೀದರ್‌ನಲ್ಲಿ 10 ಪ್ರಕರಣ, ಮಂಡ್ಯದಲ್ಲಿ 8, ಕಲಬುರಗಿಯಲ್ಲಿ 7 ಕೇಸ್, ಉಡುಪಿಯಲ್ಲಿ 6, ಬೆಂಗಳೂರಿನಲ್ಲಿ 4 ಕೇಸ್ ಹಾಗೂ ರಾಯಚೂರಿನಲ್ಲಿ 4 ಪ್ರಕರಣ ಸೇರಿದಂತೆ ಒಟ್ಟು 67 ಪ್ರಕರಣಗಳು ಇಂದು ದಾಖಲಾಗಿದೆ.

ಇಂದು 13 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 556 ಕೇಸ್‌ಗಳು ರಾಜ್ಯದಲ್ಲಿ ಸಕ್ರಿಯವಾಗಿದೆ. ಇನ್ನು 864 ಕೇಸ್‌ಗಳು ಸಕ್ರಿಯವಾಗಿದೆ. ಇದುವರೆಗೂ ರಾಜ್ಯದಲ್ಲಿ 40 ಜನರು ಸಾವನ್ನಪ್ಪಿದ್ದಾರೆ. 15 ಪ್ರಕರಣಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+