India
  • search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾವತಿಯಾಗದ ಹಣ: ಖಾಸಗಿ ಶಾಲೆಯ ಮುಂದೆ ಗುತ್ತಿಗೆದಾರ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಜುಲೈ05: ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ವಂಚನೆಗೊಳಗಾಗಿದ್ದೇನೆ. ಖಾಸಗಿ ಶಾಲೆ ನನಗೆ 47ಲಕ್ಷ ರು. ಪಾವತಿಸದೆ ವಂಚಿಸಿದೆ. ಇದಕ್ಕಾಗಿ ನಾನು ಶಾಲೆ ಮುಂದೆ ಪ್ರತಿಭಟನೆ ಆರಂಭಿಸುತ್ತಿದ್ದೇನೆ. ನನ್ನನ್ನು ರಕ್ಷಿಸಬೇಕು. ನೀವು ರಕ್ಷಿಸಿದರೆ ಮಾತ್ರ ನಾನು ಉಳಿಯುತ್ತೇನೆ. ಇಲ್ಲವಾದರೆ ನನಗೆ ಸಾವೇ ಗತಿ ಎಂದು ನೊಂದ ಗುತ್ತಿಗೆದಾರ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾನೆ.

ಸೆವೆಂತ್ ಡೇ ಅಡ್ವಾಂಟೀಸ್ ಸಂಸ್ಥೆಗೆ ಸೇರಿದ ಸನ್ ಶೈನ್ ಶಾಲೆ ವಂಚನೆಯಿಂದ ನಾನು ಈಗ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಈ ಸಂಸ್ಥೆ ಸುಮಾರು 8 ವರ್ಷಗಳಿಂದ ವಿವಿಧ ಕಟ್ಟಡಗಳ ನಿರ್ಮಾಣ ಮಾಡಿಸಿಕೊಂಡು ಈಗ ಹಣ ಪಾವತಿಸದೆ ಸತಾಯಿಸುತ್ತಿದೆ. ನಾನು ಈತನಕ 1.38 ಕೋಟಿ ರು. ವೆಚ್ಚದ ಕಾಮಗಾರಿ ಮಾಡಿಕೊಟ್ಟಿದ್ದೇನೆ.

ಇದರಲ್ಲಿ 91 ಲಕ್ಷ ರು. ವಿವಿಧ ಹಂತಗಳಲ್ಲಿ ಪಾವತಿಸಿದ್ದಾರೆ. ಉಳಿದ 47ಲಕ್ಷ ರೂ. ಕೇಳಿದರೆ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಎಲ್ಲಾ ಹಣ ಪಾವತಿಯಾಗಿದೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಕಾಮಗಾರಿಗಾಗಿ ನಾನು ಲಕ್ಷಾಂತರ ರುಪಾಯಿ ಸಾಲ ಮಾಡಿದ್ದು, ಸಾಲಗಾರರ ಒತ್ತಡ ಹೆಚ್ಚಾಗಿದೆ. ಇದರಿಂದ ನನಗೆ ಊಟಕ್ಕೆ ಕಷ್ಟಪಡುವಂತಾಗಿದ್ದು, ನಮ್ಮ ಪತ್ನಿ ಮತ್ತು ಮಕ್ಕಳು ಬೀದಿಗೆ ಬರುವಂತಾಗಿದೆ ಎಂದು ಗುತ್ತಿಗೆದಾರ ಗಣೇಶ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು

ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು

ಇಂಥ ಸ್ಥಿತಿ ಇರುವುದನ್ನು ವಿವರಿಸಿ ಸನ್ ಶೈನ್ ಸಂಸ್ಥೆಯನ್ನು ಹಣ ಕೇಳಿದ್ದಕ್ಕೆ ಸಂಸ್ಥೆಯ ಕರ್ನಾಟಕ ಶಾಖೆಯ ಅಧ್ಯಕ್ಷ ಪೀಟರ್ ಆಲೆಮನೆ ಹಾಗೂ ಶಾಲೆಯ ಪ್ರಿನ್ಸಿಪಾಲ್ ನಾಗರಾಜ್ ಹಾಗೂ ಖಜಾಂಚಿ ಪೆಡ್ರಿಕ್ ನನ್ನ ವಿರುದ್ಧವೇ ರಾಮಮೂರ್ತಿ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಪೋಲೀಸರು ಇಬ್ಬರನ್ನೂ ಕರೆಸಿ ಮಾತನಾಡಿ ಇದರ ಪರಿಶೀಲನೆಗೆ ಎಂಜೀನಿಯರ್ ನೇಮಕ ಮಾಡಿದ್ದರು. ಅವರು ಸ್ಥಳ ಪರಿಶೀಲನಾ ಮಾಡಿ ವರದಿ ಸಲ್ಲಿಸಿ ಸನ್ ಶೈನ್ ಶಾಲೆಯವರು ನನಗೆ 29 ಲಕ್ಷ ರೂ.ಗಳನ್ನು ಪಾವತಿಸಬೇಕೆಂದು ವರದಿಯಲ್ಲಿ ಸೂಚಿಸಿದ್ದಾರೆ. ಆದರೂ ಸನ್ ಶೈನ್ ಶಾಲೆಯವರು ನನಗೆ ಹಣಪಾವತಿಸುತ್ತಿಲ್ಲ ಎಂದು ಗುತ್ತಗೆದಾರ ಆರೋಪಿಸುತ್ತಿದ್ದಾನೆ

ಮಕ್ಕಳ ಶುಲ್ಕ ವಿಚಾರದಲ್ಲೂ ವಂಚನೆ ಆರೋಪ

ಮಕ್ಕಳ ಶುಲ್ಕ ವಿಚಾರದಲ್ಲೂ ವಂಚನೆ ಆರೋಪ

ಹೊರಮಾವು ಕಲ್ಕೆರೆ ಗ್ರಾಮದಲ್ಲಿರುವ ಸೆವೆಂತ್ ಡೇ ಅಡ್ವಾಂಟೀಸ್ ಸಂಸ್ಥೆಗೆ ಸೇರಿದ ಸನ್ ಶೈನ್ ಶಾಲೆಯಲ್ಲಿ ಮಕ್ಕಳ ಶುಲ್ಕ ಆದಿಯಾಗಿ ಎಲ್ಲವೂ ವಂಚನೆಯೇ ನಡೆಯುತ್ತಿದೆ. ಆರಂಭದಲ್ಲಿ ಈ ಶಾಲೆಯವರು ನನಗೆ ಇದೇ ಸಂಸ್ಥೆಯ ಚಾಮರಾಜನಗರ, ಕೊಳ್ಳೇಗಾಲ ಮತ್ತು ಕಾಮಗಾರಿ ಶಾಖೆಗಳಲ್ಲಿ ಶಾಲಾ ಕಟ್ಟಗಳನ್ನು ನಿರ್ಮಿಸಲುವ (ಪ್ರಜ್ಞಾ ಕನ್ಸ್ ಸ್ಟ್ರಕ್ಷನ್ ) ಗುತ್ತಿಗೆ ನೀಡಿದ್ದರು. ಅದನ್ನು ನಿರ್ವಹಿಸಿದ್ದೆ ಎಂದು ಮಾಹಿತಿಯನ್ನು ಗುತ್ತಿಗೆದಾರ ನೀಡಿದ್ದಾನೆ.

1.38 ಕೋಟಿ ವೆಚ್ಚದ ಕಾಮಗಾರಿ ನಿರ್ವಹಣೆ

1.38 ಕೋಟಿ ವೆಚ್ಚದ ಕಾಮಗಾರಿ ನಿರ್ವಹಣೆ

ತನ್ನ ಕಾಮಗಾರಿಯನ್ನು ಮೆಚ್ಚಿ ಹೊರಮಾವು ಕಲ್ಕೆರೆ ಗ್ರಾಮದಲ್ಲಿರುವ ಸೆವೆಂತ್ ಡೇ ಅಡ್ವಾಂಟೀಸ್ ಸಂಸ್ಥೆಯ ಸನ್ ಶೈನ್ ಶಾಲೆಯಲ್ಲಿ ಕಟ್ಟಡ ಕೆಲಸ ವಹಿಸಿದರು.ಇಲ್ಲಿ ಶಾಲೆ ಮತ್ತು ಸಭಾಂಗಣ ಮತ್ತು ಕಾಂಪೌಂಡ್ ಮತ್ತು ಶೌಚಾಲಯ ನವೀಕರಣ ಕಾಮಗಾರಿಗಳನ್ನು ನಡೆಸಲಾಗಿದೆ. ಇದರ ಮೊತ್ತ 1.38 ಕೋಟಿ ವೆಚ್ಚದ ಕಾಮಗಾರಿಯನ್ನು ನಿರ್ವಹಿಸಲಾಗಿದೆ ಎಂದು ಗುತ್ತಿಗೆದಾರ ಗಣೇಶ್ ಹೇಳಿದ್ದಾರೆ.

ಹಣ ಪಾವತಿಸದೇ ಕಿರುಕುಳ

ಹಣ ಪಾವತಿಸದೇ ಕಿರುಕುಳ

ಇದರಲ್ಲಿ 91 ಲಕ್ಷ ರು. ವಿವಿಧ ಹಂತಗಳಲ್ಲಿ ಪಾವತಿಸಿದ್ದಾರೆ. ಉಳಿದ 47ಲಕ್ಷ ಕೋಟಿ ಹಣವನ್ನು ಪಾವತಿಬೇಕಿದೆ. ಇದನ್ನು 5ವರ್ಷಗಳಿಂದ ಪಾವತಿಸದೇ ಅಲೆದಾಡಿಸುತ್ತಿದ್ದಾರೆ. ಕೇಳಿದರೆ ಹಣ ಪಾವತಿಸಬೇಕೇ ಬೇಡ ಎನ್ನುವ ಬಗ್ಗೆ ಒಂದು ಸಮಿತಿ ರಚಿಸಲಾಗಿದೆ ಎನ್ನುತ್ತಾರೆ. ಸಮಿತಿ ವರದಿ ಕೊಟ್ಟ ನಂತರ ಕೊಡುವುದಾಗಿ ಹೇಳಿದ್ದರು. ನಂತರ ಸಮಿತಿ 2021ರಲ್ಲಿ ವರದಿ ನೀಡಿ ನನಗೆ ಬಿಲ್ ಪಾವತಿಸುವಂತೆ ಸೂಚಿಸಿತ್ತು. ಅದರಂತೆ ಬಿಲ್ ಗಳನ್ನು ಸಲ್ಲಿಸಲಾಗಿದೆ. ಆದರೂ ಇನ್ನೂ ಹಣ ಪಾವತಿಸದೆ ಸತಾಯಿಸಲಾಗುತ್ತಿದೆ ಎಂದು ಗುತ್ತಿಗೆದಾರ ಗಣೇಶ್ ಆರೋಪಿಸಿದ್ದಾರೆ.

English summary
Contractor Protest in front of Private school regards Cheating case , he alleged private school cheated 47 lakh, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X