ಕಾರಿಗೆ 12 ಕೋಟಿ ಕೊಟ್ಟವರಿಗೆ; ವೋಟಿಗೆ 8 ಸಾವಿರ ಯಾವ ಲೆಕ್ಕ?

ಬೆಂಗಳೂರು, ಅಕ್ಟೋಬರ್ 08 : "ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಕಾರಿಗೆ 12 ಕೋಟಿ ಕೊಟ್ಟವರೆ ಇನ್ನೂ ವೋಟಿಗೆ 8 ಸಾವಿರ ಯಾವ ಲೆಕ್ಕ?" ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕಾಂಗ್ರೆಸ್ ಹೊಸಕೋಟೆ ವಿಧಾನಸಭಾ ಉಪ ಚುನಾವಣೆಗೆ ಮಂಗಳವಾರ ಕಚೇರಿಯನ್ನು ಆರಂಭಿಸಿದೆ. ಕೃಷ್ಣ ಬೈರೇಗೌಡ ಮತ್ತು ಹೆಬ್ಬಾಳ ಶಾಸಕ ಬೈರತಿ ಸುರೇಶ್ ಕಚೇರಿಯನ್ನು ಉದ್ಘಾಟಿಸಿದರು.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣ ಬೈರೇಗೌಡ, "ವಿಜಯದಶಮಿಯಂದು ಕಾಂಗ್ರೆಸ್ ಕಚೇರಿ ಉದ್ಘಾಟನೆ ಮಾಡಿದ್ದೇವೆ. ಅನೈತಿಕತೆ ವಿರುದ್ಧದ ಹೋರಾಟಕ್ಕೆ ಗೆಲುವು ಸಿಗಲಿದೆ. ದ್ರೋಹ ಮಾಡಿದವರಿಗೆ ಚುನಾವಣೆಯಲ್ಲಿ ತಕ್ಕ ಪಾಠವಾಗಲಿದೆ" ಎಂದರು.

Congress Set Up Party Office At Hoskote

"ಅಧಿಕಾರಕ್ಕಾಗಿ ನಿಮ್ಮನ್ನು ನೀವು ಮಾರಾಟ ಮಾಡಿಕೊಂಡಿರಿ. ತಾಲೂಕಿನ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ. ಟಿಕೆಟ್ ವಿಚಾರದಲ್ಲಿ ಹೊಸಕೋಟೆಯಲ್ಲಿ ನಡೆದ ಬೆಳವಣಿಗೆ ಇತರ ಅನರ್ಹ ಶಾಸಕರಿಗೆ ನಡುಕ ಹುಟ್ಟಿಸಿದೆ. ಧರ್ಮಯುದ್ಧ ನಡೆಯುತ್ತಿದೆ. ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ, ಗೆಲುವು ನಮ್ಮದೇ" ಎಂದು ಭರವಸೆ ವ್ಯಕ್ತಪಡಿಸಿದರು.

"ವೋಟಿಗಾಗಿ ಸೀರೆ, ಬಾಡೂಟ ವಿತರಣೆಯಾಗಿದೆ. ದುಡ್ಡು ಕೊಟ್ಟರೆ ತಗೊಳ್ಳಿ. ಆದರೆ, ದ್ರೋಹ ಬಗೆದವರಿಗೆ ಪಾಠ ಕಲಿಸಿ. 4 ಅಲ್ಲ 8 ಸಾವಿರ ಕೊಟ್ಟರೂ ತೆಗೆದುಕೊಳ್ಳಿ. ಕಾರಿಗೆ 12 ಕೋಟಿ ಕೊಟ್ಟವರಿಗೆ ವೋಟಿಗೆ 8 ಸಾವಿರ ಯಾವ ಲೆಕ್ಕ?" ಎಂದು ಕೃಷ್ಣ ಬೈರೇಗೌಡ ಹೇಳಿದರು.

ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್ ಶಾಸಕ ಸ್ಥಾನದಿಂದ ಅನರ್ಹರಾದ ಬಳಿಕ 12 ಕೋಟಿ ರೂ. ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಎರಡು ದಿನಗಳ ಹಿಂದೆ ಸೀರೆ ಹಂಚಿಕೆ ಮಾಡಿದ್ದಾರೆ.

Hoskote

ಇದನ್ನು ಮುಂದಿಟ್ಟುಕೊಂಡು ಕೃಷ್ಣ ಬೈರೇಗೌಡರು ಎಂಟಿಬಿ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೊಸಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಪದ್ಮಾವತಿ ಸುರೇಶ್ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಆದರೆ, ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+