ಐವನ್ ಡಿಸೋಜಾಗೆ ಕೊರೊನಾ, ಡಿಕೆ ಶಿವಕುಮಾರ್‌ಗೆ ಫುಲ್ ಟೆನ್ಷನ್!
ಬೆಂಗಳೂರು, ಆಗಸ್ಟ್ 01: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಅವರ ಪತ್ನಿಗೆ ಕೊರೊನಾ ವೈರಸ್ ತಗುಲಿದೆ.
Recommended Video
ಈ ಕುರಿತು ಸ್ವತಃ ಐವನ್ ಡಿಸೋಜಾ ಅವರೇ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. 'ನನಗೆ ಮತ್ತು ನನ್ನ ಪತ್ನಿ ಡಾ.ಕವಿತಾಗೆ ಕೊರಾನಾ ಪಾಸಿಟಿವ್ ಬಂದಿದೆ. ಯಾವುದೇ ಲಕ್ಷಣಗಳಿಲ್ಲವಾದರೂ ಸ್ವಯಂಪ್ರೇರಣೆಯಿಂದ ಕೊರೊನಾಅ ಪರೀಕ್ಷೆಗೆ ಒಳಗಾಗಿದ್ದೆವು. ಆದರೆ, ಪಾಸಿಟಿವ್ ಬಂದಿದೆ' ಎಂದು ತಿಳಿಸಿದ್ದಾರೆ.
'ಆತಂಕ ಪಡುವ ಅಗತ್ಯವಿಲ್ಲ. ನನ್ನ ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳು ನಮ್ಮನ್ನು ಭೇಟಿ ಮಾಡಬೇಡಿ ಎಂದು ವಿನಂತಿಸುತ್ತೇವೆ. ನಿಮ್ಮ ಪ್ರಾರ್ಥನೆಗಳು, ಆಶೀರ್ವಾದಗಳು ಮತ್ತು ಶುಭಾಶಯಗಳು ನಮ್ಮ ಶಕ್ತಿ'' ಎಂದು ಐವನ್ ಡಿಸೋಜಾ ಬರೆದುಕೊಂಡಿದ್ದಾರೆ.

ಆ ಕಡೆ ಐವನ್ ಡಿಸೋಜಾಗೆ ಕೊವಿಡ್ ಸೋಂಕು ದೃಢವಾಗಿರುವ ಹಿನ್ನೆಲೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಆತಂಕ ಹೆಚ್ಚಾಗಿದೆ. ನಿನ್ನೆ ಡಿಕೆ ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಐವನ್ ಡಿಸೋಜಾ ಸಂಪರ್ಕಕ್ಕೆ ಬಂದಿದ್ದರು. ಭೇಟಿಯಾಗಿ ಡಿಕೆಶಿ ಜೊತೆ ಮಾತನಾಡಿದ್ದರು.
ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್‌ಗೆ ಶಾಸಕ ಯುಟಿ ಖಾದರ್, ಡಿಕೆಶಿ ಆಪ್ತ ಮಿಥುನ್ ರೈ ಹಾಗೂ ಸ್ಥಳಿಯ ಮುಖಂಡರು ಸಾಥ್ ನೀಡಿದ್ದರು. ಜುಲೈ 17ನೇ ತಾರೀಕು ಮಿಥುನ್ ರೈ ಸಹ ಕ್ವಾರಂಟೈನ್‌ನಲ್ಲಿದ್ದರು. ಡಿಕೆಶಿ ಆಗಮನದ ಹಿನ್ನೆಲೆ ಕ್ವಾರಂಟೈನ್ ಅವಧಿ ಮುಗಿಯುವುದಕ್ಕೂ ಮುಂಚೆಯೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು.












Click it and Unblock the Notifications