'ಚಿಲ್ಲರೆ ಗಿರಾಕಿ' ಎಂದ ರೇಣುಕಾಚಾರ್ಯಗೆ, ಜಮೀರ್ ಬಳಸಿದ ಪದ ಅಬ್ಬಬ್ಬಾ..

ಬೆಂಗಳೂರು, ಜ 24: ಪೌರತ್ವ ತಿದ್ದುಪಡಿ ಮಸೂದೆ ಅನುಮೋದನೆಗೊಂಡ ನಂತರ, ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಕಾವಿಗೆ, ಕೇಂದ್ರ ಸರಕಾರ ಬಿಲ್ ಅನ್ನು ವಾಪಸ್ ಪಡೆಯುತ್ತೋ, ಇಲ್ಲವೋ ಗೊತ್ತಿಲ್ಲಾ.. ಆದರೆ, ವಿರೋಧಿಗಳೆಲ್ಲಾ ಬಿಜೆಪಿ ವಿರುದ್ದ ಮುಗಿಬೀಳಲು ಒಂದಾಗಿವೆ.

ತನ್ನನ್ನು 'ಚಿಲ್ಲರೆ ಗಿರಾಕಿ' ಎಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿರುದ್ದ, ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್, ಭರ್ಜರಿಯಾಗಿ ತಿರುಗೇಟು ನೀಡಿದ್ದಾರೆ.

ಶುಕ್ರವಾರ (ಜ 24) ನಗರದ ಚಾಮರಾಜಪೇಟೆಯ, ಗೋರಿಪಾಳ್ಯದ ಮೈದಾನದಲ್ಲಿ ಆಯೋಜನೆಗೊಂಡಿದ್ದ, ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಜಮೀರ್, ಬಿಜೆಪಿಯವರ ವಿರುದ್ದ ಅಕ್ಷರಸಃ ಹರಿಹಾಯ್ದಿದಿದ್ದಾರೆ.

Congress MLA Zameer Ahmed Khan Reply To, CM Political Secretary Renukacharya

"ಶಾಸಕ ರೇಣುಕಾಚಾರ್ಯ, ಅವನೊಬ್ಬ ಇಸ್ಪೀಟ್ ಎಲೆಯಲ್ಲಿ ಇರುವ ಜೋಕರ್‌" ಎಂದು ಲೇವಡಿ ಮಾಡಿರುವ ಜಮೀರ್, "ಆ ಜೋಕರ್ ನನ್ನು ಯಾರಾದರೂ ಸಚಿವರನ್ನಾಗಿ ಮಾಡುತ್ತಾರಾ" ಎಂದು ಲೇವಡಿ ಮಾಡಿದ್ದಾರೆ.

"ಬಿಜೆಪಿಯಲ್ಲಿ ಅನಂತ್ ಕುಮಾರ್ ಹೆಗಡೆ, ಸೋಮಶೇಖರ್ ಹೀಗೆ ಹಲವು ಜೋಕರ್ ಗಳಿದ್ದಾರೆ. ಅದೇ ರೀತಿ ರೇಣುಕಾಚಾರ್ಯ ಕೂಡಾ. ಅವರ ಮಾತಿಗೆ ಹೆಚ್ಚಿನ ಬೆಲೆ ಕೊಡಬೇಕಾಗಿಲ್ಲ" ಎಂದು ಜಮೀರ್, ತಿರುಗೇಟು ನೀಡಿದ್ದಾರೆ.

"ಚಾಮರಾಜಪೇಟೆಯಲ್ಲಿ ದಂಧೆ ಮಾಡಿಕೊಂಡು ಪುಟ್‌ಪಾತ್ ನಲ್ಲಿದ್ದ ಚಿಲ್ಲರೆ ಗಿರಾಕಿ ಜಮೀರ್ ಅಹ್ಮದ್ ಖಾನ್‌, ಅವರನ್ನು ಕರೆದುಕೊಂಡು ಬಂದು ಮಂತ್ರಿ ಮಾಡಿದ್ದ ದೇವೇಗೌಡರಿಗೆ ಹಾಗೂ ಅಣ್ಣ ಕುಮಾರಣ್ಣ ಎನ್ನುತ್ತಲೇ ಕುಮಾರಸ್ವಾಮಿ ಅವರಿಗೆ ಜಮೀರ್ ಅಹಮದ್ ಏನೂ ಮಾಡಿದರು ಎಂಬುದು ನನಗೆ ಗೊತ್ತಿದೆ" ರೇಣುಕಾಚಾರ್ಯ, ಜಮೀರ್ ಆಹ್ಮದ್ ಮೇಲೆ ವಾಗ್ದಾಳಿ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+