• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ ಬಿಎಸ್ವೈ ಕಾರ್ಯಶೈಲಿಯನ್ನು ಹಾಡಿ ಹೊಗಳಿದ ಕಾಂಗ್ರೆಸ್ ಶಾಸಕಿ

|

ಬೆಂಗಳೂರು, ಏಪ್ರಿಲ್ 4: ಈ ಹಿಂದೆ ಉತ್ತರ ಕರ್ನಾಟಕದ ಪ್ರವಾಹದ ವೇಳೆ ಮತ್ತು ಈಗ, ಕೊರೊನಾ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯಶೈಲಿ ವ್ಯಾಪಕ ಪ್ರಶಂಸೆಗೊಳಗಾಗುತ್ತಿದೆ.

ಮೆಡಿಕಲ್ ಎಮರ್ಜೆನ್ಸಿಯ ಈ ನಿರ್ಣಾಯಕ ಘಟ್ಟದಲ್ಲಿ, ಈ ಇಳಿವಯಸ್ಸಿನಲ್ಲೂ, ಒಂದು ನಿಮಿಷವನ್ನೂ ವ್ಯರ್ಥ ಮಾಡದೇ, ಯಡಿಯೂರಪ್ಪ, ಸತತವಾಗಿ ಸಚಿವರು, ಶಾಸಕರು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಪರಿಸ್ಥಿಯ ಅವಲೋಕನವನ್ನು ಮಾಡುತ್ತಿದ್ದಾರೆ.

ಬೆಕ್ಕು, ನಾಯಿಗಳಿಂದ ಕೊರೊನಾ ಹರಡುವುದಿಲ್ಲ

ಈ ವಿಚಾರದಲ್ಲಿ, ಕಾಂಗ್ರೆಸ್ಸಿನ ಯುವ ಶಾಸಕಿ, ಜಯನಗರ ಕ್ಷೇತ್ರದ ಸೌಮ್ಯ ರೆಡ್ಡಿ ಕೂಡಾ, ಮುಖ್ಯಮಂತ್ರಿಗಳ ಕಾರ್ಯಶೈಲಿಯನ್ನು ಮೆಚ್ಚಿ, ಟ್ವೀಟ್ ಮಾಡಿದ್ದಾರೆ.

"ಈ ಕಾರಣಕ್ಕಾಗಿಯೇ ನಾನು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಷ್ಟ ಪಡುವುದು. ರಾಜಕಾರಣಿಗಳ ಹೆಸರಿನಲ್ಲಿ ಧರ್ಮಾಂಧರಿದ್ದಾರೆ. ಇನ್ನೊಂದು ಕಡೆ, ಇದೇ ಪಕ್ಷದಲ್ಲಿ (ಬಿಜೆಪಿ) ಇಂತಹ ಮುತ್ಸದ್ದಿ ರಾಜಕಾರಣಿಗಳಿದ್ದಾರೆ' ಎಂದು ಸೌಮ್ಯ ರೆಡ್ಡಿ ಟ್ವೀಟ್ ಮಾಡಿದ್ದಾರೆ.

"ಈ ಹೋರಾಟದಲ್ಲಿ, ನಾವು ಕಾಂಗ್ರೆಸ್ಸಿನವರು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಲ್ಲುತ್ತೇವೆ" ಎಂದು ಸೌಮ್ಯ ರೆಡ್ಡಿ ಟ್ವೀಟ್ ನಲ್ಲಿ ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯ ನಂತರ, ಶುಕ್ರವಾರ (ಏ 3), ಮುಖ್ಯಮಂತ್ರಿಗಳು ಮುಸ್ಲಿಂ ಮುಖಂಡರ ಸಭೆಯನ್ನು ಕರೆದಿದ್ದರು.

English summary
Congress MLA Sowmya Reddy Praised CM Yediyurappa's Working Style.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X