ಮತ್ತೆ ಕುಮಾರಸ್ವಾಮಿಯನ್ನು ಮಾತಿನಲ್ಲೇ 'ತಿವಿದ' ಚೆಲುವರಾಯಸ್ವಾಮಿ

ಬೆಂಗಳೂರು, ಸೆ 15: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಟೀಕಿಸುವ ಪರಿಪಾಠವನ್ನು, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚೆಲುವರಾಯಸ್ವಾಮಿ ಮುಂದುವರಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ, ಒಕ್ಕಲಿಗರ ಸಂಘ ಪ್ರತಿಭಟನಾ ರ‍್ಯಾಲಿಯನ್ನು ಆಯೋಜಿಸಿತ್ತು. " ನನಗೆ ಆಮಂತ್ರಣವಿರಲಿಲ್ಲ" ಎಂದು ಕುಮಾರಸ್ವಾಮಿ ಇದರಲ್ಲಿ ಭಾಗವಹಿಸಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೆಲುವರಾಯಸ್ವಾಮಿ, " ಆಮಂತ್ರಣ ನೀಡಿ ಕರೆಯಲು ಅದೇನು ಬೀಗರ ಊಟವೇ" ಎಂದು ಲೇವಡಿ ಮಾಡಿದ್ದಾರೆ.

Congress Leader Cheluvarayaswamy Lambasted Former CM HD Kumaraswamy

" ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ" ಎಂದು ಚೆಲುವರಾಯಸ್ವಾಮಿ, ಕುಮಾರಸ್ವಾಮಿಯವರ ಕಾಲೆಳೆದಿದ್ದಾರೆ.

" ಪ್ರತಿಭಟನೆಯಲ್ಲಿ ಭಾಗವಹಿಸಲು ನಮಗೂ ಆಹ್ವಾನವಿರಲಿಲ್ಲ. ಆದರೆ, ಒಗ್ಗಟ್ಟು ಎದುರಿಸಬೇಕಾಗಿರುವ ಈ ಸಮಯದಲ್ಲಿ ಪ್ರತಿಷ್ಠೆ ಒಳ್ಲೆಯದಲ್ಲ" ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

" ಕುಮಾರಸ್ವಾಮಿಯವರ ಸರಕಾರವನ್ನು ಉಳಿಸಲು, ಡಿಕೆಶಿ ಎಷ್ಟೆಲ್ಲಾ ಪ್ರಯತ್ನ ಪಟ್ಟಿದ್ದರು ಎನ್ನುವುದನ್ನು ನಾವು ಮರೆಯಬಾರದು" ಎಂದು ಚೆಲುವರಾಯಸ್ವಾಮಿ, ಕುಮಾರಸ್ವಾಮಿಯವರ ವಿರುದ್ದ ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+