ನಿಮಗೆ ದಮ್ಮು, ತಾಕತ್ತು ಇದ್ದರೆ: ಬಿಜೆಪಿಗೆ ಕಾಂಗ್ರೆಸ್ ಸವಾಲ್!
ಬೆಂಗಳೂರು: ಬಿಜೆಪಿ-ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಾರ್ ತಾರಕಕ್ಕೇರಿದೆ. ಅದರಲ್ಲೂ ಪಿಎಂ ಮೋದಿ ಅವರು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕರೆ ಮಾಡಿ ಮಾತನಾಡಿದ ನಂತರ, ಬಿಜೆಪಿ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಮತ್ತೊಮ್ಮೆ ಲಿಂಗಾಯತ ಅಸ್ತ್ರವನ್ನೂ ಪ್ರಯೋಗಿಸಿದೆ.
ಮಾಜಿ ಸಚಿವ ಈಶ್ವರಪ್ಪ ಹಾಗೂ ಪಿಎಂ ಮೋದಿ ಮಾತುಕತೆ ವಿಚಾರ ಮುಂದಿಟ್ಟುಕೊಂಡು ಬೆಳಗ್ಗೆಯಿಂದ ಟ್ವಿಟ್ಟರ್ ಅಖಾಡ ಪ್ರವೇಶಿಸಿತ್ತು ಕಾಂಗ್ರೆಸ್. 'ಒಂದು ಕಡೆ ಈಶ್ವರಪ್ಪ ಮೇಲೆ ಕಮಿಷನ್ ಆರೋಪ. ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ. ಇನ್ನೊಂದೆಡೆ ಸ್ವತಃ ಕರೆ ಮಾಡಿ ಈಶ್ವರಪ್ಪರನ್ನು ಶ್ಲಾಘಿಸಿದ ಪ್ರಧಾನಿ ಮೋದಿ. ಪ್ರಧಾನಿ ಮೋದಿ 'ಭ್ರಷ್ಟಾಚಾರ'ದ ಪರ ನಿಂತಿದ್ದಾರೆ ಎನ್ನುವುದಕ್ಕೆ ಇದಕ್ಕಿಂದ ಸಾಕ್ಷಿ ಬೇಕೆ? #ModiAashirvadFor40Percent' ಎಂದು ಟ್ವೀಟ್ ಮಾಡಿ ಆರೋಪ ಮಾಡಲಾಗಿತ್ತು. ಬಳಿಕ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಬಾಂಬ್ ಪ್ರಯೋಗಿಸಿದೆ.

'40% ಕಮಿಷನ್ ಲೂಟಿ'
ಇಷ್ಟೇ ಅಲ್ಲ '40% ಕಮಿಷನ್ ಲೂಟಿ' ಅಸ್ತ್ರವನ್ನೇ ಪ್ರಯೋಗಿಸಿದೆ ಕಾಂಗ್ರೆಸ್. ಇನ್ನೊಂದು ಟ್ವೀಟ್‌ನಲ್ಲಿ '@narendramodi ಅವರು ಈಶ್ವರಪ್ಪನವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ. ಈ ಶ್ಲಾಘನೆ ಏಕೆ? 40% ಕಮಿಷನ್ ಲೂಟಿ ಮಾಡಿದ್ದಕ್ಕಾ? ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ? ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ? ಕಮಿಷನ್ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಮೋದಿ ಕಮಿಷನ್ ಲೂಟಿಕೋರನಿಗೆ ಬೆಂಬಲಿಸಿದ್ದಾರೆ. #ModiAashirvadFor40Percent' ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ನಾಯಕರನ್ನ ಕೆಣಕಿದೆ ಕಾಂಗ್ರೆಸ್.
'@narendramodi ಅವರು
— Karnataka Congress (@INCKarnataka) April 21, 2023
ಈಶ್ವರಪ್ಪನವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ.
ಈ ಶ್ಲಾಘನೆ ಏಕೆ?
40% ಕಮಿಷನ್ ಲೂಟಿ ಮಾಡಿದ್ದಕ್ಕಾ?
ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ?
ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ?
ಕಮಿಷನ್ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಮೋದಿ ಕಮಿಷನ್ ಲೂಟಿಕೋರನಿಗೆ ಬೆಂಬಲಿಸಿದ್ದಾರೆ.#ModiAashirvadFor40Percent
'40% ಕಮಿಷನ್ ಲೂಟಿ'
ಇಷ್ಟೇ ಅಲ್ಲ '40% ಕಮಿಷನ್ ಲೂಟಿ' ಅಸ್ತ್ರವನ್ನೇ ಪ್ರಯೋಗಿಸಿದೆ ಕಾಂಗ್ರೆಸ್. ಇನ್ನೊಂದು ಟ್ವೀಟ್‌ನಲ್ಲಿ '@narendramodi ಅವರು ಈಶ್ವರಪ್ಪನವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ. ಈ ಶ್ಲಾಘನೆ ಏಕೆ? 40% ಕಮಿಷನ್ ಲೂಟಿ ಮಾಡಿದ್ದಕ್ಕಾ? ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ? ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ? ಕಮಿಷನ್ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಮೋದಿ ಕಮಿಷನ್ ಲೂಟಿಕೋರನಿಗೆ ಬೆಂಬಲಿಸಿದ್ದಾರೆ. #ModiAashirvadFor40Percent' ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ನಾಯಕರನ್ನ ಕೆಣಕಿದೆ ಕಾಂಗ್ರೆಸ್.
ರೌಡಿಗಳಿಗೆ ಕೈ ಮುಗಿಯುತ್ತಾರೆ.
— Karnataka Congress (@INCKarnataka) April 21, 2023
ಭ್ರಷ್ಟಾಚಾರಿಗಳಿಗೆ ಕರೆ ಮಾಡಿ ಪ್ರೋತ್ಸಾಹಿಸುತ್ತಾರೆ.
ಆದರೆ ಭ್ರಷ್ಟಾಚಾರದ ದೂರುಗಳ ಪತ್ರಗಳಿಗೆ ಮಾತ್ರ ಮೌನವಹಿಸುತ್ತಾರೆ.
ನೆರೆ ಸಂತ್ರಸ್ತರ ಗೋಳುಗಳನ್ನು ನಿರ್ಲಕ್ಷಿಸುತ್ತಾರೆ.
ಇಂತಹ ಅಪರೂಪದ ಪ್ರಧಾನಿ @narendramodi.
ಭ್ರಷ್ಟಾಚಾರಕ್ಕೆ ಮೋದಿಯೇ ಮಹಾಪೋಷಕರು.#ModiAashirvadFor40Percent pic.twitter.com/souXfWEYFN
ಕೊನೆಯದಾಗಿ '@narendramodi ಅವರೇ, ◆ನಿಮಗೆ ದಮ್ಮು, ತಾಕತ್ತು ಇದ್ದರೆ ಒಂದೇ ಒಂದು ಬಾರಿ ಗುತ್ತಿಗೆದಾರರ ಸಂಘದವರೊಂದಿಗೆ ಮಾತನಾಡಿ. ◆ಒಂದೇ ಒಂದು ಬಾರಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬದೊಂದಿಗೆ ಮಾತನಾಡಿ. ◆ಒಂದೇ ಒಂದು ಬಾರಿ PSI ಹಗರಣದಿಂದ ಸಂತ್ರಸ್ತರಾದ ಅಭ್ಯರ್ಥಿಗಳೊಂದಿಗೆ ಮಾತನಾಡಿ. ಸಾಧ್ಯವೇ? #ModiAashirvadFor40Percent' ಎಂದು ಸವಾಲು ಹಾಕಿ ಟ್ವೀಟ್ ಮಾಡಿದೆ ಕಾಂಗ್ರೆಸ್.
'@narendramodi ಅವರೇ,
— Karnataka Congress (@INCKarnataka) April 21, 2023
◆ನಿಮಗೆ ದಮ್ಮು, ತಾಕತ್ತು ಇದ್ದರೆ ಒಂದೇ ಒಂದು ಬಾರಿ ಗುತ್ತಿಗೆದಾರರ ಸಂಘದವರೊಂದಿಗೆ ಮಾತನಾಡಿ
◆ಒಂದೇ ಒಂದು ಬಾರಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬದೊಂದಿಗೆ ಮಾತನಾಡಿ
◆ಒಂದೇ ಒಂದು ಬಾರಿ PSI ಹಗರಣದಿಂದ ಸಂತ್ರಸ್ತರಾದ ಅಭ್ಯರ್ಥಿಗಳೊಂದಿಗೆ ಮಾತನಾಡಿ
ಸಾಧ್ಯವೇ?#ModiAashirvadFor40Percent
ಒಂದೆ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದರೆ, ಇದಕ್ಕೆ ಬಿಜೆಪಿ ಕೂಡ ಮತ್ತೊಂದು ಮಾರ್ಗದಲ್ಲಿ ಉತ್ತರ ಕೊಡುತ್ತಿದೆ. ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಬಗ್ಗೆ ಕೇಳಿಬಂದಿರುವ ಆರೋಪಗಳನ್ನೇ ಅಸ್ತ್ರ ಮಾಡಿಕೊಂಡಿದೆ. 'ಕೆಪಿಸಿಸಿ ಅಧ್ಯಕ್ಷರು @INCKarnataka ಟಿಕೆಟ್‌ಗಾಗಿ ಅಭ್ಯರ್ಥಿಗಳಿಂದ ಅರ್ಜಿ ಹಾಕಿಸಿಕೊಳ್ಳುವ ಮೂಲಕ ಖಜಾನೆ ತುಂಬಿಸಿಕೊಂಡಿದ್ದರು. ಅರ್ಜಿಯಿಂದ ಹಿಡಿದು ಟಿಕೆಟ್ ಹಂಚಿಕೆಯವರೆಗೂ ಕೋಟಿ ಕೋಟಿ ಲೂಟಿ ಹೊಡೆದಿದ್ದೇ @DKShivakumar ಅವರ ಆಸ್ತಿ ದುಪ್ಪಟ್ಟಾಗಲು ಕಾರಣವಾ? #CorruptCongress' ಎಂದು ಬಿಜೆಪಿ ಪ್ರಶ್ನಿಸಿದೆ.
ಕೆಪಿಸಿಸಿ ಅಧ್ಯಕ್ಷರು @INCKarnataka ಟಿಕೆಟ್‌ಗಾಗಿ ಅಭ್ಯರ್ಥಿಗಳಿಂದ ಅರ್ಜಿ ಹಾಕಿಸಿಕೊಳ್ಳುವ ಮೂಲಕ ಖಜಾನೆ ತುಂಬಿಸಿಕೊಂಡಿದ್ದರು.
— BJP Karnataka (@BJP4Karnataka) April 21, 2023
ಅರ್ಜಿಯಿಂದ ಹಿಡಿದು ಟಿಕೆಟ್ ಹಂಚಿಕೆಯವರೆಗೂ ಕೋಟಿ ಕೋಟಿ ಲೂಟಿ ಹೊಡೆದಿದ್ದೇ @DKShivakumar ಅವರ ಆಸ್ತಿ ದುಪ್ಪಟ್ಟಾಗಲು ಕಾರಣವಾ?#CorruptCongress pic.twitter.com/fBOY5zlqse
ಒಟ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ಜೋರಾಗಿದೆ. ಅದರಲ್ಲೂ ಎರಡೂ ಪಕ್ಷಗಳ ಟ್ವಿಟ್ಟರ್ ಖಾತೆಗಳು ಈ ವಿಚಾರದಲ್ಲಿ ಫುಲ್ ಆಕ್ಟಿವ್ ಆಗಿವೆ. ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದು ಜನರಿಗೆ ಒಂದು ಕಡೆ ಮನರಂಜನೆ ನೀಡಿದರೆ, ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಯನ್ನೂ ಹುಟ್ಟುಹಾಕಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಅಂದೇ ಇದಕ್ಕೆಲ್ಲಾ ಉತ್ತರ ಸಿಗಬಹುದು.











Click it and Unblock the Notifications