• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂವಿಧಾನ ಹಬ್ಬದಲ್ಲಿ ಡಾ.ಕೆ.ಪಿ.ಅಶ್ವಿನಿಗೆ ಅಭಿನಂದನೆ

|
Google Oneindia Kannada News

ಬೆಂಗಳೂರು, ನವೆಂಬರ್‌ 21: ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ ಸಂವಿಧಾನ. ಭಾರತದಲ್ಲಿ 1950 ರಿಂದಲೇ ನಾಗರಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನೀಡಲಾಯಿತು. ಆದರೆ ಅಮೆರಿಕದಲ್ಲೂ ಆ ವೇಳೆ ನಾಗರಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನೀಡಿರಲಿಲ್ಲ. ಅಂತಹ ಸ್ವಾತಂತ್ರ್ಯ ನೀಡಿದ ನಮ್ಮ ಸಂವಿಧಾನ ಜಗತ್ತಿಗೆ ಮಾದರಿ ಸಂವಿಧಾನ ಎಂದು ಯುಎನ್‌ಎಚ್‌ಆರ್‌ಸಿ ಸ್ವತಂತ್ರ ತಜ್ಞೆ ಡಾ.ಕೆಪಿ. ಅಶ್ವಿನಿ ತಿಳಿಸಿದರು.

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ( ಯುಎನ್‌ಎಚ್‌ಆರ್‌ಸಿ) ಸ್ವತಂತ್ರ ತಜ್ಞೆಯಾಗಿ ( Special Rapporteur) ನೇಮಕವಾಗಿರುವ ಏಷ್ಯಾ ಖಂಡದ ಮೊಟ್ಟಮೊದಲ ವ್ಯಕ್ತಿ ಹಾಗೂ ಭಾರತದ ಮೊಟ್ಟಮೊದಲ ವ್ಯಕ್ತಿಯಾದ ಡಾ.ಕೆ.ಪಿ.ಅಶ್ವಿನಿ ಕರ್ನಾಟಕ ರಾಜ್ಯದ ಅಂಚೆ ಇಲಾಖೆಯಲ್ಲಿ ಪ್ರಪಥಮವಾಗಿ ನಡೆದ ಸಂವಿಧಾನ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯರಲ್ಲದೆ ಇಡೀ ವಿಶ್ವವೇ ಡಾ. ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ರವರು ಬರೆದಂತ ಸಂವಿಧಾನವನ್ನು ಗೌರವಿಸುತ್ತದೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ರವರು ಒಂದು ಕಡೆ ಹೇಳುತ್ತಾರೆ. ನಾನು ಭಾರತದಿಂದ ಏನಾದರೂ ತೆಗೆದುಕೊಂಡು ಹೋಗಬೇಕೆಂದರೆ ಅದು ಭಾರತದ ಸಂವಿಧಾನ ಮಾತ್ರ ಎಂದು ಹೇಳುತ್ತಾರೆ. ಈ ರೀತಿ ವಿಶ್ವ ಮಾನ್ಯತೆ ಪಡೆದಿರುವ ಸಂವಿಧಾನ ಇದ್ದರೆ ಅದು ಭಾರತ ಸಂವಿಧಾನ ಮಾತ್ರ ಎಂದರು.

ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ತಜ್ಞೆಯಾಗಿ ಬೆಂಗಳೂರಿನ ಪ್ರೊಫೆಸರ್ ಅಶ್ವಿನಿ ನೇಮಕವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ತಜ್ಞೆಯಾಗಿ ಬೆಂಗಳೂರಿನ ಪ್ರೊಫೆಸರ್ ಅಶ್ವಿನಿ ನೇಮಕ

ಭಾರತ ಸಂವಿಧಾನದಲ್ಲಿ ಹಿಂದೂ, ಬೌದ್ದ, ಜೈನಾ, ಮುಸ್ಲಿಂ, ಕ್ರೈಸ್ತ , ಸಿಖ್ ,ಪಾರ್ಸಿ ಈಗೇ ಅನೇಕ ಧರ್ಮಗಳಿವೆ. ಈ ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟ ಏಕೈಕ ಸಂವಿಧಾನ ಅದು ಭಾರತದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಸಂವಿಧಾನ. ದೇಶದಲ್ಲಿರುವ ಎಲ್ಲಾ ಆದಿವಾಸಿ ಬುಡಕಟ್ಟು ಜನರಿಗೆ ಓಬಿಸಿ ಎಸ್ಸಿ ಎಸ್ಟಿ 2ಎ 2ಬಿ ಹಾಗೂ ಇತರೆ ಎಲ್ಲಾ ಸಮುದಾಯದ ಜನರಿಗೂ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಇದಕ್ಕಾಗಿಯೇ ಅಂಬೇಡ್ಕರ್ ಅವರು ಹೇಳಿದ್ದು ನಾನು ಕೇವಲ ಒಂದು ಸಮುದಾಯಕ್ಕಾಗಿ ಸಂವಿಧಾನ ಬರೆದಿಲ್ಲ. ಎಲ್ಲಾ ಸಮುದಾಯಗಳ ಜನರಿಗಾಗಿ ಸಂವಿಧಾನ ಬರೆದಿದ್ದೇನೆ. ಸಂಶಯ ಇದ್ದರೆ ಸಂವಿಧಾನ ಓದಿ. ಅದಕ್ಕಾಗಿ ಎಲ್ಲರು ಸಂವಿಧಾನ ಓದಬೇಕು, ಯಾರು ಸಂವಿಧಾನ ಸಂಪೂರ್ಣವಾಗಿ ಓದುತ್ತಾರೋ ಅವರು ಅಂಬೇಡ್ಕರ್ ಅಭಿಮಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಸಂವಿಧಾನವನ್ನು ಗೌರವಿಸಿ ಉಳಿಸಬೇಕಿದೆ

ಸಂವಿಧಾನವನ್ನು ಗೌರವಿಸಿ ಉಳಿಸಬೇಕಿದೆ

ಸಂವಿಧಾನದ ಅಡಿಯಲ್ಲಿ ಮೀಸಲಾತಿ ಪಡೆಯುವ ಪ್ರತಿಯೊಂದು ಸಮುದಾಯದ ಜನರು ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಸಂವಿಧಾನದಿಂದ ಹಲವಾರು ಉಪಯೋಗಗಳನ್ನು ಪಡೆದುಕೊಂಡಿದ್ದು, ಅಂತಹ ಪ್ರತಿಯೊಬ್ಬ ನೌಕರರು ಹಾಗೂ ನಾನು ಕೂಡ ಈ ಸ್ಥಾನಮಾನವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದು ಬಾಬಾ ಸಾಹೇಬರು ಬರೆದ ಸಂವಿಧಾನವೇ ವಿನಹ ಬೇರೆ ಯಾವುದೇ ಶಕ್ತಿ ನಮಗೆ ಅವಕಾಶ ಮಾಡಿಕೊಟ್ಟಿಲ್ಲ.

ಆದ್ದರಿಂದ ನಾವೆಲ್ಲರೂ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಗೌರವಿಸಿ ಉಳಿಸಬೇಕಾಗಿದೆ. ನಾವೆಲ್ಲರೂ ಸಂವಿಧಾನದ ಹಬ್ಬವನ್ನು ಆಚರಿಸುತ್ತಿರುವುದು ಇಡೀ ಮನುಕುಲಕ್ಕೆ ಸಂತಸ ಸಂಭ್ರಮವಾದ ಕ್ಷಣವಾಗಿದೆ ಎಂದು ತಿಳಿಸಿದರು.

ಸಂವಿಧಾನ ಎಲ್ಲರಿಗೂ ಸಮಾನತೆ ಕೊಟ್ಟಿದೆ

ಸಂವಿಧಾನ ಎಲ್ಲರಿಗೂ ಸಮಾನತೆ ಕೊಟ್ಟಿದೆ

ಕರ್ನಾಟಕ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಮಾತನಾಡಿ, ಸಂವಿಧಾನ ತಾಯಿ ಇದ್ದಂತೆ, ಭಾರತ ದೇಶದ ಎಲ್ಲಾ ಪ್ರಜೆಗಳು ತನ್ನ ತಾಯಿಯ ರೀತಿ ಸಂವಿಧಾನವನ್ನು ಪ್ರೀತಿಸಿ ಗೌರಿಸಬೇಕೆಂದು ತಿಳಿಸಿದರು. ಸಂವಿಧಾನ ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿ ಕೊಡಲಾಗಿದೆ. ಇಂತಹ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ಡಾ. ಅಶ್ವಿನಿ ನಡೆದು ಬಂದ ದಾರಿ ವಿವರಿಸಿದ ತಾರಾ

ಡಾ. ಅಶ್ವಿನಿ ನಡೆದು ಬಂದ ದಾರಿ ವಿವರಿಸಿದ ತಾರಾ

ಸಹಾಯಕ ಪೋಸ್ಟ್‌ ಮಾಸ್ಟರ್‌ ಜನರಲ್‌ (ಎಪಿಎಂಜಿ) ಸಂದೇಶ ಮಾದೇವಪ್ಪ ಅವರು ಸಂವಿಧಾನದ ಹಲವಾರು ವಿಷಯಗಳನ್ನು ತಿಳಿಸಿ ಸಂವಿಧಾನದ ಪ್ರಸ್ತಾವನೆಯನ್ನು ವಿವಿಧ ಜಿಲ್ಲೆಗಳಿಂದ ಬಂದಿದ್ದ ಜನರಿಗೆ ಬೋಧಿಸಿದರು. ಎಪಿಎಂಜಿ ತಾರಾ ಅವರು ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ನೇಮಕವಾಗಿರುವ ಅಶ್ವಿನಿ ಅವರು ನಡೆದು ಬಂದ ದಾರಿಯ ಬಗ್ಗೆ ಸಮಗ್ರವಾಗಿ ವಿವರಣೆ ನೀಡಿದರು.

ಎರಡೂ ಕಡೆಯೂ ಕೆಲಸ ಮಾಡುವ ಸ್ಥಿತಿ

ಎರಡೂ ಕಡೆಯೂ ಕೆಲಸ ಮಾಡುವ ಸ್ಥಿತಿ

ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳ ರಾಜ್ಯ ವಲಯ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಸಂವಿಧಾನದ ಬಗ್ಗೆ ವಿವಿಧ ವಿಚಾರಗಳನ್ನು ತಿಳಿಸಿ ಭಾರತದ ಮಹಿಳೆಯರು ಇನ್ನು ಸಂಪೂರ್ಣವಾಗಿ ಸ್ವತಂತ್ರವಾಗಿಲ್ಲ. ಕೆಲವು ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡಿ ಹಾಗೂ ಹೊರಗಡೆ ಹಾಗೂ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ಕಡೆಯೂ ಕೆಲಸ ಮಾಡುವ ಪರಿಸ್ಥಿತಿ ಭಾರತದಲ್ಲಿ ಕಾಣಬಹುದು. ಅವರು ಸಮಾಜದಲ್ಲಿ ಗುರುತಿಸಿಕೊಳ್ಳುವಲ್ಲಿ ತುಂಬಾ ಹಿಂದುಳಿದಿದ್ದಾರೆ. ಅವರಿಗೆ ಮಾನವ ಹಕ್ಕುಗಳ ಆಯೋಗದಿಂದ ಸೂಕ್ತ ಸರಿಯಾದ ಪರಿಹಾರ ತಿಳಿಸುವಂತೆ ಅಶ್ವಿನಿ ಅವರಿಗೆ ಕೋರಿದರು.

ಸಮಾನ ಅವಕಾಶ ದೊರೆಯದಿದ್ದರೆ ವಿರೋಧ

ಸಮಾನ ಅವಕಾಶ ದೊರೆಯದಿದ್ದರೆ ವಿರೋಧ

ಅಖಿಲ ಭಾರತ ಅಂಚೆ ನೌಕರರ ಸಂಘ ( ಸಿಎಚ್‌ಕ್ಯೂ ) ನವದೆಹಲಿ ಜಾನಕಿರಾಮ್ ಮಾತನಾಡಿ, ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಅಂಚೆ ನೌಕರರ ಸೊಸೈಟಿಯಲ್ಲಿ ಕೂಡ ಸಂವಿಧಾನದಂತೆ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇರಬೇಕು. ಯಾರಿಗೆ ಸಮಾನ ಅವಕಾಶ ದೊರೆಯುವದಿಲ್ಲವೋ ಅಂತಹದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದರು.

ಅಂಚೆ ಇಲಾಖೆ ವಿವಿಧ ಭಾಗಗಳ ನೌಕರರು ಭಾಗಿ

ಅಂಚೆ ಇಲಾಖೆ ವಿವಿಧ ಭಾಗಗಳ ನೌಕರರು ಭಾಗಿ

ಆರ್‌ಎಂಎಸ್‌ನ ರಾಜ್ಯ ವಲಯ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಸಂವಿಧಾನದ ವಿವಿಧ ವಿಷಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಆರ್‌ಎಂಎಸ್‌ನ ಎಫ್‌ಎನ್‌ಪಿಒ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಧನಪಲ್ ಹಾಗೂ ವಿವಿಧ ಯೂನಿಯನ್ ಪ್ರತಿನಿಧಿಗಳು ಭಾಗವಹಿಸಿದ್ದರು. ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀನಿವಾಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರಾದ ಚಿತ್ತಕೋಟೆ ಹಾಗೂ ದಕ್ಷಿಣ ವಿಭಾಗದ ಅಂಚೆ ಅಧೀಕ್ಷಕರಾದ ಹರೀಶ್ ಹಾಗೂ ಮೈಸೂರು ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರಾದ ಕೊರಗೊಪ್ಪ ನಾಯಕ್ ಹಾಗೂ ಸಹಾಯಕ ಅಂಚೆಅಧೀಕ್ಷಕರರು ಹಾಗೂ ರಾಜ್ಯದ ವಿವಿಧ ವಿಭಾಗದ ಅಂಚೆ ನೌಕರರು ಭಾಗವಹಿಸಿದ್ದರು.

English summary
Constitution of India is a model constitution for the whole world. Civil liberties were fully granted in India since 1950. But even in America, civil liberties were not fully given at that time. UNHRC Special Rapporteur Dr. KP Ashwini said that our constitution which gave such freedom is a model constitution for the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X