ಫ್ರೆಂಚ್‌ಫ್ರೈಸ್, ಚಿಕನ್ ತಿನ್ನಲು ಬಿಡುತ್ತಿಲ್ಲವೆಂದು ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪತ್ನಿ- ಕುತೂಹಲಕರ ವಿವರ ತಿಳಿಯಿರಿ
ಬೆಂಗಳೂರು ಆಗಸ್ಟ್ 25: ಬೆಂಗಳೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪತ್ನಿ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಅನ್ನ, ಮಾಂಸ, ಫ್ರೆಂಚ್‌ಫ್ರೈಸ್ ತಿನ್ನಲು ಬಿಡುತ್ತಿಲ್ಲ ಎಂಬ ಕಾರಣಕ್ಕೆ ಪತಿ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಪತ್ನಿ ಪತಿ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಕ್ಷುಲ್ಲಕ ವಿಚಾರಕ್ಕೆ ದೂರು ದಾಖಲಿಸಲಾಗಿದೆ ಎಂದು ನ್ಯಾಯಪೀಠ ಮೌಖಿಕವಾಗಿ ಆಭಿಪ್ರಾಯ ವ್ಯಕ್ತಪಡಿಸಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿ ಉದ್ಯೋಗಿಯಾಗಿರುವ ಬೆಂಗಳೂರಿನ 36 ವರ್ಷದ ಪತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಮದುವೆಯಾದ ನಂತರ ಪತ್ನಿಯನ್ನು ಅಮೆರಿಕಕ್ಕೆ ಕರೆದೊಯ್ದೆ, ನಮಗೆ ಮಕ್ಕಳಿವೆ.

ಆದರೆ, ಪತ್ನಿ ಸರಿಯಾಗಿ ಅಡುಗೆ ಮಾಡುವುದಿಲ್ಲ. ಪ್ರಶ್ನಿಸಿದರೆ ಅಡುಗೆ ಮಾಡಲು ನನ್ನನ್ನು ಮದುವೆಯಾಗಿದ್ದೀಯಾ ಎನ್ನುತ್ತಾಳೆ. ಸದಾ ಮೊಬೈಲ್ ಹಿಡಿದು ಜಾಲತಾಣಗಳಲ್ಲಿ ನಿರತಳಾಗಿರುತ್ತಾಳೆ. ರೀಲ್ಸ್ ಮಾಡುವ ಹುಚ್ಚು ಬೇರೆ ಇದೆ. ಅಂಗಡಿಗೆ ಹೋದರೆ ಬೇಕಾಬಿಟ್ಟಿ ಹಣ್ಣು, ಸಾಮಾನು ತಂದು ಅವುಗಳನ್ನು ಸರಿಯಾಗಿ ಉಪಯೋಗಿಸುವುದಿಲ್ಲ. ಆಕೆಗೆ ಮಾನಸಿಕ ಸ್ಥಿಮಿತ ಇಲ್ಲ. ಆದ್ದರಿಂದ ನನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಪತಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣದಿಂದ ವಿದೇಶಕ್ಕೆ ತೆರಳಲು ತೊಂದರೆ ಆಗುತ್ತಿದೆ ಎಂಬ ಪತಿಯ ಸಮಸ್ಯೆಯನ್ನು ಬಗೆಹರಿಸುವಂತೆ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಅವರಿಗೆ ನ್ಯಾಯಪೀಠ ಸೂಚಿಸಿದೆ.
ಪತಿ ಹೆಚ್ಚು ಪ್ರೀತಿಸುತ್ತಿರುವುದಕ್ಕೆ ವಿಚ್ಛೇದನ
ಉತ್ತರ ಪ್ರದೇಶದ ಮಹಿಳೆಯೊಬ್ಬರು ಮದುವೆಯಾಗಿ ಕೇವಲ 18 ತಿಂಗಳಲ್ಲಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪತಿ ಆಕೆಯನ್ನು ತುಂಬಾ ಪ್ರೀತಿಸುತ್ತಾನೆ ಮತ್ತು ಅವಳೊಂದಿಗೆ ಜಗಳವಾಡುವುದಿಲ್ಲ ಎಂಬ ಕಾರಣ ನೀಡಿ ಮಹಿಳೆ ವಿಚ್ಛೇದನ ಕೋರಿದ್ದಾರೆ. ಇದನ್ನು ಕೇಳಿ ನ್ಯಾಯಾಧೀಶರೇ ಶಾಕ್ ಆಗಿದ್ದಾರೆ.

ವಿಚ್ಛೇದನ ಕೋರಿದ ಮಹಿಳೆಗೆ ತನ್ನ ಗಂಡ ತನ್ನೊಂದಿಗೆ ಬಹಳ ಮಾತಾಡಬೇಕು, ವಾದ ಮಾಡಬೇಕು, ಜಗಳವಾಡಬೇಕು ಎಂಬ ಆಸೆಯಿತ್ತಂತೆ. ಆದರೆ, ಆಕೆಯ ಗಂಡ ಆಕೆ ಏನೇ ಹೇಳಿದರೂ ಕೋಪಿಸಿಕೊಳ್ಳುತ್ತಿರಲಿಲ್ಲ. ಒಂದೇ ಒಂದು ದಿನವೂ ಆಕೆಯೊಂದಿಗೆ ಜಗಳವಾಡಲಿಲ್ಲ. ಇದರಿಂದ ಬೇಸತ್ತ ಆ ಮಹಿಳೆ ತನ್ನ ಗಂಡನ ಪ್ರೀತಿ ತನಗೆ ಉಸಿರುಗಟ್ಟಿಸುತ್ತಿದೆ ಎಂಬ ಕಾರಣಕ್ಕೆ ವಿಚ್ಛೇದನ ಕೋರಿದ್ದಾರೆ.
"ನನ್ನ ಗಂಡ ವಿಪರೀತ ಒಳ್ಳೆಯವನು. ಅವನೇ ನನಗಾಗಿ ಅಡುಗೆ ಮಾಡುತ್ತಾನೆ. ಮನೆಯ ಎಲ್ಲ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾನೆ. ನನಗೆ ಸ್ವಲ್ಪವೂ ತೊಂದರೆಯಾಗಲು ಬಿಡುವುದಿಲ್ಲ. ವಿಪರೀತ ಕಾಳಜಿ ವಹಿಸುತ್ತಾನೆ. ಇದೇ ನನಗೆ ಉಸಿರುಗಟ್ಟಿಸುತ್ತಿದೆ. ನಾವು ಬೇರೆ ದಂಪತಿಯಂತೆ ನಾರ್ಮಲ್ ಆಗಿಲ್ಲ ಎನಿಸುತ್ತಿದೆ. ನನ್ನ ಗಂಡ ಪ್ರತಿಯೊಂದು ವಿಚಾರದಲ್ಲೂ ನನ್ನೊಂದಿಗೆ ಕಾಂಪ್ರಮೈಸ್ ಆಗುವುದು ನನಗೆ ಇಷ್ಟವಾಗುವುದಿಲ್ಲ" ಎಂದು ಆ ಮಹಿಳೆ ಕೋರ್ಟ್ನಲ್ಲಿ ಹೇಳಿದ್ದಾರೆ.
"ನಾನು ತಪ್ಪು ಮಾಡಿದಾಗ ಅವನು ಯಾವಾಗಲೂ ನನ್ನನ್ನು ಕ್ಷಮಿಸುತ್ತಾನೆ. ಅವನೇ ಗಿಫ್ಟ್ ತಂದುಕೊಟ್ಟು ಸಮಾಧಾನ ಮಾಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಲು ಬಯಸಿದ್ದೆ. ಆದರೆ, ಆತ ಒಂದೇ ಒಂದು ದಿನವೂ ನನ್ನೊಂದಿಗೆ ವಾದ ಮಾಡಲಿಲ್ಲ, ಜಗಳವಂತೂ ಆಡಲೇ ಇಲ್ಲ" ಎಂದು ಆಕೆ ಉಲ್ಲೇಖಿಸಿದ್ದಾರೆ.












Click it and Unblock the Notifications