ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಡ್ರೋಣ್' ಎಂದು ಕಾಗೆ ಹಾರಿಸಿದ್ದ 'ಪ್ರತಾಪ್' ವಿರುದ್ಧ ದೂರು ದಾಖಲು!

|
Google Oneindia Kannada News

ಬೆಂಗಳೂರು, ಜು. 17: ನಿರುಪಯುಕ್ತ ವಸ್ತುಗಳಿಂದ ಡ್ರೋನ್ ತಯಾರಿಸಿರುವುದಾಗಿ ಸುಳ್ಳು ಹೇಳಿಕೊಂಡಿದ್ದ ಡ್ರೋನ್ ಪ್ರತಾಪ್ ವಿರುದ್ಧ ಕೊನೆಗೂ ಪೊಲೀಸರಲ್ಲಿ ದೂರು ದಾಖಲಾಗಿದೆ. ಡ್ರೋನ್ ತಯಾರಿಕೆಯಲ್ಲಿ ಸಾಧನೆ ಮಾಡಿರುವುದಾಗಿ ಹೇಳಿಕೊಂಡು ವಂಚನೆ ಮಾಡಿರುವ ಆರೋಪದ ಮೇಲೆ,​​ ಪ್ರತಾಪ್ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ಬೆಂಗಳೂರು ಮಹಾನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Recommended Video

ಗೋವಾ ಹೋಗೋ ಪ್ಲಾನ್ ಇದ್ರೆ ಮೊದಲು ಕ್ಯಾನ್ಸಲ್ ಮಾಡಿ. |Oneindia kannada

ಡ್ರೋನ್ ಪ್ರತಾಪ್,​​ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾನೆ. ಈ ಮೂಲಕ ಸಾರ್ವಜನಿಕರ ಹಣವನ್ನು ವಂಚಿಸಿದ್ದಾನೆ. ಹೀಗಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮನವಿ ಮಾಡಿದ್ದಾರೆ. ಜೊತೆಗೆ ಡ್ರೋನ್ ಪ್ರತಾಪ್ ಹೇಗೆಲ್ಲ ಜನರನ್ನು ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಸಮಾಜಕ್ಕೆ ಪಂಗನಾಮ ಹಾಕಿರುವ ಪ್ರತಾಪ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಡ್ರೋಣ್ ಪ್ರತಾಪ್ ಆಯ್ತು, ಇದೀಗ ಕೆರೆ ಕಾಮೇಗೌಡರ ಸರದಿನಾ?ಡ್ರೋಣ್ ಪ್ರತಾಪ್ ಆಯ್ತು, ಇದೀಗ ಕೆರೆ ಕಾಮೇಗೌಡರ ಸರದಿನಾ?

ಡ್ರೋನ್ ಪ್ರತಾಪ್ ಪಂಗನಾಮ

ಡ್ರೋನ್ ಪ್ರತಾಪ್ ಪಂಗನಾಮ

ಡ್ರೋನ್ ಪ್ರತಾಪ್,​​ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾನೆ. ಆ ಮೂಲಕ ಸಾರ್ವಜನಿಕರ ಹಣವನ್ನು ವಂಚಿಸಿದ್ದಾನೆ. ಹೀಗಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್‌ ಎಂಬುವರು ಬೆಂಗಳೂರು ಮಹಾನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್ ಅವರಿ​​ಗೆ ದೂರು ಸಲ್ಲಿಸಿದ್ದಾರೆ.

ಡ್ರೋನ್ ಪ್ರತಾಪ್ ವಂಚನೆ ಕೆಲಸ ಹಾಗೂ ಅಕ್ರಮವಾಗಿ ದುಡ್ಡು ಸಂಪಾದನೆ ಮಾಡಿದ ಆರೋಪದ ಮೇಲೆ ದೂರು ನೀಡಿದ್ದಾರೆ.

ಮಹಾನ್ ಸುಳ್ಳುಗಾರ

ಮಹಾನ್ ಸುಳ್ಳುಗಾರ

ಪ್ರತಾಪ್​ ಭಾರತ ಹಾಗೂ ಕರ್ನಾಟಕಕ್ಕೆ ತಾನೊಬ್ಬ ಯುವ ವಿಜ್ಞಾನಿ ಅಂತ ಹೇಳಿ ಮೋಸ ಮಾಡಿದ್ದಾನೆ ಅಂತ ಆರೋಪಿಸಿದ್ದಾರೆ. ಆತ ಮಂಡ್ಯ ಮೂಲದವನು, 87 ದೇಶ ಸುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ. ಈವರೆಗೆ 300 ಲೆಕ್ಚರ್ಸ್​​ ಕೊಟ್ಟಿದ್ದೇನೆಂದು ಹೇಳಿದ್ದಾನೆ. ವಿದೇಶದಲ್ಲಿ ನಡೆದ ಎಕ್ಸಿಬಿಷನ್​​​​​​ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದೆ ಎಂದು ಸುಳ್ಳು ಹೇಳಿದ್ದಾನೆ.

ಅಲ್ಲದೆ ಇದನ್ನೇ ಮುಂದಿಟ್ಟುಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಣ ಪಡೆದಿದ್ದಾನೆ. ಅಲ್ಲದೇ ಬೇರೆ ಬೇರೆ ಕಾಲೇಜಿಗೆ ಹೋಗಿ ತಪ್ಪು ಸಂದೇಶ ರವಾನಿಸಿದ್ದಾನೆ. ಹೀಗಾಗಿ ಆತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

ಕೋವಿಡ್ ಕಟ್ಟಿಹಾಕಲು ಶುರುವಾಯ್ತು ಪ್ಲೇಗ್ ಕಾಲದ ಮಾದರಿ ಜೀವನ!ಕೋವಿಡ್ ಕಟ್ಟಿಹಾಕಲು ಶುರುವಾಯ್ತು ಪ್ಲೇಗ್ ಕಾಲದ ಮಾದರಿ ಜೀವನ!

ನೈಜ ವಿಜ್ಞಾನಿಗಳಿಗೆ ಕೊಡಿಸಿ

ನೈಜ ವಿಜ್ಞಾನಿಗಳಿಗೆ ಕೊಡಿಸಿ

ರಾಜ್ಯದಲ್ಲಿ ಸಾಕಷ್ಟು ಪ್ರತಿಭಾವಂತ ಯುವ ವಿಜ್ಞಾನಿಗಳಿದ್ದಾರೆ. ದೇಶಕ್ಕಾಗಿ ಹಗಲಿರುಳು ಅವರು ಶ್ರಮಿಸುತ್ತಿದ್ದಾರೆ. ಅಂತಹ ಪ್ರತಿಭಾವಂತರಿಗೆ ಆರ್ಥಿಕ ಸಹಾಯ ಅಗತ್ಯವಾಗಿದೆ. ಡ್ರೋನ್ ಪ್ರತಾಪ್ ಈಗಾಗಲೇ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ತೆಗೆದುಕೊಂಡಿರುವ ಹಣವನ್ನು ವಸೂಲಿ ಮಾಡಬೇಕು.

ವಸೂಲಿಯಾಗುವ ಹಣವನ್ನು ಪ್ರತಿಭಾವಂತ ಯುವ ವಿಜ್ಞಾನಿಗಳ ಪ್ರಯೋಗಗಳಿಗೆ ಕೊಡಿಸಿ ಎಂದು ಜೇಕಬ್​​​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಲ್ಲದ ಡ್ರೋನ್ ಹಾರಿಸಿದ್ದ ಪ್ರತಾಪ್

ಇಲ್ಲದ ಡ್ರೋನ್ ಹಾರಿಸಿದ್ದ ಪ್ರತಾಪ್

ಯಾವುದೇ ಡ್ರೋನ್ ತಯಾರು ಮಾಡದೇ ಇದ್ದರೂ ಜಾಗತಿಕ ಮಟ್ಟದ ವಿಜ್ಞಾನಿ ತಾನು ಎಂದು ಪ್ರತಾಪ್ ವಂಚಿಸಿರುವ ದೂರುಗಳಿವೆ. ಸಂಘ-ಸಂಸ್ಥೆಗಳು ಹಾಗೂ ಸರ್ಕಾರವನ್ನು ವಂಚಿಸಿದ್ದ ಹಾಗೆಯೆ ಕೆಲವು ಮಾಧ್ಯಮಗಳನ್ನು ಕೂಡ ಪ್ರತಾಪ್ ವಂಚಿಸಿದ್ದ. ತಾನು ಮಾಡದೇ ಇರುವ ಸಾಧನೆಯ ಕಟ್ಟು ಕಥೆಯನ್ನು ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದ.

ಕೊನೆಗೆ ವೆಬ್‌ಸೈಟ್‌ವೊಂದು ಡ್ರೋನ್ ಪ್ರತಾಪ್ ಕುರಿತು ತನಿಖಾ ವರದಿ ಪ್ರಕಟಿಸಿತ್ತು. ಅದಾದ ಮೇಲೆ ಪ್ರತಾಪ್ ಡ್ರೋನ್ ತಯಾರಿಕೆಯ ಪ್ರಾಥಮಿಕ ಜ್ಞಾನವನ್ನೂ ಹೊಂದಿಲ್ಲ ಎಂಬುದು ಬಹಿರಂಗವಾಗಿತ್ತು. ಈ ವರೆಗೂ ಪ್ರತಾಪ್ ತಯಾರಿಸಿದ ಡ್ರೋನ್ ಪ್ರಾತ್ಯಕ್ಷಿಕೆ ಕೊಡುವಲ್ಲಿ ವಿಫಲನಾಗಿದ್ದಾನೆ.

English summary
Drone Pratap has raised billions of rupees from the state and central government. He has thus defrauded the public's money. Social activist Jacob George has lodged a complaint with Bengaluru Police Commissioner Bhaskar Rao to take action against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X