ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಟೋಬರ್‌ನಿಂದ ಬಸ್‌-ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್

|
Google Oneindia Kannada News

ಬೆಂಗಳೂರು, ಮೇ 18:ವರ್ಷಗಳಿಂದ ಕಾಯುತ್ತಿದ್ದ ಯೋಜನೆಗೆ ಕೊನೆಗೂ ಜೀವ ಬಂದಿದೆ. ಅಕ್ಟೋಬರ್‌ನಿಂದ ಬಸ್‌ ಹಾಗೂ ನಮ್ಮ ಮೆಟ್ರೋ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್ ಇರಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಬಿಎಂಟಿಸಿ ಮತ್ತು ಮೆಟ್ರೋ ಪ್ರಯಾಣಿಕರಿಗೆ ಒಂದೇ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆ ಶೀಘ್ರವೇ ಚಾಲನೆ ಸಿಗಲಿದೆ. ಪೈಲಟ್ ಮಾದರಿಯಲ್ಲಿ ಕೆಲವು ಕಾರ್ಡ್‌ಗಳನ್ನು ಮಾತ್ರ ಪ್ರಯಾಣಿಕರ ಬಳಕೆಗೆ ನೀಡಲಾಗುತ್ತದೆ.

ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್! ಮೆಟ್ರೋ, ಬಿಎಂಟಿಸಿ, ಉಪನಗರ ರೈಲಿಗೆ ಒಂದೇ ಸ್ಮಾರ್ಟ್‌ಕಾರ್ಡ್!

ಮೊದಲಿಗೆ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಹೋಗಿ ಬರುವ ಪ್ರಯಾಣಿಕರಿಗೆ ಮಾತ್ರ ವಿತರಿಸಲಾಗುತ್ತದೆ.ಸ್ಮಾರ್ಟ್‌ಕಾರ್ಡ್ ಸಿದ್ಧಪಡಿಸಲು ಈಗಾಗಲೇ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ ವಹಿಸಲಾಗಿದೆ.

commuters will get one smart card for bus and metro trains by october

ಅವರಿಗೆ ಸಿ-ಡಾಕ್ ಸಂಸ್ಥೆ ನೆರವು ನೀಡುತ್ತದೆ. ಸ್ಮಾರ್ಟ್ ಕಾರ್ಡ್, ಪ್ರಯಾಣ ದರ ಕಡಿತ ಯಂತ್ರ ಸೇರಿ ಅಗತ್ಯವಿರುವ ಪರಿಕರಗಳ ಪೂರೈಸಲು ತಿಳಿಸಲಾಗಿದೆ. ದೆಹಲಿಯಲ್ಲಿ 2018ರಲ್ಲೇ ಮೊಬಿಲಿಟಿ ಕಾರ್ಡ್ ಪರಿಚಯಿಸಲಾಗಿತ್ತು.

ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು

ಈಗ ಬೆಂಗಳೂರಿನಲ್ಲಿ ಅಂಥದ್ದೇ ಮಾದರಿಯ ಕಾರ್ಡ್ ವಿತರಿಸಲಾಗುತ್ತಿದೆ. ಆ ಕಾರ್ಡ್ ಮೂಲಕ ಬಿಎಂಟಿಸಿ ಬಸ್‌ನಲ್ಲೂ ಪ್ರಯಾಣಿಸಬಹುದಾಗಿದೆ. ಮೆಟ್ರೋ ಪ್ರವೇಶ ದ್ವಾರದಲ್ಲಿ ಅದರ ಮೂಲಕ ಒಳಬರುವ ವ್ಯವಸ್ಥೆ ಮಾಡಲಾಗುತ್ತಿದೆ.

English summary
If things go as planned, Bengalureans can soon travel cashless on metro trains and buses across the city. The BMRCL and BMTC Corporation will introduce an interoperable smart card that would work for both modes of public transport by October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X