Bengaluru: ವೀಲಿಂಗ್ ಮಾಡುತ್ತಿದ್ದ ಪುಂಡರ ಬೈಕ್‌ಗಳನ್ನು ಫ್ಲೈಓವರ್​​ನಿಂದ ಕೆಳಗೆ ಎಸೆದ ಜನ; ವಿಡಿಯೋ ವೈರಲ್

ಬೆಂಗಳೂರಿನಲ್ಲಿ ವೀಲಿಂಗ್ ಮಾಡುವ ಪುಂಡರ ಹಾವಳಿ ಮಿತಿ ಮೀರಿದೆ, ಅದರಲ್ಲೂ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ನಡುವೆಯೇ ಪುಂಡರು ಭಯವಿಲ್ಲದೆ ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಾರೆ. ಹಲವು ಸಂದರ್ಭಗಳಲ್ಲಿ ಇದು ಅಪಘಾತಕ್ಕೂ ಕಾರಣವಾಗುತ್ತದೆ. ಪೊಲೀಸರು ಕೂಡ ಹಲವು ಪುಂಡರ ಹೆಡೆಮುರಿ ಕಟ್ಟಿದರೂ ಇದನ್ನು ಸಂಪೂರ್ಣವಾಗಿ ತೊಲಗಿಸಲು ಆಗಿಲ್ಲ. ಇದೀಗ ವೀಲಿಂಗ್ ಮಾಡುತ್ತಿದ್ದ ಪುಂಡರಿಗೆ ಜನರೇ ಸೇರಿಕೊಂಡು ಬುದ್ದಿ ಕಲಿಸಿದ್ದಾರೆ.

ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡಕಮಾರನಹಳ್ಳಿ ಬಳಿ ವೀಲಿಂಗ್ ಮಾಡುತ್ತಿದ್ದ ಪುಂಡರು ಅಪಘಾತ ಮಾಡಿದ್ದಾರೆ. ವೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ಬಳಿಕ ಇತರ ವಾಹನಗಳ ಸವಾರರು ಸಿಟ್ಟಿಗೆದ್ದು ವೀಲಿಂಗ್ ಮಾಡುತ್ತಿದ್ದ ಬೈಕ್‌ಗಳನ್ನು ಫ್ಲೈಓವರ್ ನಿಂದ ಕೆಳಗೆ ಎಸೆದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Commuters threw two bikes performing wheelies off a flyover in Bengaluru

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನೆಲಮಂಗಲ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. ಹೆಚ್ಚಿನ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಪುಂಡರು ಬೈಕ್ ವೀಲಿಂಗ್ ಮಾಡುತ್ತಾ ಇತರ ವಾಹನ ಸವಾರರಿಗೆ ಕಿರಿಕಿರಿ ಮಾಡಿದ್ದಾರೆ. ಇದರಿಂದ ಬೇಸತ್ತ ಕೆಲವು ವಾಹನ ಸವಾರರು ಒಟ್ಟಾಗಿ ಸೇರಿಕೊಂಡು ವೀಲಿಂಗ್ ಮಾಡುತ್ತಿದ್ದವರನ್ನು ತಡೆದು, ಬೈಕ್‌ಗಳನ್ನು ಕೆಳಗಡೆ ಬಿಸಾಡಿದ್ದಾರೆ.

ಇದೇ ಸರಿಯಾದ ಶಿಕ್ಷೆ ಎಂದ ಜನ

ಇನ್ನು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಲಿಂಗ್ ಮಾಡುವವರಿಗೆ ಇದೇ ರೀತಿ ಮಾಡಿದರೆ ಇಂತಹ ಪ್ರಕರಣಗಳಿಗೆ ಬ್ರೇಕ್ ಹಾಕಬಹುದು ಎಂದಿದ್ದಾರೆ. ಬೈಕ್ ಕೆಳಗೆ ಎಸೆದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದು, ಇಂತಹ ಪುಂಡರಿಗೆ ಕಾನೂನು ಭಯವಿಲ್ಲ, ಪೊಲೀಸರು ಕೂಡ ಏನೂ ಮಾಡದೇ ಇದ್ದಾಗ ಜನರೇ ಇಂತಹ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+