22 ಪ್ರಬುದ್ಧ ಪ್ರಬಂಧಗಳ 'ಕಾಫಿ ಬ್ರೇಕ್' ಬಿಡುಗಡೆ
ಬೆಂಗಳೂರು, ಸೆ. 25 : ನಿತ್ಯ ಜೀವನದ ಸಾರ ಹಿಡಿದಿಡುವ ಮತ್ತು ಮನುಜರ ನಡತೆಯ ಕುರಿತು 22 ಪ್ರಬುದ್ಧ ಪ್ರಬಂಧಗಳ ಸಂಕಲನ 'ಕಾಫಿ ಬ್ರೇಕ್' ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ಜಯನಗರ 7ನೇ ಬ್ಲಾಕ್ ನಲ್ಲಿರುವ ನ್ಯಾಷನಲ್ ಕಾಲೇಜಿನ ಬಿ.ವಿ.ಜಗದೀಶ್ ಹಾಲ್ ನಲ್ಲಿ ಬಿಡುಗಡೆಯಾಯಿತು.
ಈ ಪುಸ್ತಕ ಆಂಗ್ಲ ಭಾಷೆಯಲ್ಲಿದ್ದು, ಹವ್ಯಾಸಿ ಬರಹಗಾರ ರಂಗರಾಜ್ ಚಕ್ರವರ್ತಿ ಅವರು ಬರೆದಿದ್ದಾರೆ. ಈ ಸಂಕಲನ ಅವರು ಬರೆದಿರುವ ಬ್ಲಾಗ್ ಲೇಖನಗಳನ್ನು ಒಳಗೊಂಡಿದೆ. ಇದರ ಕನ್ನಡ ಅನುವಾದವನ್ನು ಧರ್ಮಶ್ರೀ ಬಿ. ಅಯ್ಯಂಗಾರ್ ಅವರು ಮಾಡಿದ್ದು, ಎರಡೂ ಪುಸ್ತಕಗಳು ಒಟ್ಟಿಗೆ ಬಿಡುಗಡೆಯಾದವು.

ಹೋಮಿಯೋಪತಿ ಮತ್ತ ಆಧ್ಯಾತ್ಮಿಕ ತಜ್ಞರಾದ ಡಾ. ನಾರಾಯಣ ಸಾವಂತ್ ಅವರು ದೀಪ ಬೆಳಗಿಸಿ ನಂತರ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಖ್ಯಾತ ಲೇಖಕ ಮತ್ತು ಪತ್ರಕರ್ತ ಗಿರೀಶ್ ರಾವ್ (ಜೋಗಿ) ಮತ್ತು ವಿಜಯ ಕರ್ನಾಟಕದ ರವಿ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಈ ಸಂಕಲನ ವೈವಿಧ್ಯಮಯ ಲೇಖನಗಳನ್ನೊಳಗೊಂಡಿದ್ದು, ವಿಭಿನ್ನ ನಿರೂಪಣೆಯಿಂದ ಗಮನ ಸೆಳೆಯುತ್ತವೆ ಎಂದು ಜೋಗಿ ಅವರು ಪ್ರಶಂಸಿಸಿದರು. ಲೇಖಕರಿಬ್ಬರೂ ಇಂಜಿನಯರ್ ಆಗಿದ್ದರೂ, ಬಿಡುವು ಮಾಡಿಕೊಂಡು ಮೊದಲ ಬಾರಿಗೆ ಪುಸ್ತಕ ಬಿಡುಗಡೆ ಮಾಡಿದ ಲೇಖಕರನ್ನು ರವಿ ಕುಮಾರ್ ಅವರು ಬೆನ್ನುತಟ್ಟಿದರು.
ಭಾನುವಾರವಾಗಿದ್ದರಿಂದ ಬಿ.ವಿ.ಜಗದೀಶ್ ಸಭಾಂಗಣದಲ್ಲಿ ಪುಸ್ತಕ ಪ್ರೇಮಿಗಳು ಕಿಕ್ಕಿರುದು ತುಂಬಿದ್ದರು. ಸುಮಾರು 200ಕ್ಕೂ ಹೆಚ್ಚು ಪ್ರತಿಗಳು ಈ ಸಂದರ್ಭದಲ್ಲಿ ಮಾರಾಟವಾದವು. ಪುಸ್ತಕ ಕೊಂಡು ಓದುವವರು ಬೆಂಗಳೂರಿನಲ್ಲಿ ಇನ್ನೂ ಇದ್ದಾರೆ ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿಯಾಗಿತ್ತು.
ಇಂಜಿನಿಯರಿಂಗ್ ಪದವೀಧರೆಯಾಗಿರುವ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಮತ್ತು ಹಾಡುಗಾರ್ತಿಯಾಗಿರುವ ಧರ್ಮಶ್ರೀ ಐಯ್ಯಂಗಾರ್ ಅವರು ಮೈಸೂರನಲ್ಲಿ ನೆಲೆಸಿದ್ದಾರೆ ಮತ್ತು ಹವ್ಯಾಸಿ ಬರಹಗಾರ್ತಿಯಾಗಿದ್ದಾರೆ. ಅವರು ಕೆಲ ವರ್ಷಗಳ ಕಾಲ ಅಮೆರಿಕದಲ್ಲಿ ಇದ್ದು ಈಗ ಭಾರತಕ್ಕೆ ಮರಳಿದ್ದಾರೆ.












Click it and Unblock the Notifications