ಮಾಧ್ಯಮಗಳಿಗೆ ಸರ್ಕಾರ ಬೀಳುವುದು ನೋಡುವ ಆಸೆ: ದೇವೇಗೌಡ
ಬೆಂಗಳೂರು, ಜುಲೈ 03: ಸರ್ಕಾರ ಬೀಳುವುದನ್ನು ನೋಡುವ ಆಸೆ ಮಾಧ್ಯಮಗಳಿಗೆ ಮಾತ್ರವೇ ಇದೆ, ಆದರೆ ಅವರ ಕನಸು ನನಸಾಗುವುದಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸುಭದ್ರವಾಗಿದೆ, ನಾನು ಪುರಾವೆ ಇಲ್ಲದೆ ಮಾತನಾಡುವುದಿಲ್ಲ, ಪುರಾವೆ ಇರುವುದರಿಂದಲೇ ಹೇಳುತ್ತಿದ್ದೇನೆ ಸರ್ಕಾರಕ್ಕೆ ಯಾವ ಸಂಕಷ್ಟವೂ ಇಲ್ಲವೆಂದು ಎಂದು ಅವರು ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎರಡೂ ಪಕ್ಷದ ಶಾಸಕರು ಭದ್ರವಾಗಿದ್ದಾರೆ ಯಾರೂ ಎಲ್ಲಿಗೂ ಹೋಗುತ್ತಿಲ್ಲ, ಮಾಧ್ಯಮಗಳು ಹೇಳುತ್ತಿರುವಂತೆ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅವರು ಹೇಳಿದರು.

ದೇವೇಗೌಡ ಅವರು ಇಂದು ಜೆಡಿಎಸ್ ಅಲ್ಪ ಸಂಖ್ಯಾತರ ಸಭೆ ನಡೆಸಿದರು. ಆದರೆ ಸಭೆಯಲ್ಲಿ ದೇವೇಗೌಡ ಅವರ ಎದುರೇ ಜೆಡಿಎಸ್ ಮುಖಂಡರು ಪರಸ್ಪರ ಜಟಾ-ಪಟಿ ನಡೆಸಿದರು.
ಕೆಲವರು ದೇವೇಗೌಡ ಅವರಿದ್ದ ವೇದಿಕೆ ಏರಿ ಗಲಾಟೆ ಮಾಡಿದರು, ದೇವೇಗೌಡ ಅವರು ಹೇಳಿದರೂ ಸಹ ಸುಮ್ಮನಾಗಲಿಲ್ಲ. ಆ ನಂತರ ಅಲ್ಲಿಯೇ ಇದ್ದ ನಾಯಕರು ಬಂದು ಗಲಾಟೆ ಬಿಡಿಸಿದರು.












Click it and Unblock the Notifications