ಬೆಂಗಳೂರು ವಿಭಜನೆ ಬಿಜೆಪಿ ಪ್ಲ್ಯಾನ್ ಎಂದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು ವಿಭಜನೆ ಮಾಡುವ ವಿಚಾರವು ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ & ಜೆಡಿಎಸ್‌ ನಡುವೆ ಇದೀಗ ಈ ವಿಚಾರವಾಗಿ ವಾಕ್ಸಮರ ಶುರುವಾಗಿದೆ. ಬೆಂಗಳೂರಿನ ಇತಿಹಾಸವನ್ನು ಮಣ್ಣುಪಾಲು ಮಾಡುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿರೋಧಿಸಿವೆ. ಆದರೆ, ಯಾವಾಗ ವಿರೋಧ ವ್ಯಕ್ತವಾಗುತ್ತಿದ್ದೆಯೋ ಆಗ ಕಾಂಗ್ರೆಸ್‌ ಪಕ್ಷವು ಬೆಂಗಳೂರು ವಿಭಜನೆ ಮಾಡುವುದು ನಮ್ಮ ಪಕ್ಷದ ನಿರ್ಧಾರವಲ್ಲ. ಅದು ಬಿಜೆಪಿ ಕಾಲದಲ್ಲಿ ಆಗಿರುವ ನಿರ್ಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತವನ್ನು ಮುಗಿಸಿ, ಗ್ರೇಟರ್ ಬೆಂಗಳೂರು ಆಡಳಿತವನ್ನು ಜಾರಿ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿದೆ.

ರಾಜಕೀಯ ಸ್ವರೂಪ: ಇನ್ನು ಬೆಂಗಳೂರಿನ ಆಡಳಿತವು ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ತೆಕ್ಕೆಗೆ ಬದಲಾಗುತ್ತಿದ್ದು. ನಾಡಪ್ರಭು ಕೆಂಪೇಗೌಡ ಅವರು ಕಟ್ಟಿರುವ ನಗರವನ್ನು ಕಾಂಗ್ರೆಸ್ ಕೆಡಿಸುತ್ತಿದೆ. ಅಲ್ಲದೇ ಒಡೆದು ಆಡಳಿತ ನಡೆಸುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿವೆ. ಆದರೆ, ಕಾಂಗ್ರೆಸ್ ಪಕ್ಷವು ಇದು ನಮ್ಮ ಯೋಜನೆಯೇ ಅಲ್ಲ ಬಿಜೆಪಿಯದ್ದೇ ನಿರ್ಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.

CM Siddaramaiah says division of Bengaluru is BJP s plan

ಗ್ರೇಟರ್ ಬೆಂಗಳೂರು ಆಡಳಿತದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ವಿಭಜನೆ ಮಾಡುವ ಯೋಜನೆ ರೂಪಿಸಿದ್ದೇ ಬಿಜೆಪಿ. ಒಂದೂವರೆ ಕೋಟಿ‌‌ ಜನಸಂಖ್ಯೆ ಇರುವ ಬೆಂಗಳೂರಿಗೆ ಒಂದೇ ಮಹಾನಗರ ಪಾಲಿಕೆಯ ಮೂಲಕ ನಿರ್ವಹಣೆ ಮಾಡುವುದು ಕಷ್ಟ. ಹೀಗಾಗಿ ವಿಭಜನೆ ಮಾಡಲಾಗುವುದು. ಆಡಳಿತಾತ್ಮಕ ದೃಷ್ಟಿಯಿಂದ ಮೂರು ಅಥವಾ ಅದಕ್ಕಿಂತ ಹೆಚ್ಚು ಭಾಗವಾಗಿ ವಿಭಜಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಬೆಂಗಳೂರು ವಿಭಜನೆ ಹಾಗೂ ಗ್ರೇಟರ್ ಬೆಂಗಳೂರು ಆಡಳಿತದ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು, ಆರ್. ಅಶೋಕ್ ಅವರು ಮೊದಲೇ ಗ್ರೇಟರ್ ಬೆಂಗಳೂರಿಗೆ ವಿರೋಧ ಮಾಡಬಹುದಿತ್ತು, ಆದರೆ ಮಾಡಲಿಲ್ಲ. ವಿಪಕ್ಷ ನಾಯಕರಾಗಿ ಅಷ್ಟೂ ಟೀಕೆ ಮಾಡದಿದ್ದರೆ ಹೇಗೆ? ಅವರಿಗೆ ಗೌರವ ಕೊಡುತ್ತೇವೆ. ಆಗ ಅವರೇ ಸಲಹೆಗಳನ್ನು ಕೊಟ್ಟಿದ್ದಾರೆ. ಯಾಕೆ ಕೊಟ್ಟರು? ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಆಗಿದೆ. ಇವರೆಲ್ಲರೂ ಒಪ್ಪಿದ್ದಾರೆ. ಈಗ ವಿಪಕ್ಷವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

#ಕನ್ನಡದ್ರೋಹಿ_ಕಾಂಗ್ರೆಸ್ ಎಂದ ಜೆಡಿಎಸ್: ಇನ್ನು ಗ್ರೇಟರ್ ಬೆಂಗಳೂರು ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್, ವಿಧಾನಸಭೆಯಲ್ಲಿ ಕನ್ನಡದ ಸಂಧಿ, ಸಮಾಸ, ವ್ಯಾಕರಣದ ಬಗ್ಗೆ ಪಾಠಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಈಗ "ಗ್ರೇಟರ್‌ ಬೆಂಗಳೂರು ಪ್ರಾಧಿಕಾರ" ಎಂದು ಮಾಡಿದ್ದೀರಿ. "ಗ್ರೇಟರ್‌" ಪದದ ಬದಲಿಗೆ ಕನ್ನಡ ಪದ ಸಿಗಲಿಲ್ಲವೇ ? ನಿಮ್ಮ ಕಾಂಗ್ರೆಸ್‌ ಸರ್ಕಾರಕ್ಕೆ ಎಂದು ಪ್ರಶ್ನೆ ಮಾಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವುದರ ನಡುವೆಯೇ ಇದು ನಮ್ಮ ಯೋಜನೆಯಲ್ಲಿ ಬಿಜೆಪಿಯದ್ದು ಎಂದು ಕಾಂಗ್ರೆಸ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+