ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಸಿಎಂ ಬೊಮ್ಮಾಯಿ ಮಾಧ್ಯಮ ಸಲಹೆಗಾರ ಗುರುಲಿಂಗ ಸ್ವಾಮಿ ನಿಧನ

|
Google Oneindia Kannada News

ಬೆಂಗಳೂರು, ಆಗಸ್ಟ್ 22: ಬೆಂಗಳೂರಿನಲ್ಲಿ ಸಿಎಂ ಮಾಧ್ಯಮ ಸಂಯೋಜಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಗುರುಲಿಂಗ ಸ್ವಾಮಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಗರಭಾವಿಯ ಸಮೀಪದಲ್ಲಿರುವ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ತೀವ್ರವಾಗಿ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಗುರುಲಿಂಗ ಸ್ವಾಮಿಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದ್ದರಾದರು ಮಾರ್ಗಮದ್ಯೆ ಅಸುನೀಗಿದ್ದಾರೆ.

ಗುರುಲಿಂಗ ಸ್ವಾಮಿಗೆ ತೀವ್ರವಾದ ಎದೆ ನೋವು ಕಾಣಿಸಿಕೊಂಡ ತಕ್ಷಣ ಯುನಿಟಿ ಲೈಫ್ ಆಸ್ಪತ್ರೆಗೆ ಕೆರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಕೇಲವು ಪರೀಕ್ಷೆಗಳನ್ನು ಮಾಡಿ ಗುರುಲಿಂಗ ಸ್ವಾಮಿ ಸಾವನ್ನಪ್ಪಿರುವುದನ್ನ ಖಚಿತಪಡಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಗೃಹ ಸಚಿವರಾದ ಬಳಿಕ ಅವರ ಮಾಧ್ಯಮ ಸಂಯೋಜಕರಾಗಿ ಸೇರಿಕೊಂಡಿದ್ದ ಗುರುಲಿಂಗ ಸ್ವಾಮಿ ಹೊಳಿಮಠ. ಬೊಮ್ಮಾಯಿಗೆ ಸಿಎಂ ಸ್ಥಾನ ಒಲಿದ ಬಳಿಕ ಸಿಎಂರ ಮಾಧ್ಯಮ ಸಂಯೋಜಕರವಾಗಿ ನೇಮಕವಾಗಿದ್ದರು. ಪ್ರಸ್ತುತ ಅಲ್ಲಿಯೇ ಕೆಲಸವನ್ನು ನಿರ್ವಹಿಸುತ್ತಿದ್ದರು.

CM Media Coordinator Gurulinga Swamy Dies of Heart Attack in Bengaluru

ಪತ್ರಕರ್ತರಾಗಿ ಸುದೀರ್ಘ ಅನುಭವ
ಗುರುಲಿಂಗ ಸ್ವಾಮಿ ಹಲವು 15ಕ್ಕೂ ಹೆಚ್ಚು ವರ್ಷ ಪತ್ರಕರ್ತರಾಗಿ ಸೇವೆಯನ್ನು ಸಲ್ಲಿಸಿದ್ದವರು. ಪ್ರತಿಷ್ಠಿತ ದಿನಪತ್ರಿಕೆ ಸುದ್ದಿ ವಾಹಿನಿಯಲ್ಲಿ ಕರ್ತವ್ಯವನ್ನು ನಿರ್ವಹಣೆಯನ್ನು ಮಾಡಿದ್ದಾರೆ. ಈಟಿವಿ ಕನ್ನಡ, ವಿಜಯವಾಣಿ, ಟಿವಿ 5 ಕನ್ನಡದಲ್ಲಿ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಬೊಮ್ಮಾಯಿಯವರಿಗೆ ಮಾಧ್ಯಮ ಸಂಯೋಜಕಾಗುವ ಅವಕಾಶ ಒಲಿದು ಬಂದಿತ್ತು.

ಬೆಳಗಾವಿ ಟು ಬೆಂಗಳೂರು ಜರ್ನಿ
ಬೆಳಗಾವಿಯ ರಾಮದುರ್ಗಾ ಮೂಲದ ಗುರುಲಿಂಗ 1976 ಮಾರ್ಚ್‌ 9 ರಂದು ಜನಿಸಿದರು. ಕರ್ನಾಟಕ ಯುನಿರ್ಸಿಟಿಯ್ಲಿ ಪತ್ರಿಕೋಧ್ಯಮ ಪದವಿಯನ್ನು ಪಡೆದಿದ್ದರು. ಗುರುಲಿಂಗ ಸ್ವಾಮಿ ಹೊಳಿಮಠ ಸಣ್ಣವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗಿರುವುದು ವಿಪರ್ಯಾಸ.

CM Media Coordinator Gurulinga Swamy Dies of Heart Attack in Bengaluru

ಗುರುಲಿಂಗ ಸ್ವಾಮಿ ನಿಧನಕ್ಕೆ ಸಂತಾಪ
ಗುರುಲಿಂಗ ಸ್ವಾಮಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ವಿ ಸೋಮಣ್ಣ ಸೇರಿದಂತೆ ಪಕ್ಷಾತೀತವಾಗಿ ರಾಜಕೀಯ ಮುಖಂಡರು ಸಂತಾಪವನ್ನು ಸೂಚಿಸುತ್ತಿದ್ದಾರೆ. ಗುರುಲಿಂಗ ಸ್ವಾಮಿ ನಿಧನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ತಿಳಿಸುತ್ತಿದ್ದಾರೆ.

Recommended Video

ಅಕ್ಷರ್ ಪಟೇಲ್ ಹೀಗೆ ಇಶಾನ್ ಕಿಶನ್ ಮೇಲೆ ಸಿಡುಕಿದ್ದೇಕೆ | Oneindia Kannada

English summary
Gurulinga Swamy, who was on duty as the CM's media coordinator in Bengaluru, died of a heart attack. While practicing in a gym near Nagarabhavi, severe chest pain appeared. They immediately tried to take Gurulinga Swami to a private hospital and ontheway he passed away, Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X