ಗ್ರಾಮ ವಾಸ್ತವ್ಯ: ರಾಯಚೂರಿಗೆ ರೈಲಿನಲ್ಲಿ ತೆರಳಿದ ಕುಮಾರಸ್ವಾಮಿ
Recommended Video
ಬೆಂಗಳೂರು, ಜೂನ್ 25: ರಾಯಚೂರಿನ ಮಾನ್ವಿಯಲ್ಲಿ ನಾಳೆ (ಬುಧವಾರ) ನಡೆಯಲಿರುವ ಎರಡನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರು ರೈಲಿನಲ್ಲಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ.
ಇಂದು ಸಂಜೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ರೈಲಿನಲ್ಲಿ ಕುಮಾರಸ್ವಾಮಿ ಅವರು ಪ್ರಯಾಣ ಬೆಳೆಸಿದರು, ಈ ಸಮಯ ಅವರೊಂದಿಗೆ ಸಚಿವರಾದ ಸಾ.ರಾ.ಮಹೇಶ್ ಮತ್ತು ಇನ್ನೂ ಕೆಲವರು ಇದ್ದರು.
ನಾಳೆ (ಬುಧವಾರ) ರಾಯಚೂರಿನ ಮಾನ್ವಿಯ ಕರೆಗುಡ್ಡ ಊರಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಕಲ ತಯಾರಿಗಳನ್ನು ನಡೆಸಲಾಗಿದೆ.

ಜೂನ್ 21 ರಂದು ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆದಿತ್ತು, ಆ ಕಾರ್ಯಕ್ರಮಕ್ಕೆ ಸಹ ಕುಮಾರಸ್ವಾಮಿ ಅವರು ರೈಲಿನಲ್ಲಿಯೇ ಪ್ರಯಾಣ ಬೆಳೆಸಿದ್ದರು.

ಕುಮಾರಸ್ವಾಮಿ ಅವರು ನಾಳೆ ಬೆಳಿಗ್ಗೆ 5:30 ಸುಮಾರಿಗೆ ರಾಯಚೂರು ತಲುಪಲಿದ್ದಾರೆ. ಅಲ್ಲಿನ ಪ್ರವಾಸಿ ಮಂದಿರದಲ್ಲಿ ನಿತ್ಯಕರ್ಮಗಳನ್ನು ಸರ್ಕಾರಿ ಬಸ್ಸಿನಲ್ಲಿ ಮಾನ್ವಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಕರೆಗುಡ್ಡ ಗ್ರಾಮಕ್ಕೆ ಆಗಮಿಸಲಿದ್ದಾರೆ.

10 ಗಂಟೆ ಸುಮಾರಿಗೆ ಕರೆಗುಡ್ಡ ಸರ್ಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ಸಭೆ ಪ್ರಾರಂಭವಾಗಲಿದ್ದು, ಉದ್ಘಾಟನೆ ನಂತರ ಅವಹಾಲು ಸ್ವೀಕಾರ ಆರಂಭವಾಗಲಿದೆ. ಸಂಜೆ 6 ಗಂಟೆ ವರೆಗೆ ಅವಹಾಲು ಸ್ವೀಕಾರ ನಡೆಯಲಿದೆ.












Click it and Unblock the Notifications