ಸಂಕಷ್ಟದಲ್ಲೂ ನೀರಾವರಿ ಕುರಿತ ಸಭೆ ನಡೆಸಿದ ಸಿಎಂ ಕುಮಾರಸ್ವಾಮಿ
ಬೆಂಗಳೂರು, ಜುಲೈ 09: ರಾಜ್ಯ ಸರ್ಕಾರ ಪತನಗೊಳ್ಳುವ ಸಂಕಷ್ಟದಲ್ಲಿದೆ, ಆದರೆ ಸಿಎಂ ಕುಮಾರಸ್ವಾಮಿ ಅವರು ಒತ್ತಡದಲ್ಲಿಯೂ ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ನಿರ್ದೇಶಕ ಮಂಡಳಿ ಸಭೆ ನಡೆಸಿದರು, ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಸಹ ಭಾಗವಹಿಸಿದ್ದರು.
ಸಭೆಯ ಬಳಿಕ ಮಾತನಾಡಿದ ಶಿವಕುಮಾರ್ ಅವರು, ಕೆಲವು ನೀರಾವರಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ, ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.

ಸರ್ಕಾರ ಅಸ್ಥಿರಗೊಂಡು ಅಲುಗಾಡುತ್ತಿದ್ದರೂ ಸಹ ಕುಮಾರಸ್ವಾಮಿ ಅವರು ಅಧಿಕಾರಿಗಳ ಸಭೆಯನ್ನು ತಪ್ಪದೆ ಮಾಡುತ್ತಿದ್ದಾರೆ. ನಿನ್ನೆ ಸಹ ಅವರು ಕೆಲವು ಸಭೆಗಳನ್ನು ನಡೆಸಿದ್ದರು. ಸಚಿವ ರೇವಣ್ಣ ಸಹ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದ್ದರು.












Click it and Unblock the Notifications